ನವದೆಹಲಿ:ಇಡೀ ದೇಶದ ಜನರು ಆಗಸ್ಟ್​ 15ರಂದು ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಆಚರಣೆ ಮಾಡಲು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಇದರ ನಡುವೆ ದೇಶದ ಜನತೆಗೆ ಎಚ್ಚರಿಕೆ ಕರೆಗಂಟೆಯೊಂದು ಬಂದಿದೆ.
ಸ್ವಾತಂತ್ರ್ಯ ದಿನದಂದು ಲಷ್ಕರ್​ ಎ ತೊಯ್ಬಾ (ಎಲ್​ಇಟಿ), ಜೈಷ್​ ಇ ಮೊಹಮ್ಮದ್​ (ಜೆಇಎಂ) ಮತ್ತು ಇತರೆ ಉಗ್ರ ಸಂಘಟನೆಗಳ ಭಯೋತ್ಪಾದಕರು ದೇಶವನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಧ್ಯತೆ ಇದೆ ಎಂದು ಇಂಟೆಲಿಜೆನ್ಸ್​ ಬ್ಯೂರೋ (ಐಬಿ) ದೆಹಲಿ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಕೇಂದ್ರ ಸರ್ಕಾರಕ್ಕೆ 10 ಪುಟಗಳ ವರದಿ ಸಲ್ಲಿಸಿರುವ ಐಬಿ, ಎಲ್​ಇಟಿ, ಜೆಇಎಂ ಮತ್ತು ಇತರೆ ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆ ಇದೆ. ಆಗಸ್ಟ್​ 15ರಂದು ದೆಹಲಿಯ ಕೆಂಪುಕೋಟೆಯ ಪ್ರವೇಶಕ್ಕೆ ಕಠಿಣ ನಿಯಮಗಳನ್ನು ಜಾರಿಗೆ ತರುವಂತೆ ದೆಹಲಿ ಪೊಲೀಸರಿಗೆ ಐಬಿ ನಿರ್ದೇಶಿಸಿದೆ.
ಐಬಿ ವರದಿಯಲ್ಲಿ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲಿನ ದಾಳಿ ಮತ್ತು ಉದಯಪುರ ಮತ್ತು ಅಮರಾವತಿಯಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಲಾಗಿದೆ.
ವರದಿಯ ಪ್ರಕಾರ, ಪಾಕ್​ ಗುಪ್ತಚರ ಸಂಸ್ಥೆ ಐಎಸ್ಐ, ಜೈಷ್​ ಮತ್ತು ಲಷ್ಕರ್ ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್ ಬೆಂಬಲ ನೀಡುವ ಮೂಲಕ ಭಯೋತ್ಪಾದಕ ದಾಳಿಗಳನ್ನು ಪ್ರಚೋದಿಸುತ್ತಿದೆ. ದೊಡ್ಡ ನಾಯಕರು ಮತ್ತು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಲು ಜೆಎಂ ಮತ್ತು ಎಲ್ಇಟಿಗೆ ಸೂಚನೆ ನೀಡಲಾಗುತ್ತಿದೆ.(ಏಜೆನ್ಸೀಸ್​)
ಜಾಲತಾಣದಲ್ಲಿ ವಿದ್ಯಾರ್ಥಿ ಹಾಕಿದ್ದ ಪೋಸ್ಟ್​ ಓದುತ್ತಾ ಕಾಲೇಜು ವೇದಿಕೆಯಲ್ಲೇ ಕಣ್ಣೀರಾಕಿದ ಶಾಸಕ ಸಾರಾ ಮಹೇಶ್​

ಗುಮಾಸ್ತನ​ ಮನೆಯಲ್ಲಿ ಕಂತೆ ಕಂತೆ ಹಣ: ಅಧಿಕಾರಿಗಳು ದಾಳಿ ಮಾಡ್ತಿದ್ದಂತೆ ವಿಷ ಕುಡಿದ ಸರ್ಕಾರಿ ನೌಕರ!​

ಏಕ ಚೀನಾ ನೀತಿ, ತೈವಾನ್​ಗೆ ಫಜೀತಿ; ಬಲಾಢ್ಯ ದೇಶಗಳ ನಡುವೆ ಬಿಕ್ಕಟ್ಟು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
