ಕೊಚ್ಚಿ:ಪ್ರೀತಿಯ ನಾಟಕವಾಡಿ, ಯುವಕನೊಬ್ಬನನ್ನು ಲಾಡ್ಜ್​ಗೆ ಕರೆಸಿಕೊಂಡು, ತನ್ನ ಮೂವರು ಪರಿಚಿತರೊಂದಿಗೆ ಸೇರಿ, ಯುವಕನ ಮೊಬೈಲ್​​ ಫೋನ್​, ಹಣ ಮತ್ತು ಒಡವೆಯನ್ನು ದೋಚಿದ್ದ ಖತರ್ನಾಕ್​ ಮಹಿಳೆಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಹಸೀನಾ (28), ಆಕೆಯ ಪತಿ ಜೆ. ಜಿತಿನ್ (28), ಎಸ್​. ಅನ್ಶದ್​ (26) ಎಂದು ಗುರುತಿಸಲಾಗಿದೆ. ಈ ಮೂವರು ಉಮಯನಲ್ಲೂರು ಮೂಲದವರು. ಇನ್ನೊರ್ವ ಕೊಲ್ಲಂ ಮೂಲದ ಆರೋಪಿ ಅನಾಸ್, ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. ​​
ವಿವರಣೆಗೆ ಬರುವುದಾದರೆ, 34 ವರ್ಷದ ಸಂತ್ರಸ್ತ ಯುವಕ ಕೊಟ್ಟಾಯಂನ ವೈಕ್ಕೊಮ್​ ನಿವಾಸಿ. ಸಂತ್ರಸ್ತನಿಗೆ ಆರೋಪಿ ಹಸೀನಾ ಸಾಮಾಜಿಕ ಜಾಲತಾಣ ಮೂಲಕ ಪರಿಚಯವಾಗಿದ್ದಳು. ಇಬ್ಬರು ನಿರಂತರವಾಗಿ ಮಾತನಾಡುತ್ತಾ ತುಂಬಾ ಹತ್ತಿರವಾಗಿದ್ದರು. ಇದೇ ಸಲುಗೆಯಲ್ಲಿ ಹಸೀನಾ, ಯುವಕನನ್ನು ಎರ್ನಾಕುಲಂ ಜನರಲ್​ ಹಾಸ್ಪಿಟಲ್​ ಬಳಿಯಿರುವ ಲಾಡ್ಜ್​ಗೆ ಆಗಸ್ಟ್ 8ರಂದು ಕರೆದಿದ್ದಳು. ಆಕೆಯ ಮಾತು ನಂಬಿದ ಯುವಕ ಅಂದು ಲಾಡ್ಜ್​ನ ರೂಮ್​ ನಂಬರ್​ 205ಕ್ಕೆ ತೆರಳಿದ್ದ. ಕೊಠಡಿಯ ಒಳಗೆ ಹೋಗುತ್ತಿದ್ದಂತೆ ಹಸೀನಾ ಮತ್ತು ಇತರೆ ಮೂವರು ಆರೋಪಿಗಳು ಯುವಕನನ್ನು ಹಿಡಿದುಕೊಂಡು ಕುರ್ಚಿಗೆ ಕಟ್ಟಿಹಾಕಿದರು. ಬಾಯಿಗೆ ಬಟ್ಟೆ ತುರುಕಿ ಅಮಾನವೀಯವಾಗಿ ಹಲ್ಲೆ ಮಾಡಿದರು. ಬಳಿಕ ಯುವಕನ ಕತ್ತಿನಲ್ಲಿ ಚಿನ್ನದ ಸರ, ಬ್ರೇಸ್​ಲೆಟ್​, ರಿಂಗ್​ ಮತ್ತು 20 ಸಾವಿರ ರೂ. ಬೆಲೆ ಬಾಳುವ ಮೊಬೈಲ್​ ಫೋನ್​ ಮತ್ತು ಪಾಕೆಟ್​ನಲ್ಲಿದ್ದ 5 ಸಾವಿರ ರೂ. ನಗದು ದೋಚಿದ್ದರು. ಇಷ್ಟೇ ಅಲ್ಲದೆ, ಆತನ ಫೋನ್​ ಬಳಸಿಕೊಂಡು ಬಲವಂತವಾಗಿ ಆತನ ಬ್ಯಾಂಕ್​ ಖಾತೆಯಿಂದ 15 ಸಾವಿರ ರೂಪಾಯಿ ಹಣವನ್ನು ತಮ್ಮ ಬ್ಯಾಂಕ್​ ಖಾತೆಗೆ ವರ್ಗಾಯಿಸಿಕೊಂಡು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ಹಲ್ಲೆಯಿಂದಾಗಿ ಯುವಕನ ಮೈಮೇಲೆ ತುಂಬಾ ಗಾಯಗಳಾಗಿತ್ತು. ಬಳಿಕ ಚಿಕಿತ್ಸೆ ಪಡೆದುಕೊಂಡು, ಆಗಸ್ಟ್ 13 ರಂದು ಎರ್ನಾಕುಲಂ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಡ್ಜ್‌ನಲ್ಲಿರುವ ಸಿಸಿಟಿವಿ ದೃಶ್ಯಗಳು ಮತ್ತು ಹಣ ವರ್ಗಾವಣೆಯಾಗಿರುವ ಖಾತೆಯ ಮೂಲಕ ಆರೋಪಿಗಳ ಸುಳಿವು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.(ಏಜೆನ್ಸೀಸ್​)
ಬಳ್ಳಾರಿಯಲ್ಲಿ ಭೀಕರ ಅಪಘಾತ, ಪತಿ-ಪತ್ನಿ-ಮಗು ಸ್ಥಳದಲ್ಲೇ ಸಾವು: ಪತ್ನಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯುವಾಗ ದುರಂತ

ಮೇಕೆ ತಂದಿಟ್ಟ ಸಂಕಷ್ಟ: ರಾತ್ರಿ ಸುಂದರ ಕನಸು ಕಂಡ, ಬೆಳಗ್ಗೆ ಮರ್ಮಾಂಗವೇ ಕಟ್​- ಆಗಿದ್ದೇನು ನೋಡಿ..

ಪತ್ನಿಯ ತಲೆಯನ್ನು ಗೋಡೆಗೆ ಗುದ್ದಿ, ಮೈಯೆಲ್ಲ ಕಚ್ಚಿ, ಮೃಗದಂತೆ ವರ್ತಿಸಿದ ಪೊಲೀಸ್​ ಅಧಿಕಾರಿ ಅಮಾನತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + seven =
Remember me
