ಪತ್ತನಂತಿಟ್ಟ:ಕೆಎಸ್​ಆರ್​ಟಿಸಿ ಸೂಪರ್​ ಡಿಲಕ್ಸ್​ ಬಸ್ಸಿನೊಳಗೆ ಪ್ರಯಾಣಿಕರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಆರೋಪದ ಮೇಲೆ ಚಾಲಕನ ವಿರುದ್ಧ ದೂರು ದಾಖಲಾಗಿದೆ.
ಈ ಘಟನೆ ಶನಿವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಪತ್ತನಂತಿಟ್ಟ ಡಿಪೋದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸೂಪರ್​ ಡೀಲಕ್ಸ್​ ಬಸ್ಸಿನಲ್ಲಿ ನಡೆದಿದೆ ಎನ್ನಲಾಗಿದೆ. ಸಂತ್ರಸ್ತೆ ವಿದ್ಯಾರ್ಥಿನಿಯಾಗಿದ್ದು, ಆಕೆ ಬೆಂಗಳೂರಿನ ಖಾಯಂ ನಿವಾಸಿ. ಈಮೇಲ್​ ಮೂಲಕ ವಿದ್ಯಾರ್ಥಿನಿ ಕೇರಳ ಪೊಲೀಸರಿಗೆ ದೂರು ನೀಡಿದ್ದಾಳೆ.
ಸಂತ್ರಸ್ತ ವಿದ್ಯಾರ್ಥಿನಿ ಕಿಟಕಿ ಬಾಗಿಲು ತೆರೆಯಲು ಚಾಲಕನ ಸಹಾಯ ಕೋರಿದಾಗ ಈ ಘಟನೆ ನಡೆದಿದೆ. ಕಿಟಕಿ ತೆಗೆಯುವ ನೆಪದಲ್ಲಿ ಚಾಲಕ ಎಲ್ಲೆಲ್ಲೂ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸುವುದನ್ನು ನೋಡಿ ವಿದ್ಯಾರ್ಥಿನಿ ಗಾಬರಿಯಾಗಿದ್ದಾಳೆ. ಆಕೆ ಆ ಸಮಯದಲ್ಲಿ ಅಸಹಾಯಕಳಾಗಿದ್ದು, ಚಾಲಕನ ವರ್ತನೆಗೆ ವಿರುದ್ಧವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ.
ಇದೀಗ ಚಾಲಕ ಶಾಜಹನ್​ ವಿರುದ್ಧ ದೂರು ದಾಖಲಾಗಿದ್ದು, ವಿಜಿಲೆನ್ಸ್​ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ. ಕೃಷ್ಣಗಿರಿ ಸಮೀಪದಲ್ಲಿ ಶನಿವಾರ ಘಟನೆ ನಡೆಯಿತು ಎಂದು ಸಂತ್ರಸ್ತೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ.(ಏಜೆನ್ಸೀಸ್​)
ಅಲ್ಲು ಅರ್ಜುನ್​ ಭವಿಷ್ಯದ ಯೋಜನೆಯನ್ನೇ ಬದಲಿಸಿದ ಕೆಜಿಎಫ್-2 ಗೆಲುವು! ಬನ್ನಿ ಪ್ಲಾನ್​ ಕೇಳಿದ್ರೆ ಫ್ಯಾನ್ಸ್​ ಥ್ರಿಲ್​

ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಜಮೀನಿಗೆ ತೆರಳುತ್ತಿದ್ದ ಇಬ್ಬರು ರೈತರು-ಹಸು ಸ್ಥಳದಲ್ಲೇ ಸಾವು

ಅತಿ ಹೆಚ್ಚು ಗಳಿಕೆ ಮಾಡಿದ ದಕ್ಷಿಣ ಭಾರತ ಸಿನಿಮಾಗಳ ಪಟ್ಟಿ ಹೀಗಿದೆ… ಕೆಜಿಎಫ್​-2 ಎಷ್ಟನೇ ಸ್ಥಾನದಲ್ಲಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − five =
Remember me
