ನವದೆಹಲಿ:ಭಾರತ ಹಲವು ಅಚ್ಚರಿಗಳ ತಾಣ ಎಂಬುದರಲ್ಲಿ ಸಂಶಯವೇ ಇಲ್ಲ. ಹೀಗಾಗಿಯೇ ಭಾರತಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಪ್ರತಿನಿತ್ಯ ಬಂದು ಹೋಗುತ್ತಿರುತ್ತಾರೆ. ಸೋಜಿಗದ ಭಾರತದಲ್ಲಿ ಕಣ್ಣು ಮೇಳೈಸುವ ಅನೇಕ ದೃಶ್ಯಗಳಿವೆ. ಇದೀಗ ನಾರ್ವೆ ದೇಶದ ರಾಜತಾಂತ್ರಿಕ ಎರಿಕ್​ ಸೋಲ್ಹೈಮ್ ಅವರು ಶೇರ್​ ಮಾಡಿಕೊಂಡಿರುವ ವಿಡಿಯೋ ಅದಕ್ಕೆ ತಾಜಾ ಉದಾಹರಣೆಯಾಗಿದೆ.
ಎರಿಕ್​ ಅವರು ಭಾರತದ ಹಿಮಾಲಯದ ಸರಣಿಯಲ್ಲಿ, ಅತಿ ಎತ್ತರದ ಪ್ರದೇಶದಲ್ಲಿರುವ ಶಿವನ ದೇವಾಲಯವನ್ನು ಡ್ರೋನ್​ ಕ್ಯಾಮೆರಾ ಮೂಲಕ ಸೆರೆಹಿಡಿದಿರುವ ಅತ್ಯದ್ಭುತ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಎರಿಕ್​ ಅವರು ಭಾನುವಾರ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಈವರೆಗೆ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ 50 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಪಡೆದುಕೊಂಡಿದೆ.
ವಿಡಿಯೋ ಶೇರ್​ ಮಾಡಿರುವ ಎರಿಕ್​, ವಿಸ್ಮಯಕಾರಿ ಭಾರತ! 5000 ವರ್ಷಗಳಷ್ಟು ಹಳೆಯದ್ದು ಎಂದು ನಂಬಲಾದ ಹಾಗೂ ವಿಶ್ವದ ಅತಿ ಎತ್ತರದಲ್ಲಿರುವ ಮಹಾದೇವನ ಮಂದಿರವಿದು. ಉತ್ತರಾಖಂಡದಲ್ಲಿದೆ ಎಂದು ಅಡಿಬರಹವನ್ನು ನೀಡಿದ್ದಾರೆ.
Incredible India 🇮🇳!World's Highest Located Mahadev Mandir.., believed to be 5000 years old !Uttarakhand
pic.twitter.com/GwWfxoHrra
— Erik Solheim (@ErikSolheim)October 2, 2022

