ವಿಜಯವಾಡ:ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟಿಕ್​ಟಾಕ್​ ಖ್ಯಾತಿಯ ಫನ್​ ಬಕೆಟ್​ ಭಾರ್ಗವ ಬಂಧನವಾದ ಬೆನ್ನಲ್ಲೇ ಆತನೊಂದಿಗೆ ಹೆಚ್ಚು ಟಿಕ್​ಟಾಕ್​ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದ “ಓ ಮೈ ಗಾಡ್”​ ಎಂಬ ಡೈಲಾಗ್​ನಿಂದಲೇ ಹೆಚ್ಚು ಪರಿಚಿತಳಾಗಿದ್ದ ಟಿಕ್​ಟಾಕ್​ ಸ್ಟಾರ್​ ನಿತ್ಯಾ ಪ್ರಕರಣ ಸಂಬಂಧ ಸ್ಪಷ್ಟನೆ ನೀಡಿದ್ದಾರೆ.
15 ವರ್ಷದ ನಿತ್ಯಾಳನ್ನು ಪ್ರಕರಣದ ಸಂತ್ರಸ್ತೆ ಎಂದು ಸಾಕಷ್ಟು ಮೆಸೇಜ್​ಗಳು ಹರಿದಾಡುತ್ತಿರುವ ಬೆನ್ನಲ್ಲೇ ನಿತ್ಯಾ ಈ ಸಂಬಂಧ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಭಾರ್ಗವ ಮೇಲಿನ ಆರೋಪದ ಬಗ್ಗೆ ಸಾಮಾಜಿಕ ಜಾಲತಾಣ ಮೂಲಕವೇ ನನಗೂ ತಿಳಿಯಿತು. ಆದರೆ, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಭಾರ್ಗವ ಬಂಧನ ಆಗಿರುವುದು ನಿಜ. ಆದರೆ, ಪ್ರಕರಣದಲ್ಲಿ ಯಾವುದೇ ವಿಧದಲ್ಲೂ ನನಗೆ ಸಂಬಂಧ ಇಲ್ಲ. ನನ್ನ ಫಾಲೋವರ್ಸ್​ ನಿರಂತರವಾಗಿ ಮೆಸೇಜ್​ ಮಾಡುತ್ತಿದ್ದಾರೆ. ಏನಾಯಿತು ಎಂದು ಕೇಳುತ್ತಿದ್ದಾರೆ. ಹೀಗಾಗಿ ನಾನು ಸ್ಪಷ್ಟನೆ ನೀಡುತ್ತಿದ್ದೇನೆಂದು ನಿತ್ಯಾ ಹೇಳಿದ್ದಾರೆ.
ಮೀಮ್ಸ್​ ಸೃಷ್ಟಿಕರ್ತರು ಮತ್ತು ಯೂಟ್ಯೂಬರ್ಸ್​ ಹಾಗೂ ಟ್ರೋಲಿಗರು ನನ್ನ ಹೆಸರನ್ನು ಥಳುಕು ಹಾಕಿದ್ದಾರೆ. ಸತ್ಯ ಏನೆಂದು ತಿಳಿಯದೇ ಈ ರೀತಿ ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಮಾಡಿರದಿದ್ದರೆ ಅಂತಹ ವಿಡಿಯೋಗಳನ್ನು ನೀವು ಡಿಲೀಟ್​ ಮಾಡುತ್ತೀರಾ ಎಂದು ನಾನು ಭಾವಿಸಿದ್ದೇನೆ. ಹೀಗಾಗಿ ಪ್ರಸ್ತುತ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ನಾನು ಮಗದೊಮ್ಮೆ ಸ್ಪಷ್ಟನೆ ನೀಡುತ್ತೇನೆಂದರು.
ಇದನ್ನೂ ಓದಿರಿ:ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಆರೋಪ: ಟಿಕ್​ಟಾಕ್​ ಖ್ಯಾತಿಯ ಫನ್​ ಬಕೆಟ್​ ಭಾರ್ಗವ ಬಂಧನ!
ಒಂದು ವರ್ಷದಿಂದ ನಾನು ಭಾರ್ಗವನನ್ನು ಸಂಪರ್ಕಿಸಿಲ್ಲ. ಅವನೊಂದಿಗೆ ಶೂಟಿಂಗ್​ ಸಹ ಮಾಡಿಲ್ಲ. ನಾನು ಬೇರೆ ಚಿತ್ರೀಕರಣದಲ್ಲಿ ಬಿಜಿಯಾಗಿದ್ದೇನೆ. ಚಿತ್ರವೊಂದರಲ್ಲಿ ನಟಿಸುತ್ತಿದ್ದೇನೆಂದು ನಿತ್ಯಾ ತಿಳಿಸಿದರು.
ಈ ಬಗ್ಗೆ ನಿತ್ಯಾ ಅವರ ತಾಯಿಯು ಸಹ ಮಾತನಾಡಿದ್ದು, ಎಲ್ಲರೂ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಸ್ಪಷ್ಟನೆ ನೀಡಲು ವಿಡಿಯೋ ಮಾಡಬೇಕಾಯಿತು. ನಮ್ಮ ಬೆಂಬಲವಾಗಿನ ನಿಂತಿದ್ದಕ್ಕೆ ನಿಮಗೆ ಧನ್ಯವಾದಗಳು ಎಂದಿದ್ದಾರೆ.
https://www.youtube.com/watch?v=MmLfXQQJLvo
ಪ್ರಕರಣವೇನು?ಟಿಕ್​ಟಾಕ್​ ವಿಡಿಯೋ ಹೆಸರಿನಲ್ಲಿ 14 ವರ್ಷದ ಬಾಲಕಿಯನ್ನು ತನ್ನ ಅಧೀನದಲ್ಲಿ ಇಟ್ಟುಕೊಂಡು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆಂಬ ಆರೋಪದ ಮೇಲೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಭಾರ್ಗವ ವಿರುದ್ಧ ಪೊಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಆರೋಪ: ಟಿಕ್​ಟಾಕ್​ ಖ್ಯಾತಿಯ ಫನ್​ ಬಕೆಟ್​ ಭಾರ್ಗವ ಬಂಧನ!
ಬೆಳ್ಳಂಬೆಳಗ್ಗೆ ಎಲ್ಲರಿಗಿಂತ ಬೇಗ ಎಚ್ಚರಗೊಂಡ ಗೇಲ್ ಏಕಾಂಗಿಯಾಗಿ ಹೊರಟಿದ್ದೆಲ್ಲಿಗೆ?​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 20 =
Remember me
