ತಿರುವನಂತಪುರಂ:ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಹಳೆಯ ಫೋನ್​ಗಳನ್ನು ಸೋಮವಾರ ಬೆಳಗ್ಗೆ 10.15ರ ಒಳಗೆ ರಿಜಿಸ್ಟ್ರಾರ್​ ಮುಂದೆ ಸಲ್ಲಿಸುವಂತೆ ಖ್ಯಾತ ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮಲಯಾಳಂ ನಟ ದಿಲೀಪ್​ಗೆ ಕೇರಳ ಹೈಕೋರ್ಟ್​ ಆದೇಶಿಸಿದೆ. ಇಲ್ಲಿಯವರೆಗೆ ಫೋನ್​ ಕೊಡದೇ ಆಟವಾಡಿಸುತ್ತಿದ್ದ ದಿಲೀಪ್​ ಕೋರ್ಟ್​ ಇದೀಗ ಶಾಕ್​ ನೀಡಿದೆ.
ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್​ ಅಧಿಕಾರಿಗಳನ್ನು ಕೊಲೆ ಮಾಡಿಸಲು ಸಂಚು ರೂಪಿಸಿದ ಅರೋಪವೂ ಕೂಡ ದಿಲೀಪ್​ ಸೇರಿದಂತೆ ಇತರೆ ಐವರು ಆರೋಪಿಗಳ ಮೇಲಿದೆ. ಈ ಬಗ್ಗೆ ಹೊಸ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆರೋಪಿ ದಿಲೀಪ್ ಸೇರಿದಂತೆ ಎಲ್ಲ ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಹಳೆಯ ಫೋನ್​ಗಳನ್ನು ಸಲ್ಲಿಸುವಂತೆ ಕೇಳಿದ್ದರು. ಆದರೆ, ಆರೋಪಿಗಳು ಅದನ್ನು ನಿರಾಕರಿಸಿ ಕೋರ್ಟ್​ ಮೆಟ್ಟಿಲೇರಿದ್ದರು. ಅಲ್ಲದೆ, ನಿರೀಕ್ಷಣಾ ಜಾಮೀನು ಕೋರಿದ್ದಾರೆ.
ಜಾಮೀನು ಸಂಬಂಧ ಹೈಕೋರ್ಟ್​ ಇಂದು ವಿಚಾರಣೆ ನಡೆಸಿತು. ಈ ವೇಳೆ ತನಿಖಾಧಿಕಾರಿಗಳ ಪರ ವಕೀಲರು ನಟ ದಿಲೀಪ್​ ಅವರ ಹಳೆಯ ಫೋನ್​ಗಳನ್ನು ಹಸ್ತಾಂತರಿಸಲು ಒತ್ತಾಯಿಸಿದರು. ಆದರೆ, ದಿಲೀಪ್​ ಹಸ್ತಾಂತರಿಸಲು ನಿರಾಕರಿಸಿದರು. ಅಲ್ಲದೆ, ಒಂದು ವೇಳೆ ಹಸ್ತಾಂತರ ಮಾಡಿದರೆ, ಫೋನ್​ನಲ್ಲಿ ಏನಿದೆಯೋ ಅದನ್ನು ಇಟ್ಟುಕೊಂಡು ಸುಳ್ಳು ಕತೆಯನ್ನು ಸೃಷ್ಟಿ ಮಾಡುತ್ತಾರೆ ಎಂದು ಸಮಜಾಯಿಷಿ ನೀಡಿದ್ದಾರೆ. ಇದಲ್ಲದೆ, ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿ ತನಿಖಾಧಿಕಾರಿ ಬೈಜು ಪೌಲೋಸ್ ಮತ್ತು ಬಾಲಚಂದ್ರಕುಮಾರ್ ಅವರ ಫೋನ್‌ಗಳನ್ನು ಪರಿಶೀಲಿಸುವಂತೆ ದಿಲೀಪ್​ ನ್ಯಾಯಾಲಯವನ್ನು ಒತ್ತಾಯಿಸಿದರು.
