ತಿರುವನಂತಪುರಂ:ಚಲಿಸುತ್ತಿದ್ದ ಬೈಕ್​ ಮುಂದೆ ಬೀದಿ ನಾಯಿಯೊಂದು ದಿಢೀರ್​ ಜಿಗಿದ ಪರಿಣಾಮ ಬೈಕ್​ ನಿಯಂತ್ರಣ ಕಳೆದುಕೊಂಡು ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಕೇರಳ ರಾಜಧಾನಿ ತಿರುವನಂತಪುರದಲ್ಲಿ ನಡೆದಿದೆ.
ಶುಕ್ರವಾರ ಸಂಜೆ 6 ಗಂಟೆಗೆ ಅರುವಿಯೋಡು ಜಂಕ್ಷನ್​ ಬಳಿ ಅಪಘಾತ ಸಂಭವಿಸಿತ್ತು. ಬಳಿಕ ಯುವಕನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ (ಸೆ.14) ಕೊನೆಯುಸಿರೆಳೆದಿದ್ದಾನೆ.
ಮೃತ ಯುವಕನನ್ನು ಅಜಿನ್​ ಎ.ಎಸ್. ಎಂದು ಗುರುತಿಸಲಾಗಿದೆ.​ ಅಜಿನ್​ ಬೈಕ್​ ಮುಂದೆ ಇನ್ನೊಂದು ಬೈಕ್​ ಹೋಗುತ್ತಿತ್ತು. ಈ ವೇಳೆ ಬೀದಿ ನಾಯಿಯೊಂದು ಬೈಕ್​ ಮುಂದೆ ದಿಢೀರ್​ ಜಿಗಿಯಿತು. ಪರಿಣಾಮ ಬೈಕ್​ ನಿಯಂತ್ರಣ ಕಳೆದುಕೊಂಡು ಸವಾರ ಬೈಕ್​ ಸಮೇತ ಕೆಳಗೆ ಬಿದ್ದಿದ್ದಾನೆ. ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಅಜಿನ್​ ಕೆಳಗಡೆ ಬಿದ್ದಿದ್ದ ಬೈಕ್​ಗೆ ಡಿಕ್ಕಿ ಹೊಡೆದು ತಾನು ಬೈಕ್​ ಸಮೇತ ಕೆಳಗೆ ಹಾರಿ ಬಿದ್ದಿದ್ದ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಜೀನ್​ನನ್ನು ಕಾರಕೊಣಂ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಜಿನ್​ಗೆ ಸರ್ಜರಿ ಮಾಡಿದರೂ ಕೊನೆಗೆ ಬದುಕುಳಿಯಲಿಲ್ಲ. ಅಜಿನ್​ಗೆ ಮದುವೆ ಕೂಡ ಆಗಿತ್ತು. ಪತ್ನಿ ನೀತು ಮತ್ತು ಮಗಳು ಯುವನಾಳನ್ನು ಬಿಟ್ಟು ಅಜಿನ್​ ಅಕಾಲಿಕವಾಗಿ ಅಗಲಿದ್ದಾರೆ.
ಈ ನಡುವೆ ತಿರುವನಂತಪುರದಲ್ಲಿ ಮತ್ತೊಂದು ಬೀದಿನಾಯಿ ದಾಳಿ ವರದಿಯಾಗಿದೆ. ನ್ಯಾಷನಲ್ ಕ್ಲಬ್​ನ ಉದ್ಯೋಗಿ ಶ್ರೀನಿವಾಸನ್, ಬೀದಿ ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳವಾರ (ಸೆ.13) ರಾತ್ರಿ 10:30 ರ ಸುಮಾರಿಗೆ ಒಟ್ಟುಕುಜಿಯಲ್ಲಿ ಈ ಘಟನೆ ನಡೆದಿದೆ. ಹಿಂಬದಿ ಸವಾರ ಶ್ರೀನಿವಾಸನ್ ಅವರಿಗೆ ನಾಯಿ ಕಚ್ಚಿದೆ. ಅವರಿಗೆ ಆಳವಾದ ಗಾಯಗಳಾಗಿವೆ. ಶ್ರೀನಿವಾಸನ್ ಅವರನ್ನು ಮೊದಲು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು ಮತ್ತು ನಂತರ ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.(ಏಜೆನ್ಸೀಸ್​)
ಬಾಲಿವುಡ್​ನ ಸ್ಟಾರ್​ ನಟಿಯ​ ಸಹೋದರನ ಜೊತೆ ಹಸೆಮಣೆ ಏರಲು ಸಜ್ಜಾದ ಸೌತ್​ ಬ್ಯೂಟಿ ಇಲಿಯಾನಾ!

ಅಲಯನ್ಸ್ ವಿವಿ ಆಸ್ತಿ ಮಾರಾಟಕ್ಕೆ ಯತ್ನಿಸಿ ಗಲಾಟೆ? FIR ದಾಖಲಾಗ್ತಿದ್ದಂತೆ ನಟಿ ಶ್ರೀಲೀಲಾ ತಾಯಿ ಎಸ್ಕೇಪ್​

ವಿರಾಮದ ವೇಳೆ ಜವರಾಯನ ಅಟ್ಟಹಾಸ: ಮಂಗಳೂರು ಮೂಲದ ಮಲಯಾಳಿ ವೈದ್ಯೆ ಪುಣೆಯಲ್ಲಿ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
