ಹೈದರಾಬಾದ್​:ಸಂತ್ರಸ್ತನ ಪತ್ನಿ ಹಾಗೂ ಆತನ ಕುಟುಂಬ ಸದಸ್ಯರ ಬಗ್ಗೆ ಅಶ್ಲೀಲ ಸಂದೇಶಗಳನ್ನು ಸೃಷ್ಟಿ ಮಾಡಿ ನಕಲಿ ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ ಖಾತೆಯಲ್ಲಿ ಹರಿಬಿಡುತ್ತಿದ್ದ ಮಹಿಳೆಯೊಬ್ಬಳನ್ನು ಹೈದಾರಬಾದ್​ನ ರಾಚಕೊಂಡ ಸೈಬರ್​ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ನೇಹಾ (33) ಬಂಧಿತ ಆರೋಪಿ. ಜಿಮ್​ಗೆ ಹೋಗುವಾಗ ನಗೋಲ್​ ಠಾಣೆಯ ಕಾನ್ಸ್​ಟೇಬಲ್​ ಒಬ್ಬರು ನೇಹಾಗೇ ಪರಿಚಯವಾಗಿದ್ದರು. ಕಾನ್ಸ್​ಟೇಬಲ್​ಗೆ ಮೊದಲೇ ಮದುವೆ ಆಗಿದೆ. ಆದರೂ ಇಬ್ಬರ ನಡುವೆ ಲವ್ವಡವ್ವಿ ಶುರುವಾಗಿತ್ತು. ಹೀಗಿರುವಾಗ ಇಬ್ಬರ ನಡುವೆ ಏನೂ ಮನಸ್ತಾಪ ಉಂಟಾಗಿ ಕಾನ್ಸ್​ಟೇಬಲ್​ ವಿರುದ್ಧ ನೇಹಾ ಎಲ್​ಬಿ ನಗರದಲ್ಲಿ ದೂರು ದಾಖಲಿಸಿದ್ದಳು. ಮದುವೆ ಹೆಸರಲ್ಲಿ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆಂದು ದೂರು ನೀಡಿದ್ದಳು.
ಇದಾದ ಬಳಿಕ ದೂರಿನ ಆಧಾರದ ಮೇಲೆ ಕಾನ್ಸ್​ಟೇಬಲ್​ನನ್ನು ಬಂಧಿಸಲಾಯಿತು. ಇದರಿಂದ ಕಾನ್ಸ್​ಟೇಬಲ್​ ಕೆಲಸವೂ ಹೋಯಿತು. ಆತನ ವಿರುದ್ಧ ಸೇಡು ತೀರಿಸಿಕೊಂಡ ನೇಹಾ, ಆತ ಜಾಮೀನಿನ ಮೇಲೆ ಬಿಡುಗಡೆ ಆಗುತ್ತಿದ್ದಂತೆ ತನ್ನ ವಕ್ರ ದೃಷ್ಟಿಯನ್ನು ಆತನ ಕುಟುಂಬದ ಮೇಲೆ ಬೀರಿದಳು.
ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಂನಲ್ಲಿ ನಕಲಿ ಖಾತೆಗಳನ್ನು ತೆರೆದು ಕಾನ್ಸ್​ಟೇಬಲ್​ ಪತ್ನಿ ಮತ್ತು ಕುಟುಂಬಸ್ಥರ ತೇಜೋವಧೆಗೆ ಇಳಿದಳು. ಹೊಸ ಮೊಬೈಲ್​ ನಂಬರ್​ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಕಿರುಕುಳ ನೀಡಿದಳು. ಬಳಿಕ ಸಂತ್ರಸ್ತ ರಾಚಕೊಂಡ ಸೈಬರ್​ ಕ್ರೈಂ ಠಾಣೆಗೆ ತೆರಳಿ ದೂರು ದಾಖಲಿಸಿದರು. ಇದೀಗ ನೇಹಾಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.(ಏಜೆನ್ಸೀಸ್​)
ಸನ್ನಿ ಲಿಯೋನ್‌ ತೊಟ್ಟ ಡ್ರೆಸ್‌ನ ಜಿಪ್‌ ಮೇಲೇರಿಸಲು ಮೇಕಪ್‌ಮೆನ್‌ ಹರಸಾಹಸ- ವಿಡಿಯೋ ವೈರಲ್‌
ಪತ್ನಿಗೆ 1 ಕೆಜಿ ಚಿನ್ನದ ತಾಳಿ ಉಡುಗೊರೆ! ತನಿಖೆ ನಡೆಸಿದ ಪೊಲೀಸರಿಗೆ ಕಾದಿತ್ತು ಶಾಕ್​
ಆನ್​ಲೈನ್​ ಕ್ಲಾಸ್​ನಲ್ಲಿ ಅರೆಬೆತ್ತಲೆಯಾದ ಶಿಕ್ಷಕನ ಕರಾಳ ಮುಖ ಬಯಲು ಮಾಡಿದ ವಿದ್ಯಾರ್ಥಿನಿಯರು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