ವಿಡಿಯೋದಲ್ಲಿ ಸಂಪೂರ್ಣ ಹಿಮದಿಂದಲೇ ಆವೃತವಾಗಿರುವ ಪರ್ವತಗಳ ನಡುವೆ ಇರುವ ಶಿವ ದೇವಸ್ಥಾನವನ್ನು 360 ಡಿಗ್ರಿಯಲ್ಲಿ ಸೆರೆಹಿಡಿದಿರುವ ಪಕ್ಷಿ ನೋಟವಿದೆ. ವಿಡಿಯೋದ ಹಿನ್ನೆಲೆಯಲ್ಲಿ ಕೇದಾರನಾಥ ಸಿನಿಮಾದ “ನಮೋ ನಮೋ” ಭಕ್ತಿಗೀತೆ ಕೇಳುತ್ತದೆ. ಈ ವಿಡಿಯೋ ತಕ್ಷಣವೇ ನೆಟ್ಟಿಗರ ಮನ ಸೆಳೆದಿದ್ದು, ಕೆಲ ನೆಟ್ಟಿಗರಂತೂ ವಿಡಿಯೋ ಸೌಂದರ್ಯವನ್ನು ನೋಡಿ ಕಳೆದುಹೋಗಿದ್ದಾರೆ. ಇನ್ನು ಕೆಲವರು ಎರಿಕ್​ ಅವರು ಮಾಡಿರುವ ತಪ್ಪೊಂದನ್ನು ಹುಡುಕಿದ್ದಾರೆ.
ದೇವಾಲಯದ ವಾಸ್ತುಶಿಲ್ಪವು ಅದ್ಭುತವಾಗಿದೆ. ಇದು ಹಿಮಪಾತಗಳು ಮತ್ತು ಭೂಕಂಪಗಳಾದರೂ ಸಹ ಉಳಿದುಕೊಂಡಿದೆ ಎಂದು ನೆಟ್ಟಿಗನೊಬ್ಬ ಕಾಮೆಂಟ್​ ಮಾಡಿದರೆ, ಇದು ತುಂಗನಾಥ ಮಹಾದೇವ ದೇವಾಲಯ. ಪಂಚ ಕೇದಾರಗಳಲ್ಲಿ ಇದು ಒಂದಾಗಿದೆ. ಈ ದೇವಾಲಯವು ಚಾರಣಕ್ಕೆ ಅದ್ಭುತವಾಗಿದೆ ಎಂದು ಮತ್ತೊಬ್ಬ ನೆಟ್ಟಿಗ ಕಮೆಂಟಿಸಿದ್ದಾರೆ.
ಎರಿಕ್​ ಅವರು ಮಾಡಿರುವ ತಪ್ಪನ್ನು ಗುರುತಿಸಿರುವ ಇನ್ನೊಬ್ಬ ನೆಟ್ಟಿಗ, ನೀವು ಹೇಳಿದಂತೆ ಈ ದೇವಸ್ಥಾನವು 5000 ವರ್ಷಗಳಷ್ಟು ಹಳೆಯದಲ್ಲ. ಇದೊಂದು ಸುಂದರವಾದ ದೇವಾಲಯವಾಗಿದೆ ಮತ್ತು ಈ ತಪ್ಪು ವಿಶೇಷಣಗಳ ಅಗತ್ಯವಿಲ್ಲ ಎಂದಿದ್ದಾರೆ. ಈ ದೇವಸ್ಥಾನ ಅಷ್ಟು ಹಳೆಯದಾಗಿರಲು ಸಾಧ್ಯವಿಲ್ಲ. ಈ ದೇವಾಲಯವನ್ನು ಸುಮಾರು ಕ್ರಿ.ಶ. 8ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರ ಕಾಲದಲ್ಲಿ ನಿರ್ಮಿಸಲಾಗಿದೆ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾನೆ.
ಇನ್ನು ಸರ್ಕಾರಿ ವೆಬ್​ಸೈಟ್ ಪ್ರಕಾರ, ತುಂಗನಾಥವು ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಇದು 3,680 ಮೀಟರ್ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ಶಿವ ದೇವಾಲಯವಾಗಿದೆ. ದೇವಾಲಯವು 1,000 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ.(ಏಜೆನ್ಸೀಸ್​)
ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಮಧ್ಯಾಹ್ನ 1.30 ರವರೆಗೂ ನಡೆಯಲಿದೆ ಪೂಜಾ ವಿಧಿ-ವಿಧಾನಗಳು

ಬೆಂಗ್ಳೂರೇತರ ನಗರಗಳಲ್ಲಿ ಐಟಿ-ಬಿಟಿ ವಿಸ್ತರಣೆಗೆ ಸರ್ಕಾರ ಬದ್ಧ: ಸಚಿವ ಡಾ. ಅಶ್ವತ್ಥನಾರಾಯಣ ವಿಶ್ವಾಸ

30 ವರ್ಷದ ಕಟ್ಟಡಕ್ಕಿಲ್ಲ ಬೆಲೆ!: ಸವಕಳಿ ದರ ಪರಿಷ್ಕರಣೆಗೆ ನಿರ್ಧಾರ; ಹಳೇ ಬಿಲ್ಡಿಂಗ್ ಖರೀದಿದಾರರಿಗೆ ಸಿಹಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
