ಆಗ್ರಾ:ಕರ್ತವ್ಯದ ವೇಳೆ ಯೂನಿಫಾರ್ಮ್ ಧರಿಸಿ, ಕೈಯಲ್ಲಿ ರಿವಾಲ್ವರ್​ ಹಿಡಿದು ಡಬ್​ಸ್ಮ್ಯಾಶ್​ ವಿಡಿಯೋ ಮಾಡಿ, ಅದನ್ನು ಇನ್​​ಸ್ಟಾಗ್ರಾಂನಲ್ಲಿ ಹರಿಬಿಟ್ಟು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಆಗಿ, ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿ, ಅಮಾನತಾಗಿದ್ದ ಮಹಿಳಾ ಕಾನ್ಸ್​ಟೇಬಲ್​ ಇದೀಗ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದು, ಅದರ ಬೆನ್ನಲ್ಲೇ ಆಕೆಗೆ ವೆಬ್​ ಸೀರಿಸ್​ ಮತ್ತು ಮಾಡೆಲಿಂಗ್​ನಲ್ಲಿ ಆಫರ್​ಗಳು ಬರುತ್ತಿವೆ.
ಲೇಡಿ ಕಾನ್ಸ್​ಟೇಬಲ್​ ಪ್ರಿಯಾಂಕಾ ಮಿಶ್ರಾ ರಿವಾಲ್ವರ್​ ಹಿಡಿದು ರಂಗ್​ಬಾಜಿ ಚಿತ್ರದ ಡೈಲಾಗ್​ಗೆ ಲಿಪ್​ ಸಿಂಕ್​ ಮಾಡಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದರು. ವಿಡಿಯೋದಲ್ಲಿ ಉತ್ತರ ಪ್ರದೇಶದ ಕ್ರೈಂ ಅನ್ನು ವೈಭವೀಕರಿಸುವ ಡೈಲಾಗ್​ ಅನ್ನು ಪ್ರಿಯಾಂಕಾ ಮಿಶ್ರಾ ಹೊಡೆದಿದ್ದರು. ಯಾವುದೇ ಕಾರಣವಿಲ್ಲದೆ ಹರಿಯಾಣ ಮತ್ತು ಪಂಜಾಬ್ ಕೆಟ್ಟ ಹೆಸರು ಹೊಂದಿವೆ. ಉತ್ತರ ಪ್ರದೇಶಕ್ಕೆ ಬನ್ನಿ. ರಂಗಬಾಜಿ ಏನೆಂದು ನಾವು ನಿಮಗೆ ತೋರಿಸುತ್ತೇವೆ. ಇಲ್ಲಿ 5 ವರ್ಷದೊಳಗಿನ ಮಕ್ಕಳು ಕೂಡ ಬಂದೂಕುಗಳನ್ನು ಬಳಸುತ್ತಾರೆ ಎಂದು ಡೈಲಾಗ್​ ಹೊಡೆದಿದ್ದರು.

A post shared by priyankamishra@kajal (@mishra123priyanka)

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಸಿಕ್ಕಾಪಟ್ಟೆ ಟ್ರೋಲ್​ ಆಗಿದ್ದರು. ಪೊಲೀಸ್​ ಆಗಿದ್ದುಕೊಂಡು ರೌಡಿಸಂ ಬಗ್ಗೆ ಡೈಲಾಗ್​ ಹೊಡೆಯುವುದು ಎಷ್ಟು ಸರಿ? ಅದು ಯೂನಿಫಾರ್ಮ್​ ಮತ್ತು ರಿವಾಲ್ವರ್​ ಹಿಡಿದುಕೊಂಡು ರೌಡಿಸಂ ವೈಭವೀಕರಿಸಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ವಿಡಿಯೋ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದು ಪ್ರಿಯಾಂಕಾ ವಿರುದ್ಧ ತನಿಖೆಗೆ ಆದೇಶಿಸಿದ್ದರು. ಆಕೆಯ ನಡೆ ಯುಪಿ ಪೊಲೀಸ್​ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದು ಅಲ್ಲದೆ, ಅವರನ್ನು ಅಮಾನತಿನಲ್ಲಿಡಲಾಗಿತ್ತು. ಅಮಾನತಿನಲ್ಲಿದ್ದ ಪ್ರಿಯಾಂಕಾ ಮಿಶ್ರಾ ಇದೀಗ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದು, ರಾಜೀನಾಮೆ ಅಂಗೀಕಾರವಾಗಿದೆ.

A post shared by priyankamishra@kajal (@mishra123priyanka)

ಇನ್ನು ಪ್ರಿಯಾಂಕಾ ಅವರ ವಿಡಿಯೋ ವೈರಲ್​ ಆಗಿ ಇನ್​ಸ್ಟಾಗ್ರಾಂನಲ್ಲಿ ಫಾಲೋವರ್ಸ್​ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ಆಫರ್​ಗಳು ಪ್ರಿಯಾಂಕರನ್ನು ಹುಡುಕಿಕೊಂಡು ಬರುತ್ತಿದ್ದು, ಈ ಬಗ್ಗೆ ಮಾಧ್ಯವೊಂದರಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕಾ, ಮಾಡೆಲಿಂಗ್​ ಅಥವಾ ನಟನೆಯಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ಖಂಡಿತ ಆ ಕ್ಷೇತ್ರಕ್ಕೆ ಪ್ರವೇಶ ನೀಡುತ್ತೇನೆ. ಸದ್ಯ ನನಗೆ ವೆಬ್​ ಸೀರಿಸ್​ ಮತ್ತು ಮಾಡೆಲಿಂಗ್​ನಿಂದ ಆಫರ್​ ಬಂದಿದೆ. ಆದರೆ, ಅದನ್ನು ನಾನಿನ್ನು ಸ್ವೀಕರಿಸಿಲ್ಲ. ನಾನೇನೇ ನಿರ್ಧಾರ ತೆಗೆದುಕೊಂಡರು ಮೊದಲು ಯೋಚಿಸಿ ಆನಂತರ ಒಂದು ನಿರ್ಧಾರಕ್ಕೆ ಬರುತ್ತೇನೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ತಮಗೆ ಆಫರ್​ ಬಂದಿರುವ ವೆಬ್​ ಸೀರಿಸ್​ ಹೆಸರೇಳಲು ಪ್ರಿಯಾಂಕಾ ನಿರಾಕರಿಸಿದರು.(ಏಜೆನ್ಸೀಸ್​)
VIDEO| ಡಬ್​ಸ್ಮ್ಯಾಶ್​ ವಿಡಿಯೋ ಮಾಡಿ ಅಮಾನತಾಗಿದ್ದ ಮಹಿಳಾ ಕಾನ್ಸ್​​ಟೇಬಲ್​ ರಾಜೀನಾಮೆ..!

VIDEO| ಟ್ರಾಫಿಕ್​ ಸಿಗ್ನಲ್​ನಲ್ಲಿ ಸವಾರರ ಮುಂದೆ ಸೊಂಟ ಬಳುಕಿಸಿದ ಯುವತಿಗೆ ಪೊಲೀಸ್​ ಇಲಾಖೆ ಶಾಕ್​..!

VIDEO| ನಟ ಧರಮ್​ ತೇಜ್​ ಭೀಕರ ರಸ್ತೆ ಅಪಘಾತದಲ್ಲಿ ಬದುಕಿದ್ದಾರೆಂದರೆ ಅವರ ಕರ್ಮದ ಫಲ ಕಾರಣವಂತೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × five =
Remember me
