ಪುಣೆ:ಕ್ರೂಸ್ ಶಿಪ್​​​ನಲ್ಲಿ ಡ್ರಗ್ಸ್​ ಪಾರ್ಟಿ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಬಾಲಿವುಡ್​ ತಾರೆ ಶಾರುಖ್​ ಖಾನ್​ರ ಮಗ ಆರ್ಯನ್​ ಖಾನ್ ಸದ್ಯ ಜೈಲಿನಲ್ಲಿದ್ದು, ನಾಳಿನ (ಅ.20) ಜಾಮೀನು ಅರ್ಜಿ ವಿಚಾರಣೆ ತೀರ್ಪಿಗಾಗಿ ಎದುರು ನೋಡುತ್ತಿದ್ದಾರೆ.
ಇದರ ನಡುವೆ ಆರ್ಯನ್​ ಖಾನ್​ ಜತೆ ಎನ್​ಸಿಬಿ ಕಸ್ಟಡಿಯಲ್ಲಿ ಸೆಲ್ಫಿ ತೆಗೆದುಕೊಂಡಿದ್ದ ವ್ಯಕ್ತಿಗೆ ಸಂಕಷ್ಟ ಎದುರಾಗಿದೆ. ಕೆಲಸ ನೀಡುವುದಾಗಿ ವಂಚನೆ ಮಾಡಿದ ಆರೋಪದ ಅಡಿಯಲ್ಲಿ ಆರೋಪಿ ಕಿರಣ್​ ಗೊಸಾವಿ ಹಾಗೂ ಸಹಾಯಕ ಶೆರ್ಬಾನೋ ಖುರೇಷಿ ಎಂಬಾತನನ್ನು ಪುಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಕಿರಣ್​ ಗೊಸಾವಿ ಓರ್ವ ಖಾಸಗಿ ಪತ್ತೆದಾರ. ಶಾರುಖ್​ ಪುತ್ರ ಆರ್ಯನ್​ ಖಾನ್​ ಬಂಧನದ ಬಳಿಕ ಮುಂಬೈನ ಎನ್​ಸಿಬಿ ಕಚೇರಿಯಲ್ಲಿ ಆರ್ಯನ್​ ಖಾನ್​ ಜತೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಸೆಲ್ಫಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಸಹ ಆಗಿತ್ತು.
ಈ ಹಿಂದೆ ಅಕ್ಟೋಬರ್ 14ರಂದು ನಗರ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ ಅವರು ಕಿರಣ್ ಗೋಸಾವಿ, ದೇಶದ ಹೊರಗೆ ಹೋಗದಂತೆ ನಿರ್ಬಂಧಿಸಲು ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ಅಕ್ಟೋಬರ್ 2ರಂದು ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಡೆದ ಎನ್‌ಸಿಬಿ ದಾಳಿಯಲ್ಲಿ ಶ್ರೀ ಗೋಸಾವಿ ಸಾಕ್ಷಿಯಾಗಿದ್ದಾರೆ.
ಮಹಾರಾಷ್ಟ್ರ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ನಾಯಕ ನವಾಬ್ ಮಲಿಕ್, ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್​ನನ್ನು ಬಂಧಿಸಿದ ನಂತರ ಎನ್​ಸಿಬಿ ಕಚೇರಿಯಲ್ಲಿ ಗೋಸಾವಿಯವರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಈ ಮಧ್ಯೆ, ಎನ್​ಸಿಬಿ, ಗೋಸಾವಿ ಅಧಿಕಾರಿ ಅಥವಾ ಉದ್ಯೋಗಿ ಅಲ್ಲ ಎಂದು ಸ್ಪಷ್ಟಪಡಿಸಿತ್ತು.(ಏಜೆನ್ಸೀಸ್​)
ರೈಡರ್ ಎದೆಯಲ್ಲಿ ಡವ್ವ ಡವ್ವ…

ಫೋರ್ಬ್ಸ್ ಪಟ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಹವಾ

ಮಹಿಳೆಯರ ಡಿಜಿಟಲ್ ಹೆಜ್ಜೆಗುರುತು; ಆರ್ಥಿಕ ಸಬಲತೆಗೆ ಮುನ್ನುಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − two =
Remember me
