ವಿಜಯವಾಡ:ಸೋಶಿಯಲ್​ ಮೀಡಿಯಾ ಸ್ಟಾರ್​ ಮಾಡುವುದಾಗಿ ಬಾಲಕಿಯನ್ನು ನಂಬಿಸಿ ರೇಪ್​ ಮಾಡಿ ಗರ್ಭವತಿಯಾಗಿಸಿ ವಂಚಿಸಿದ ಆರೋಪದಲ್ಲಿ ಪ್ರಖ್ಯಾತ ಟಿಕ್​ಟಾಕ್ ಸ್ಟಾರ್​ ಫನ್​ ಬಕೆಟ್​ ಭಾರ್ಗವನನ್ನು ಬಂಧಿಸಿ ಒಂದು ವಾರವೇ ಕಳೆದಿದೆ. ಆದರೂ ದಿನಕ್ಕೊಂದು ರೋಚಕ ಸಂಗತಿಗಳು ಬಿಚ್ಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣ ಈಗಲೂ ಭಾರಿ ಸಂಚಲನ ಮೂಡಿಸುತ್ತಿದೆ.
ಈ ಮಧ್ಯೆ ಫನ್​ ಬಕೆಟ್​ ಭಾರ್ಗವ ಪ್ರಕರಣದಲ್ಲಿ ಯಾರಿಗೂ ತಿಳಿಯದ ಕೆಲವು ಸಂಗತಿಗಳನ್ನು ವಕೀಲೆ ಶ್ರಾವ್ಯ ಕಟ್ಟಾ ಬಹಿರಂಗಪಡಿಸಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ವಕೀಲೆ, ಖ್ಯಾತಿ ಆಗುವ ದುರಾಸೆಯಿಂದಲೇ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಷ್ಟೇ ಅಲ್ಲ. ಇಂತಹ ಅನೇಕ ಪ್ರಕರಣಗಳಿವೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಸ್ಟಾರ್​ ಆಗಿರುವ ಆರೋಪಿ, ತಾನು ಎಸಗುವ ತಪ್ಪಿನಿಂದ ಎದುರಾಗುವ ಪರಿಣಾಮಗಳ ಅರಿವಿದ್ದರು ಈ ರೀತಿಯ ಅಪರಾಧ ಎಸಗಿರುವುದು ನಿಜಕ್ಕೂ ಶಾಕ್​ ಆಗುವಂಥದ್ದೆ ಎಂದರು.
ಮುಂದುವರಿದು ಮಾತನಾಡಿದ ಶ್ರಾವ್ಯ, ಈ ಪ್ರಕರಣದಲ್ಲಿ ಸಂಬಂಧವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಯಾರು ಸಹ ನೇರವಾಗಿ ಐ ಲವ್ ಯು ಎಂದು ಸ್ವೀಕರಿಸುವುದಿಲ್ಲ. ತಂಗಿ ಎಂಬ ಪದವನ್ನು ಬಳಸಿಕೊಂಡು ಆಕೆಯ ಜತೆ ಆತ್ಮೀಯತೆ ಬೆಳೆಸಿಕೊಂಡು ಚಿತ್ರೀಕರಣ ಹೆಸರಿನಲ್ಲಿ ಆಕೆಯ ನಗ್ನ ಚಿತ್ರಗಳನ್ನು ಸೆರೆಹಿಡಿದು, ಬೆದರಿಸಿ, ರೇಪ್​ ಮಾಡಿ, ಗರ್ಭಿಣಿ ಮಾಡಿರುವುದು ನಿಜಕ್ಕೂ ಮೃಗಗಳಿಗಿಂತಲೂ ಕೀಳು ಕೆಲಸ ಎಂದು ಶ್ರಾವ್ಯ ಜರಿದರು.