ಈಗಾಗಲೇ ದಿಲೀಪ್​ ವಿಧಿವಿಜ್ಞಾನ ಪರೀಕ್ಷೆಗಾಗಿ ಹೊಸ ಫೋನ್​ನನ್ನು ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಆದರೆ, ತನಿಖಾಧಿಕಾರಿಗಳ ಪ್ರಕಾರ ಹಳೆಯ ಫೋನ್​ನಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ತನಿಖಾಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳಿವೆ ಎಂದು ಹೇಳಲಾಗಿದೆ.
ಕೊಲೆಗೆ ಸಂಚು ಪ್ರಕರಣವನ್ನು ದಾಖಲಿಸಿದ ಬೆನ್ನಲ್ಲೇ ದಿಲೀಪ್​ ಸೇರಿದಂತೆ ಇತರೆ ಆರೋಪಿಗಳು ತಮ್ಮ ತಮ್ಮ ಫೋನ್​ಗಳನ್ನು ಬದಲಾಯಿಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಹಳೆಯ ಫೋನ್​ ಅಗತ್ಯವನ್ನು ನ್ಯಾಯಾಲಯಕ್ಕೆ ತನಿಖಾಧಿಕಾರಿಗಳು ಮನವರಿ ಮಾಡಿಕೊಟ್ಟಿದ್ದು, ಸೋಮವಾರ ಬೆಳಗ್ಗೆ 10.15ರ ಒಳಗೆ ಫೋನ್​ಗಳನ್ನು ಸಲ್ಲಿಸುವಂತೆ ಆದೇಶಿಸಿರುವ ನ್ಯಾಯಾಲಯ ಅಲ್ಲಿಯವರೆಗೂ ದಿಲೀಪ್​ ಅವರನ್ನು ಬಂಧಿಸಿದಂತೆ ಪೊಲೀಸರಿಗೆ ಸೂಚಿಸಿ, ವಿಚಾರಣೆ ಮುಂದೂಡಿದೆ.
ದೌರ್ಜನ್ಯಕ್ಕೆ ಒಳಗಾದ ನಟಿ ಸಾಮಾನ್ಯ ನಟಿಯೇನಲ್ಲ. ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ಸಾಕಷ್ಟು ಸಿನಿಮಾ ಮಾಡಿರುವ ಬಹುಭಾಷಾ ನಟಿ. ಐದು ವರ್ಷಗಳ ಹಿಂದೆ ಶೂಟಿಂಗ್​ ಮುಗಿಸಿ ಕಾರಿನಲ್ಲಿ ಹಿಂದಿರುಗುವಾಗ ಕಿಡಿಗೇಡಿಗಳ ಗುಂಪೊಂದು ಅವರನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಹೇಳಲಾಗಿದೆ. ಇದೇ ಪ್ರಕರಣದಲ್ಲಿ ತದನಂತರದಲ್ಲಿ ಮಲಯಾಳಂ ನಟ ದಿಲೀಪ್​ರನ್ನು ಬಂಧಿಸಲಾಗಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಡೆ ಇದ್ದು, ಇದೀಗ ಈ ತನಿಖಾಧಿಕಾರಿಗಳ ಕೊಲೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಮತ್ತಷ್ಟು ಸ್ಫೋಟಕ ಸಂಗತಿಗಳು ಹೊರಬರುತ್ತಿವೆ.(ಏಜೆನ್ಸೀಸ್​)
ನಿಮ್ಮ ವಿಡಿಯೋ ಕಳುಹಿಸಿ ಎಂದ ನೆಟ್ಟಿಗನಿಗೆ ನಟಿ ಯಶಿಕಾ ಆನಂದ್​ ಕೊಟ್ಟ ಉತ್ತರ ಹೀಗಿತ್ತು…

ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್​: ಹಳೇ ಫೋನ್​ ಕೊಡಲು ಒಪ್ಪದ ನಟ ದಿಲೀಪ್, ಅಂಥದ್ದೇನಿದೆ ಅದರಲ್ಲಿ?

ಮೈಸೂರು ಅಭಿವೃದ್ಧಿ ಮಾಡಿದ್ದು ನಾನು.. ನಾನು.. ಮಹಾರಾಜರನ್ನು ಬಿಟ್ಟರೆ ನೆಕ್ಟ್ ನಾನೇ… ಎಂದ ಪ್ರತಾಪ್​ ಸಿಂಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
