ಭುವನೇಶ್ವರ:ಹಿರಿಯ ಐಪಿಎಸ್​ ಅಧಿಕಾರಿ ಅರುಣ್​ ಬೊತ್ರಾ ಅವರು ಬುಧವಾರ ಟ್ವೀಟ್​ ಮಾಡಿದ ಪೋಸ್ಟ್​ ಒಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ಬೊತ್ರಾ ಅವರು ಒಡಿಶಾದ ಸಾರಿಗೆ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿರುವ ಫೋಟೋವನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಸೆರೆಹಿಡಿದಿದ್ದಾಗಿ ಮತ್ತು ಅದರ ಹಿಂದಿನ ಘಟನೆಯನ್ನು ವಿವರಿಸಿದ್ದು, ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ.
ಬೊತ್ರಾ ಇತ್ತೀಚೆಗೆ ಯಾವುದೋ ಕೆಲಸ ಮೇಲೆ ಜೈಪುರಕ್ಕೆ ಹೋಗಿದ್ದಾಗ ಎಂದಿನಂತೆ ವಿಮಾನ ನಿಲ್ದಾಣದ ಸಿಬ್ಬಂದಿ ಅವರನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಬ್ಯಾಗ್​ನಲ್ಲಿ ಏನಿದೆ ತೆಗೆದು ತೋರಿಸಿ ಎಂದು ಕೇಳಿದ್ದಾರೆ. ಬ್ಯಾಗ್​ ತೆರೆದು ನೋಡಿದಾಗ ಅದರಲ್ಲಿ ಇದ್ದುದ್ದನ್ನು ನೋಡಿ ಸಿಬ್ಬಂದಿಯೇ ಒಂದು ಕ್ಷಣ ಅವಕ್ಕಾಗಿದ್ದಾರೆ.
ಅಸಲಿಗೆ ಐಪಿಎಸ್​ ಅಧಿಕಾರಿಯ ಬ್ಯಾಗ್​ ತುಂಬಾ ಬರೀ ಹಸಿರು ಬಟಾಣಿಯೇ ತುಂಬಿತ್ತು. ಅದನ್ನು ಕೆಜಿಗೆ 40 ರೂ.ನಂತೆ ಕೊಂಡುಕೊಂಡಿದ್ದಾಗಿ ಹೇಳಿದ್ದಾರೆ. ಇದೀಗ ಇದಕ್ಕೆ ಸಂಬಂಧಿಸಿದ ಫೋಟೋವನ್ನು ಬೊತ್ರಾ ಅವರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಈಗಾಗಲೇ 48 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳು ಬೊತ್ರಾ ಅವರ ಪೋಸ್ಟ್​ಗೆ ಬಂದಿದೆ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ವಿಮಾನದಲ್ಲಿ ತರಕಾರಿ ಸಾಗಿಸುವ ತಮ್ಮ ಅನುಭವವನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್, ಇದು ಕಾಳು ಕಳ್ಳಸಾಗಣೆ ಪ್ರಕರಣವೇ ಎಂದು ಲಘು ಟ್ವೀಟ್‌ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಹೀಗಾ ಸಾಕಷ್ಟು ಮಂದಿ ಟ್ವೀಟ್​ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಅರುಣ್​ ಬೊತ್ರಾ ಅವರು ಒಡಿಶಾ ಕೇಡರ್​ನ ಐಪಿಎಸ್​ ಅಧಿಕಾರಿ. ಟ್ವಿಟರ್​​ನಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅವರು ಟ್ವಿಟರ್​ನಲ್ಲಿ 2 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.(ಏಜೆನ್ಸೀಸ್​)
Security staff at Jaipur airport asked to open my handbag 😐pic.twitter.com/kxJUB5S3HZ
— Arun Bothra 🇮🇳 (@arunbothra)March 16, 2022

ಪತ್ನಿ ಸಾಕ್ಷಿ ಬಗ್ಗೆ ಅಭಿಮಾನಿ ಕೇಳಿದ ವೈಯಕ್ತಿಕ ಪ್ರಶ್ನೆಗೆ ಎಂ.ಎಸ್​. ಧೋನಿ ಕೊಟ್ಟ ಉತ್ತರ ವೈರಲ್!​

ಗಂಡನಿಗೆ ದುಬಾರಿ ಲ್ಯಾಂಬೋರ್ಗಿನಿ ಕಾರು ಗಿಫ್ಟ್​ ಕೊಟ್ಟ ಗರ್ಭಿಣಿ ಪತ್ನಿ: ಕಾರಣ ಕೇಳಿದ್ರೆ ಬೆರಗಾಗ್ತೀರಾ!

ಕಾಡಿತು ಅಪ್ಪು ಅಗಲಿಕೆ ನೋವು… ಜೇಮ್ಸ್​ ನೋಡಲಾಗದೆ ಕಣ್ಣೀರು ಹಾಕುತ್ತಾ ಥಿಯೇಟರ್​ನಿಂದ ಹೊರ ಬಂದ ಫ್ಯಾನ್ಸ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nine =
Remember me
