ಅಹಮದಾಬಾದ್​:“ಚಿನ್ನದ ಮನುಷ್ಯ” ಎಂದೇ ಹೆಸರು ಪಡೆದಿದ್ದ ಕುಂಜಾಲ್​ ಪಟೇಲ್​ ಅಲಿಯಾಸ್​ ಕೆ.ಪಿ. ಪಟೇಲ್​ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ಅಹಮದಾಬಾದ್​ನಲ್ಲಿ ಸೋಮವಾರ ನಡೆದಿದೆ.
ಕುಟುಂಬದ ಜತೆ ನಡೆದ ಗಲಾಟೆಯ ಬಳಿಕ ತಾನೇ ಕುತ್ತಿಗೆ ಹಿಸುಕಿಕೊಂಡು ಸಾವಿಗೀಡಾಗಿದ್ದಾರೆಂದು ಪೊಲೀಸ್​ ಮೂಲಗಳು ತಿಳಿಸಿವೆ. ರಾಜಕೀಯ ಪಕ್ಷವೊಂದರ ಅಭ್ಯರ್ಥಿಯಾಗಿ ಕುಂಜಾಲ್​ ಪಟೇಲ್​, ದರಿಯಾಪುರ್​ ಕ್ಷೇತ್ರದಿಂದ ಈ ಮುಂಚೆ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದರು.
ಇನ್ನು ಆತ್ಮಹತ್ಯೆ ಸಂಬಂಧ ಅನುಮಾನವು ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿರುವ ಮಧುಪುರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೆಜಿಗಟ್ಟಲೇ ಚಿನ್ನಾಭರಣ ಧರಿಸಿದ್ದ ಕುಂಜಾಲ್​ ಪಟೇಲ್​ ಫೋಟೋ ವೈರಲ್​ ಆದ ಬಳಿಕ ಖ್ಯಾತಿಗಳಿಸಿದ್ದ.
ಕುಂಜಾಲ್​ ಮಧುಪುರದ ಯೋಗೇಶ್​ ಸೊಸೈಟಿಯಲ್ಲಿ ವಾಸವಿದ್ದ. ವಾಹನ ವಶಪಡಿಸಿಕೊಳ್ಳುವ ವ್ಯವಹಾರದಿಂದಲೂ ಕುಂಜಾಲ್​ ಗುರುತಿಸಿಕೊಂಡಿದ್ದ. ಸದ್ಯ ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.(ಏಜೆನ್ಸೀಸ್​)
ನಟಿ ರಶ್ಮಿಕಾ ಮಂದಣ್ಣ ಹುಡುಕಿಕೊಂಡು ತೆಲಂಗಾಣದಿಂದ ವಿರಾಜಪೇಟೆಗೆ ಬಂದ ಯುವಕನಿಗೆ ಕಾದಿತ್ತು ಶಾಕ್​!
ಪ್ರೇಮ ವಿವಾಹ: ಮನೆಯಲ್ಲಿ ಜಗಳವಾದ ಕೆಲವೇ ದಿನಗಳಲ್ಲಿ ಗಂಡನಿಗೆ ಆಘಾತ ನೀಡಿದ ಪತ್ನಿ!
ತುಂಬು ಗರ್ಭಿಣಿ ಹೊಟ್ಟೆ ಮೇಲೆ ವಾಹನ ಹರಿದು ಸ್ಥಳದಲ್ಲೇ ನವಜಾತಶಿಶು-ತಾಯಿ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
