ಮುಂಬೈ:ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ಧೈರ್ಯವಾಗಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ಸ್ವರಾ ಭಾಸ್ಕರ್​ ಕೂಡ ಒಬ್ಬರು. ಸಾಕಷ್ಟು ವಿವಾದಗಳಿಂದಲೂ ಸ್ವರಾ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಆದರೆ, ಈ ಭಾರಿ ಗಂಭೀರ ವಿಚಾರವೊಂದರಿಂದ ಮತ್ತೆ ಸುದ್ದಿಯಲ್ಲಿದ್ದಾರೆ.
ಬಾಲಿವುಡ್​ ಬ್ಯೂಟಿ ಸ್ವರಾ, ಮುಂಬೈನ ವೆರ್ಸೋವಾ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಪತ್ರ ಬಂದಿದೆ ಎಂದು ದೂರು ದಾಖಲಿಸಿದ್ದಾರೆ.
ಸ್ವರಾ ನೀಡಿರುವ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪತ್ರವನ್ನು ವರ್ಸೊವಾದಲ್ಲಿರುವ ಸ್ವರಾ ಅವರ ನಿವಾಸಕ್ಕೆ ಕಳುಹಿಸಲಾಗಿದೆ. ದೂರನ್ನು ಸ್ವೀಕರಿಸಿದ ನಂತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಗುರುತಿಸಲಾಗದ ಅಪರಾಧವನ್ನು ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಂದಿಯಲ್ಲಿ ಬರೆದಿರುವ ಪತ್ರದಲ್ಲಿ ವೀರ ಸಾವರ್ಕರ್ ಅವರ ಅವಮಾನವನ್ನು ದೇಶದ ಯುವಕರು ಸಹಿಸುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. 2017 ರಲ್ಲಿ ಸ್ವರಾ ಭಾಸ್ಕರ್ ಅವರು ಟ್ವೀಟ್ ಒಂದನ್ನು ಮಾಡಿದ್ದರು. ಸಾವರ್ಕರ್ ಬ್ರಿಟಿಷ್ ಸರ್ಕಾರ ಬಳಿ ಕ್ಷಮೆಯಾಚಿಸಿದ್ದರ. ಜೈಲಿನಿಂದ ಬಿಡುವಂತೆ ಮನವಿ ಮಾಡಿದ್ದರು. ಹೀಗಾಗಿ ಅವರು ಖಚಿತವಾಗಿ ‘ವೀರ್’ ಅಲ್ಲ ಎಂದಿದ್ದರು.
ಇದೀಗ ಸ್ವರಾ ಅವರಿಗೆ ಬೆದರಿಕೆ ಕರೆ ಬಂದಿರುವುದನ್ನು ನೋಡಿದರೆ ಹಿಂದಿನ ಟ್ವೀಟ್​ಗೂ ಬೆದರಿಕೆ ಪತ್ರಕ್ಕೂ ಸಂಬಂಧ ಇದೆ ಎನ್ನಲಾಗಿದೆ. ಸದ್ಯ ಸ್ವರಾ ಅವರಿಗೆ ರಕ್ಷಣೆಯನ್ನು ನೀಡಲಾಗಿದೆ.(ಏಜೆನ್ಸೀಸ್​)
ತಿಂಡಿ ತಿನ್ನೋ ನೆಪದಲ್ಲಿ ಮಹಿಳೆಯ ಹೋಟೆಲ್​ಗೆ ಬಂದ ಕಾನ್ಸ್​ಟೇಬಲ್​ನಿಂದ ನೀಚ ಕೃತ್ಯ: ತುಮಕೂರಿನಲ್ಲಿ ಘಟನೆ​

ನಟಿ ಮೀನಾ ಪತಿ ವಿದ್ಯಾಸಾಗರ್ ಅಕಾಲಿಕ​ ಸಾವಿಗೆ ನಿಖರ ಕಾರಣ ತಿಳಿಸಿದ ತಮಿಳುನಾಡು ಆರೋಗ್ಯ ಸಚಿವ

ಕೈಕೋಳಕ್ಕೆ ಹೈಕೋರ್ಟ್ ಕೊಕ್​​!; ಬಲವಾದ ಕಾರಣವಿಲ್ಲದೆ ಆರೋಪಿಗೆ ಬೇಡಿ ತೊಡಿಸುವಂತಿಲ್ಲ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − ten =
Remember me
