ಆಗ್ರಾ:ಮಹಿಳಾ ಕಾನ್ಸ್​ಟೇಬಲ್​ ಒಬ್ಬರು ಕರ್ತವ್ಯದ ವೇಳೆಯಲ್ಲಿ ಯೂನಿಫಾರ್ಮ್ ಧರಿಸಿ, ಕೈಯಲ್ಲಿ ರಿವಾಲ್ವರ್​ ಹಿಡಿದು ಡಬ್​ಸ್ಮ್ಯಾಶ್​ ವಿಡಿಯೋ ಮಾಡಿ ಇನ್​​ಸ್ಟಾಗ್ರಾಂನಲ್ಲಿ ಹರಿಬಿಟ್ಟಿರುವುದು ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಲೇಡಿ ಕಾನ್ಸ್​ಟೇಬಲ್​ರನ್ನು ಪ್ರಿಯಾಂಕಾ ಮಿಶ್ರಾ ಎಂದು ಗುರುತಿಸಲಾಗಿದೆ. ರಿವಾಲ್ವರ್​ ಹಿಡಿದು ರಂಗ್​ಬಾಜಿ ಚಿತ್ರದ ಡೈಲಾಗ್​ಗೆ ಲಿಪ್​ ಸಿಂಕ್​ ಮಾಡಿರುವ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದಾರೆ.
ಉತ್ತರ ಪ್ರದೇಶದ ಕ್ರೈಂ ಅನ್ನು ವೈಭವೀಕರಿಸುವ ಡೈಲಾಗ್​ ಅನ್ನು ಪ್ರಿಯಾಂಕಾ ಮಿಶ್ರಾ ಹೊಡೆದಿದ್ದಾರೆ. ಯಾವುದೇ ಕಾರಣವಿಲ್ಲದೆ ಹರಿಯಾಣ ಮತ್ತು ಪಂಜಾಬ್ ಕೆಟ್ಟ ಹೆಸರು ಹೊಂದಿವೆ. ಉತ್ತರ ಪ್ರದೇಶಕ್ಕೆ ಬನ್ನಿ. ರಂಗಬಾಜಿ ಏನೆಂದು ನಾವು ನಿಮಗೆ ತೋರಿಸುತ್ತೇವೆ. ಇಲ್ಲಿ 5 ವರ್ಷದೊಳಗಿನ ಮಕ್ಕಳು ಕೂಡ ಬಂದೂಕುಗಳನ್ನು ಬಳಸುತ್ತಾರೆ ಎಂದು ಡೈಲಾಗ್​ ಹೊಡೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರಿಯಾಂಕಾ ವಿರುದ್ಧ ಹಿರಿಯ ಅಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ಆಕೆಯ ನಡೆ ಯುಪಿ ಪೊಲೀಸ್​ ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂದಿದ್ದಾರೆ. ವಿಡಿಯೋ ನೋಡಿದ ಅನೇಕರು ಉತ್ತರ ಪ್ರದೇಶದ ಪೊಲೀಸರನ್ನು ಖಂಡಿಸಿದ್ದಾರೆ.
ಪ್ರಿಯಾಂಕಾಗೆ ಸೇವಾ ರಿವಾಲ್ವರ್​ ನೀಡಲಾಗಿಲ್ಲ. ಠಾಣೆಯ ಸ್ಟೋರ್​ ರೂಮ್​ನಲ್ಲಿ ಇಡಲಾಗಿದ್ದ ರಿವಾಲ್ವರ್​ ಅನ್ನು ವಿಡಿಯೋ ಚಿತ್ರೀಕರಣ ಮಾಡಲು ಬಳಸಿಕೊಂಡಿದ್ದಾರೆ ಎಂದು ಎಸ್​ಎಸ್​ಪಿ ಹೇಳಿದ್ದಾರೆ. ಆಕೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.(ಏಜೆನ್ಸೀಸ್​)
(ವಿಡಿಯೋ ಕೃಪೆ: ದಿ ನ್ಯೂಸ್​ ಪ್ಲೇಸ್​)

ಮೈಸೂರಲ್ಲಿ ಗ್ಯಾಂಗ್​ ರೇಪ್​: ಸಂತ್ರಸ್ತೆಯ ಗೆಳೆಯನ ವಿರುದ್ಧವೇ ಕೇಸ್​? ಸ್ಫೋಟಕ ತಿರುವು ಕೊಟ್ಟ ತಂದೆ-ಮಗನ ನಡೆ

ಮೈಸೂರು ಗ್ಯಾಂಗ್​ರೇಪ್​ ಕೇಸ್​: ವಿದ್ಯಾರ್ಥಿನಿ ಮೇಲೆ ಅಟ್ಟಾಹಾಸ ಮೆರೆದಿದ್ದ ಕಾಮಾಂಧರು ಸಿಕ್ಕಿಬಿದ್ದಿದ್ಹೇಗೆ?

ಮೈಸೂರಲ್ಲಿ ಗ್ಯಾಂಗ್​ ರೇಪ್​ ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್​: ನಾನು ದೂರು ಕೊಡಲ್ಲ, ನನ್ನನ್ನು ಬಿಟ್ಟುಬಿಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + eight =
Remember me
