ಹೈದರಾಬಾದ್​:ಮಧ್ಯರಾತ್ರಿ ಗರ್ಲ್​ಫ್ರೆಂಡ್​ ಬೆಡ್​ರೂಮ್​ಗೆ ನುಗ್ಗಿದ ಯುವಕನೊಬ್ಬ ಆಕೆಯ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಲು ಯತ್ನಿಸಿದ ಘಟನೆ ಹೈದರಾಬಾದ್​ನ ಗಾಚಿಬೌಲಿ ಪೊಲೀಸ್​ ಠಾಣಾ ವ್ಯಾಪ್ತಿಯ ವಟ್ಟಿನಗುಪಲ್ಲಿಯಲ್ಲಿ ನಡೆದಿದೆ. ಯುವತಿ ಜೋರಾಗಿ ಕೂಗಿ ಕೊಳ್ಳುತ್ತಿದ್ದಂತೆ ಎಚ್ಚೆತ್ತ ಪಾಲಕರು ಆರೋಪಿ ಯುವಕನನ್ನು ಹಿಡಿದು, ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿ ಬಯಾನಾ ಪ್ರೇಮ್​ ಸಿಂಗ್​ (21) ಜೀಡಿಮೆಟ್ಲ ನಿವಾಸಿ. ಈತ ಕುಕಟಪಲ್ಲಿ ಹೌಸಿಂಗ್ ಬೋರ್ಡ್ ಕಾಲನಿ (ಕೆಪಿಬಿಎಚ್​)ಯ ಎಂಎನ್​ಆರ್​ ಪದವಿ ಕಾಲೇಜಿನ ವಿದ್ಯಾರ್ಥಿ. ರುಖಿ ಸಿಂಗ್​ (21) ಮಧುಫುರ್​ನ ವೆಂಕಟೇಶ್ವರ ಫೈನ್​ ಆರ್ಟ್ಸ್​ ಕಾಲೇಜಿನ ವಿದ್ಯಾರ್ಥಿನಿ. ಇಬ್ಬರು ಸಂಬಂಧಿಕರಾಗಿರುವುದರಿಂದ ಒಬ್ಬರಿಗೊಬ್ಬರು ಪರಿಯಸ್ಥರು.
ಬುಧವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ವಟ್ಟಿನಗುಲಪಲ್ಲಿಯಲ್ಲಿರುವ ರುಖಿ ಸಿಂಗ್​ ಮನೆಗೆ ತೆರಳಿದ ಪ್ರೇಮ್​ ಸಿಂಗ್​, ಆಕೆಯ ಬೆಡ್​ ರೂಮ್​ ಬಾಗಿಲನ್ನು ಬಡಿಯುತ್ತಾನೆ. ಆಕೆ ಬಾಗಿಲು ತೆಗೆಯುತ್ತಿದ್ದಂತೆ ಆಕೆಯ ಗಂಟಲನ್ನು ಸೀಳಲು ಆರೋಪಿ ಯತ್ನಿಸಿದ್ದಾನೆ. ಇದರಿಂದ ಆತಂಕಕ್ಕೆ ಒಳಗಾಗುವ ರುಖಿ ಸಿಂಗ್​ ಜೋರಾಗಿ ಕೂಗುತ್ತಾಳೆ. ತಕ್ಷಣ ಎಚ್ಚರಗೊಳ್ಳುವ ಕುಟುಂಬಸ್ಥರು ಆರೋಪಿಯನ್ನು ಹಿಡಿದು, ಚೆನ್ನಾಗಿ ಥಳಿಸಿ ಪೊಲೀಸರಿಗೆ ಒಪ್ಪಿಸುತ್ತಾರೆ.
ಇತ್ತ ಚಾಕು ದಾಳಿಯಿಂದ ಗಂಟಲು, ಅಂಗೈ, ಕಾಲು ಮತ್ತು ಮೊಣಕೈನಲ್ಲಿ ಗಾಯಗೊಂಡಿದ್ದ ರುಖಿ ಸಿಂಗ್​ಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣ ಸಂಬಂಧ ಗಾಚಿಬೌಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪ್ರೇಮ್​ ಸಿಂಗ್​ ಗಾಂಜಾ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.(ಏಜೆನ್ಸೀಸ್​)
ದಕ್ಷಿಣ ಭಾರತದ ಚಿತ್ರಗಳಲ್ಲಿ ಈವರೆಗೂ ನಟಿಸದಿರಲು ಜಾಹ್ನವಿ ಕಪೂರ್​ ಕೊಟ್ಟ ಕಾರಣ ಹೀಗಿದೆ..!

ಈ ಇಟಲಿಯವಳ ಕಾಟ ತಾಳಲಾರೆ, ಪ್ಲೀಸ್‌ ನನ್ನನ್ನು ಅರೆಸ್ಟ್‌ ಮಾಡಿ ಜೈಲಿಗೆ ದಬ್ಬಿಬಿಡಿ ಎಂದು ಅಂಗಲಾಚಿದ ಪತಿ!

ಪಾಕ್​ ಪರ ಘೋಷಣೆ: ಆಗ್ರಾ ಪೊಲೀಸರಿಂದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಬಂಧನ

ಬೇರೆ ಕೇಸ್‌ನಲ್ಲಿ ಬೇಕಾದವ ಆರ್ಯನ್‌ ಜತೆ ಸೆಲ್ಫಿ ಕ್ಲಿಕ್ಕಿಸಿ ಸಿಕ್ಕಿಬಿದ್ದ! ಮರಾಠಿಗನಿಗೆ ಹೆಲ್ಪ್‌ ಮಾಡಿ ಎಂದು ಗೋಗರೆದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 5 =
Remember me
