ಚೆನ್ನೈ:ನಟಿ ನಿಕ್ಕಿ ಗಲ್ರಾನಿ ಅವರ ಚೆನ್ನೈನ ರಾಯಪೇಟ್​ ನಿವಾಸದಲ್ಲಿ ಕಳ್ಳತನ ನಡೆದಿದ್ದು, ನಟಿ ನೀಡಿದ ದೂರಿನ ಮೇರೆಗೆ ಆರೋಪಿ ಮನೆಗೆಲಸದವನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು 19 ವರ್ಷದ ಧನುಷ್​ ಎಂದು ಗುರುತಿಸಲಾಗಿದೆ. ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ನಟಿ ನಿಕ್ಕಿ ಗಲ್ರಾನಿ ದೂರು ದಾಖಲಿಸಿದ್ದಾರೆ. ಆರೋಪಿ ಧನುಷ್​ನನ್ನು ತ್ರಿಪುರಾದಲ್ಲಿರುವ ಆತನ ಸ್ನೇಹಿತನ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.
ನಿಕ್ಕಿ ಗಲ್ರಾನಿ ಮನೆಯಿಂದ ಕದ್ದಿದ್ದ ವಸ್ತುಗಳು ಮತ್ತು ದುಬಾರಿ ಬಟ್ಟೆಗಳನ್ನು ಆರೋಪಿಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಇತರರು ಭಾಗಿಯಾಗಿರುv ಸಂಶಯ ವ್ಯಕ್ತವಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಡ್ಡಲೂರು ಜಿಲ್ಲೆಯ ವಿರುದಾಚಲಂ ಮೂಲದ ಧನುಷ್​ 5 ತಿಂಗಳ ಹಿಂದಷ್ಟೇ ನಿಕ್ಕಿ ಗಲ್ರಾನಿ ನಿವಾಸದಲ್ಲಿ ಕೆಲಸಕ್ಕೆ ಸೇರಿದ್ದ.
ಜನವರಿ 11ರಂದು ಒಂದು ಮೂಟೆಯೊಂದಿಗೆ ಧನುಷ್​ ಮನೆ ಬಿಟ್ಟು ಹೋಗುವುದನ್ನು ನಿಕ್ಕಿ ನೋಡಿದ್ದಾರೆ. ಈ ವೇಳೆ ಆತನನ್ನು ಹಿಂಬಾಲಿಸಿ ಹಿಡಿಯಲು ಯತ್ನಿಸಿದ್ದಾರೆ. ಆದರೆ, ಆತ ಸಿಗದೇ ಇದ್ದಾಗ ಮನೆಗೆ ಹಿಂತಿರುಗಿ ನೋಡಿದಾಗ 40 ಸಾವಿರ ಬೆಲೆ ಬಾಳುವ ಕ್ಯಾಮೆರಾ ಮತ್ತು ಕೆಲವು ದುಬಾರಿ ಬಟ್ಟೆಗಳು, ಅದರಲ್ಲೂ ತಮಗೆ ತುಂಬಾ ಇಷ್ಟವಾದ ಬಟ್ಟೆಗಳನ್ನು ಧನುಷ್​ ದೋಚಿಕೊಂಡು ಹೋಗಿರುವುದು ಗೊತ್ತಾಗಿದೆ. ಅಂದೇ ಪೊಲೀಸ್​ ಠಾಣೆಗೆ ತೆರಳಿ ನಿಕ್ಕಿ ದೂರು ನೀಡಿದ್ದರು. ಬಳಿಕ ಆರೋಪಿ ಧನುಷ್​ನನ್ನು ನಿನ್ನೆ ಆತನ ಸ್ನೇಹಿತನ ಮನೆಯಲ್ಲಿ ಬಂಧಿಸಲಾಗಿದ್ದು, ಕಳುವಾಗಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಿಕ್ಕಿ ಗಲ್ರಾನಿ ಅವರಿಗೆ ತುಂಬಾ ಬೇಡಿಕೆ ಇದೆ. ವೆಲ್ಲಿಮೂಂಗಾ ಚಿತ್ರದಲ್ಲಿ ನಟಿಸಿದ ಬಳಿಕ ಮಲಯಾಳಂನಲ್ಲಿ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ತಮಿಳು ಚಿತ್ರರಂದಲ್ಲಿ ಹೆಚ್ಚು ಸಕ್ರೀಯರಾಗಿರುವ ನಿಕ್ಕಿ, ಕನ್ನಡದಲ್ಲೂ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ನಿಕ್ಕಿ ಕನ್ನಡದವರು. ನಟಿ ಸಂಜನಾ ಗಲ್ರಾನಿ ಅವರ ಸಹೋದರಿ. ಆದರೆ, ಕನ್ನಡ ಚಿತ್ರರಂಗದಲ್ಲಿ ಅವಕಾಶ ಇಲ್ಲದಿರುವುದರಿಂದ ತಮಿಳು ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ.(ಏಜೆನ್ಸೀಸ್​)
ನಾನು ನಿಮ್ಮ ಫ್ಯಾನ್​ ಅಂದ್ಕೊಂಡು ಬಂದ ಮಹಿಳೆಗೆ ಖ್ಯಾತ ಯೂಟ್ಯೂಬರ್​ ಕೊಟ್ಟಿದ್ದು ಬಿಗ್​ ಶಾಕ್​!

ಎಂಟು ಚಿತ್ರಗಳು ಬಿಡುಗಡೆಗೆ ಸಿದ್ಧ; ರಾಕುಲ್​ಗೆ 2022 ನಿರ್ಣಾಯಕ ವರ್ಷ

ಮದ್ವೆಗೆ ಬಟ್ಟೆ ಖರೀದಿಸಲು ಹೋಗಿದ್ದ ಸಹೋದರರಿಬ್ಬರಲ್ಲಿ ತಮ್ಮ ಶವವಾಗಿ ಪತ್ತೆ, ಅಣ್ಣ ನಾಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + fifteen =
Remember me
