ಮನಂತವಾಡಿ:ಶಾಪಿಂಗ್​ ಕಾಂಪ್ಲೆಕ್ಸ್​ಗೆ ನುಗ್ಗಿದ ಖದೀಮನೊಬ್ಬ ಏನು ಸಿಗದೇ ಖಾಲಿ ಕೈಯಲ್ಲಿ ವಾಪಸ್​ ಬರುವಾಗ “ಹಣ ಇಲ್ಲಾ ಅಂದ್ರೆ ಬಾಗಿಲಿಗೆ ಬೀಗ ಯಾಕೆ ಹಾಕ್ತೀರಾ?” ಎಂಬ ಸೊಕ್ಕಿನ ಬರಹವುಳ್ಳ ಪತ್ರ ಬರೆದಿಟ್ಟಿರುವ ಪ್ರಸಂಗ ಕೇರಳದ ಕುಂಡಮಕುಲಂನಲ್ಲಿ ನಡೆದಿದ್ದು, ಖತರ್ನಾಕ್​ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.
ವಿಶ್ವರಾಜ್​ (40) ಬಂಧಿತ ಖದೀಮ. ಈತ ಪುಲ್​ಪಲ್ಲಿಯ ನಿವಾಸಿ. ಶಾಪಿಂಗ್​ ಕಾಂಪ್ಲೆಕ್ಸ್​ ನುಗ್ಗಿ ಕಳ್ಳತನ ಮಾಡಿದ ಬಳಿಕ ಆತ ಬರೆದಿಟ್ಟಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್​​ ಆಗುತ್ತಿದೆ.
ಕುಂಡಮಕುಲಂನ ಶಾಪಿಂಗ್​ ಕಾಂಪ್ಲೆಕ್ಸ್​ಗೆ ನುಗ್ಗಿದ ಖದೀಮ ಮೊದಲ ಅಂಗಡಿಯಲ್ಲಿ 12 ಸಾವಿರ ರೂ., ಎರಡನೇ ಅಂಗಡಿಯಲ್ಲಿ 500 ರೂ. ಕದ್ದಿದ್ದಾನೆ. ಇದಾದ ಬಳಿಕ ಮೂರನೇ ಅಂಗಡಿಗೆ ನುಗ್ಗಿದ ಖದೀಮ ಖಾಲಿ ಕೈಯಲ್ಲಿ ವಾಪಸ್​ ಬಂದಿದ್ದಾನೆ. ಹೀಗೆ ಬರುವಾಗ ಹಣ ಇಲ್ಲಾ ಅಂದ್ರೆ ಬಾಗಿಲು ಯಾಕೆ ಹಾಕ್ತೀರಾ? ಎಂದು ಪತ್ರ ಬರೆದಿಟ್ಟು ಬಂದಿದ್ದಾನೆ.
ಖದೀಮ ವಿಶ್ವರಾಜ್, ಈ ಹಿಂದೆ ಕಲ್ಪೆಟ್ಟಾದಲ್ಲಿ ಕಳ್ಳತನಕ್ಕೆ ಯತ್ನಿಸಿ ಬಂಧಿತನಾಗಿದ್ದ. ಈತ ಕೇರಳದ ವಿವಿಧ ಜಿಲ್ಲೆಗಳಲ್ಲಿ ಸುಮಾರು 53 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಕಲ್ಪೆಟ್ಟ, ಕೊಯಿಲಾಂಡಿ, ಫಾರೂಕ್, ಗುರುವಾಯೂರು, ಕಣ್ಣೂರು, ಕಾಸರಗೋಡು, ಬತ್ತೇರಿ ಸೇರಿದಂತೆ ಹಲವು ಕಡೆ ಪ್ರಕರಣಗಳಿವೆ.(ಏಜೆನ್ಸೀಸ್​)
80 ಲಕ್ಷ ರೂ. ಬಂಪರ್​ ಲಾಟರಿ ಹೊಡೆದ ಕೂಡಲೇ ಹೆದರಿ ಠಾಣೆಗೆ ಓಡಿದ ಕಾರ್ಮಿಕ: ಮುಂದಾಗಿದ್ದು ರೋಚಕ!

ಬೆಳಗಾವಿಯಲ್ಲಿ ದೇವಸ್ಥಾನ ಜಾಗದ ವಿಚಾರವಾಗಿ 2 ಗುಂಪಿನ ಮಧ್ಯೆ ಗಲಾಟೆ: ಓರ್ವ ಹತ್ಯೆ, ಇಡೀ ಊರಿಗೆ ಬೆಂಕಿ

ದಂತಕಥೆ ಎಂ.ರಘುಪತಿ ಇನ್ನಿಲ್ಲ; ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕಗಳ ಉಚಿತ ವಿತರಣೆ ರೂವಾರಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
