ಲಖನೌ:ಸರಕು ಮತ್ತು ಸೇವಾ ತೆರಿಗೆ ವಂಚನೆ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರ ಮೂಲದ ಉದ್ಯಮಿ ಪಿಯೂಷ್​ ಜೈನ್​ರನ್ನು ಬಂಧಿಸಲಾಗಿದೆ. ಬಂಧಿತ ಜೈನ್​, ಸುಗಂಧ ದ್ರವ್ಯ ಇಂಡಸ್ಟ್ರಿ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಸಂಬಂಧಿಸಿದ ಪ್ರದೇಶಗಳ ಮೇಲೆ ಜಿಎಸ್​ಟಿ ಹಾಗೂ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ರಾಶಿ ರಾಶಿ ನೋಟಿನ ಕಂತೆ ಪತ್ತೆಯಾಗಿತ್ತು. ಜೈನ್​ ಸಂಬಂಧಿಸಿದ ಒಟ್ಟು 180 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಹಮದಾಬಾದ್​ನ ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್​ಟಿ ಇಂಟೆಲಿಜೆನ್ಸ್, ಉದ್ಯಮಿ ಜೈನ್​ ಮನೆ ಹಾಗೂ ಕಾರ್ಖಾನೆಯಲ್ಲಿ 10 ಕೋಟಿ ರೂ. ವಶಕ್ಕೆ ಪಡೆದಿದ್ದಾರೆ. ಬಂಧಿತ ಜೈನ್​ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಓಡೋಕೆಮ್ ಇಂಡಸ್ಟ್ರೀಸ್‌ಯ ಪ್ರಾಯೋಜಕರಾಗಿದ್ದಾರೆ. ಜೈನ್​ ಕಾರ್ಖಾನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಲೆಕ್ಕವಿಲ್ಲದಷ್ಟು ಗಂಧದ ಎಣ್ಣೆ ಮತ್ತು ಸುಗಂಧ ದ್ರವ್ಯವನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಡೈರೆಕ್ಟರೇಟ್ ಜನರಲ್ ಆಫ್ ಜಿಎಸ್​ಟಿ ಇಂಟೆಲಿಜೆನ್ಸ್ ಮತ್ತು ಸ್ಥಳೀಯ ಕೇಂದ್ರ ಜಿಎಸ್​ಟಿ ತಂಡ ಒಂದು ದಿನದ ಮಟ್ಟಿಗೆ ಉದ್ಯಮಿ ಜೈನ್​ ಸಂಬಂಧಿಸಿದ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲು ಹೋದಾಗ, ಜೈನ್​ ಪರಾರಿಯಾಗಿದ್ದ. ತನಿಖಾಧಿಕಾರಿಗಳು ಸಾಕಷ್ಟು ಕರೆ ಮಾಡಿದ ಬಳಿಕ ಜೈನ್​ ಎರಡು ಗಂಟೆಗಳ ಬಳಿಕ ಮನೆಗೆ ಮರಳಿದ ಎಂದು ಮೂಲಗಳು ತಿಳಿಸಿವೆ.
ಕಾನ್ಪುರದಲ್ಲಿರುವ ಟ್ರಾನ್ಸ್‌ಪೋರ್ಟರ್ ಗಣಪತಿ ರೋಡ್ ಕ್ಯಾರಿಯರ್ಸ್ ಮಾಲೀಕತ್ವದ ಕಚೇರಿಗಳು ಮತ್ತು ಗೋಡೌನ್‌ಗಳ ಮೇಲೆ ದಾಳಿಗಳನ್ನು ನಡೆಸಲಾಯಿತು. ಇದಾದ ನಂತರ ಪಿಯೂಷ್ ಜೈನ್ ಅವರ ಪ್ರದೇಶಗಳ ಮೇಲೆ ದಾಳಿ ನಡೆಸಲಾಯಿತು. ಬಳಿಕ ದಾಳಿಗೆ ಸಂಬಂಧಿಸಿದ ಫೋಟೋಗ್ರಾಫ್​ಗಳು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಯಿತು. ಅದರಲ್ಲಿ ನೋಟಿನ ಕಂತೆಗಳ ರಾಶಿಯೇ ಸರೆಯಾಗಿತ್ತು. ನೋಟಿನ ಕಂತೆಗಳನ್ನು ಬಹುದೊಡ್ಡ ವಾರ್ಡ್​ರೋಬ್​ಗಳಲ್ಲಿ ತುಂಬಿಡಲಾಗಿತ್ತು.​ ಎಲ್ಲ ನೋಟಿನ ಕಂತೆಯನ್ನು ಪ್ಲಾಸ್ಟಿಕ್​ ಕವರ್​ನಿಂದ ಸುತ್ತಿ, ಹಳದಿ ಟೇಪ್​ನಿಂದ ಭದ್ರಪಡಿಸಲಾಗಿತ್ತು.
ಮತ್ತೊಂದು ಫೋಟೋದಲ್ಲಿ ಐಟಿ ಮತ್ತು ಜಿಎಸ್​ಟಿ ಅಧಿಕಾರಿಗಳು ಕೋಣೆಯೊಂದರ ನೆಲದ ಮೇಲೆ ಕುಳಿತಿರುವುದನ್ನು ಮತ್ತು ಅವರ ಸುತ್ತ ನೋಟಿನ ಕಂತೆಗಳ ರಾಶಿ ಹಾಗೂ ಮೂರು ಹಣ ಎಣಿಸುವ ಯಂತ್ರಗಳಿತ್ತು. ಗುರುವಾರ ಆರಂಭವಾದ ದಾಳಿ ಒಂದು ದಿನಕ್ಕೆ ಸೀಮಿತ ಅಂದುಕೊಂಡಿದ್ದರು. ಆದರೆ, ಉದ್ಯಮಿ ಮನೆಯಲ್ಲಿನ ಹಣದ ರಾಶಿ ನೋಡಿ ಬೆರಗಾದ ಅಧಿಕಾರಿಗಳು ದಾಳಿಯನ್ನು ಮುಂದುವರಿಸಿದರು. ಇದೀಗ ಹಣವನ್ನು ವಶಕ್ಕೆ ಪಡೆದುಕೊಂಡು ಉದ್ಯಮಿಯನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
2022ರ ಕರಾಳ ಭವಿಷ್ಯವಿದು! ಈ ನಿಗೂಢ ಮಹಿಳೆಯ ಇದುವರೆಗಿನ ಬಹುತೇಕ ಭವಿಷ್ಯ ನಿಜವಾಗಿದೆ

ಅಶ್ಲೀಲವಾಗಿ ಸೊಂಟ ಬಳುಕಿಸಿದ ಸನ್ನಿ ಲಿಯೋನ್​ಗೆ ಇನ್ನು ಮೂರೇ ದಿನ ಟೈಂ! ಕಂಗಾಲಾಗಿ ಕೈಮುಗಿದ ಕಂಪನಿ

ಗಂಡ ಬೇಡ ಎಂದಾಕೆಯನ್ನು 5 ತಿಂಗಳು ಅಕ್ರಮವಾಗಿ ಕೂಡಿಟ್ಟ ಪೊಲೀಸ್​ ಇನ್​ಸ್ಪೆಕ್ಟರ್​ಗೆ ಎದುರಾಯ್ತು ಸಂಕಷ್ಟ!

Sign in to your account
Please enter an answer in digits:20 − 17 =
Remember me