ಅಸಲಿಗೆ ಪ್ರಕರಣದಲ್ಲಿ ಏನು ಜರುಗಿದೆ ಅಂದರೆ, ಸಂತ್ರಸ್ತ ಬಾಲಕಿಯನ್ನು ಬ್ಲಾಕ್​ಮೇಲ್​ ಮಾಡಲಾಗಿದೆ. ಆರೋಪಿ ಬಳಿ ಬಾಲಕಿಯ ಸಾಕಷ್ಟು ನಗ್ನ ಚಿತ್ರ ಮತ್ತು ವಿಡಿಯೋಗಳಿವೆ. ಶೂಟಿಂಗ್​ ನೆಪದಲ್ಲಿ ಖಾಸಗಿ ಕ್ಷಣಗಳನ್ನು ಸರೆಹಿಡಿಯಲಾಗಿದೆ. ಹೊರಗಡೆ ನಮ್ಮ ವಿಷಯವನ್ನು ಬಹಿರಂಗಪಡಿಸಿದರೆ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆಂದು ಬಾಲಕಿಯನ್ನು ನಿರಂತರವಾಗಿ ಬೆದರಿಸಲಾಗಿದೆ. ಬಾಲಕಿಗೆ ಮುಂದೆ ಏನು ಮಾಡಬೇಕೆಂದು ತಿಳಿಯದೇ ತನ್ನ ದೇಹವನ್ನೇ ಆರೋಪಿಗೆ ಒಪ್ಪಿಸಿಬಿಟ್ಟಿದ್ದಾಳೆ. ಮುಂದೆ ಏನಾಗಬಹುದು ಎಂಬ ಅರಿವು ಸಹ ಬಾಲಕಿಗೆ ಇರಲಿಲ್ಲ. ಆದರೆ, ಪ್ರಕೃತಿ ನಿಯಮ ಎಂಬಂತೆ ಬಾಲಕಿಯ ದೇಹದಲ್ಲಾದ ಬದಲಾವಣೆಯಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಬಾಲಕಿ ಈಗ ನಾಲ್ಕು ತಿಂಗಳ ಗರ್ಭಿಣಿ ಎಂದು ವಕೀಲೆ ಶ್ರಾವ್ಯ ಮಾಹಿತಿ ನೀಡಿದರು.
ಈತನ ನಡವಳಿಕೆಯಿಂದಲೇ ಆತನೊಂದಿಗೆ ವಿಡಿಯೋ ಮಾಡಿದ್ದ ಅನೇಕರು ಅರ್ಧದಲ್ಲೇ ಆತನನ್ನು ಬಿಟ್ಟು ಹೋಗಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ಭಾರ್ಗವನ ಜತೆ ವಿಡಿಯೋ ಮಾಡಿದ್ದ ಕೆಲವರು ಯೂಟ್ಯೂಬ್​ ಮೂಲಕ ಸ್ಪಷ್ಟನೆ ನೀಡಿದ್ದರು. ಆತನೊಬ್ಬ ಸ್ತ್ರೀಲೋಲ ಎಂದು ಹೇಳಿದ್ದರು. ಕ್ಯಾಮೆರಾ ಮುಂದೆ ಮತ್ತು ಹಿಂದೆ ಆತ ಬೇರೆ ಎಂದು ಆರೋಪಿಸಿದ್ದರು.
ಈ ಪ್ರಕರಣದಲ್ಲಿ ಆರೋಪಿಗೆ ಗಂಭೀರ ಶಿಕ್ಷೆ ಆಗಲಿದೆ. ಆದರೆ, ಈ ಘಟನೆ ಪರಿಣಾಮ ಬೀರುವುದು ಬಾಲಕಿ ಮತ್ತು ಆಕೆಯ ಕುಟುಂಬದ ಮೇಲೆ. ಬಾಲಕಿ ನಿರಂತರವಾಗಿ ಮಾನಸಿಕ ಕಿರುಕುಳ ಅನುಭವಿಸಬೇಕಾಗುತ್ತದೆ. ಇದರ ಪರಿಣಾಮ ಏನಾಗಲಿದೆ ಎಂದು ಯಾರು ಊಹೆ ಮಾಡಲಾಗದು ಎಂದರು. ಹೀಗಾಗಿ ಆ ಬಾಲಕಿಯ ಸೂಕ್ತ ರಕ್ಷಣೆಯ ಅವಶ್ಯಕತೆಯು ಎಲ್ಲರ ಮುಂದಿದೆ ಎಂದು ತಿಳಿಸಿದರು. ಅಲ್ಲದೆ, ಈ ಪ್ರಕರಣ ಪ್ರತಿಯೊಬ್ಬರಿಗೂ ಒಂದು ಜೀವನ ಪಾಠವಾಗಬೇಕು. ಆದರೆ, ಇಂತಹ ಘಟನೆಗಳು ಮರುಕಳಿಸದಿರಲಿ ಎಂದು ಬಯಸಿದರು.(ಏಜೆನ್ಸೀಸ್​)

ಟಿಕ್​ಟಾಕ್​ ಸ್ಟಾರ್​ ಫನ್​ ಬಕೆಟ್​ ಭಾರ್ಗವನ ಬಗ್ಗೆ ಶಾಕಿಂಗ್​ ಸಂಗತಿಗಳನ್ನು ಬಿಚ್ಚಿಟ್ಟ ಯುವತಿ..!
ಫನ್​ ಬಕೆಟ್​ ಭಾರ್ಗವನೊಂದಿಗಿನ ಸಂಬಂಧ ಬಿಚ್ಚಿಟ್ಟು ಭಾವುಕಳಾದ ಓ ಮೈ ಗಾಡ್​ ಗರ್ಲ್​ ನಿತ್ಯಾ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
