ಇಸ್ಲಮಾಬಾದ್​:ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಮೀನುಗಾರನೊಬ್ಬನ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕಾಕಿನಾಡ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರರ ಬಲೆಗೆ ಅಪರೂಪದ “ಕಾಟ್ಚಿಲಿ ಫಿಶ್​” ಬಿದ್ದಿದೆ. ಇದನ್ನು ಕೊಳ್ಳಲು ಅನೇಕರು ಪೈಪೋಟಿಗೆ ಬಿದ್ದಿದ್ದು, ಕೊನೆಗೆ ಕಾಕಿನಾಡು ಬಂದರು ಏರಿಯಾದ ದಾರಕೊಂಡ ಎಂಬುವರು ಬರೋಬ್ಬರಿ 2.40 ಲಕ್ಷಕ್ಕೆ ಮೀನನ್ನು ಖರೀದಿಸಿದ್ದಾರೆ.
ಮೀನು ಜಾತಿಗಳಲ್ಲಿ ಕಾಟ್ಚಿಲಿ ಫಿಶ್​ ತುಂಬಾ ಅಪರೂಪದ ಮೀನು. ಈ ಮೀನಿನ ಹೊಟ್ಟೆಯ ಭಾಗಗಳನ್ನು ಔಷಧಿ ತಯಾರಿಸಲು ಬಳಸುತ್ತಾರೆ. ಹೀಗಾಗಿ ಇದಕ್ಕೆ ಬಾರಿ ಬೇಡಿಕೆ ಇದೆ. ಇದೀಗ ಕಾಟ್ಚಿಲಿ ಫಿಶ್​ ಹಿಡಿದಿರುವುದು ಪಶ್ಚಿಮ ಗೋದಾವರಿಯಲ್ಲಿ ಭಾರೀ ಸುದ್ದಿಯಾಗಿದೆ.(ಏಜೆನ್ಸೀಸ್​)
ಒಂದೇ ದಿನದಲ್ಲಿ 72 ಲಕ್ಷ ರೂ. ಒಡೆಯನಾದ ಮೀನುಗಾರ: ಈ ಮೀನಿನ ಬಗ್ಗೆ ಕೇಳಿದ್ರೆ ಹುಬ್ಬೇರಿಸ್ತೀರಾ!

ಬಿಗ್​ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ ಎಷ್ಟು ದಿನ? ಇಲ್ಲಿದೆ ಕುತೂಹಲಕರ ಮಾಹಿತಿ

ಮಗ ಎಂದುಕೊಂಡಿದ್ದವ ನನ್ನ ಚಿಕ್ಕಪ್ಪನಾದ! ಅಜ್ಜನ ಜತೆ ತನ್ನ ಗರ್ಲ್​ಫ್ರೆಂಡ್​ ಆಡುತ್ತಿದ್ದ ಆಟವನ್ನು ಬಿಚ್ಚಿಟ್ಟ ಯುವಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
