ಮುಂಬೈ (ಮಹಾರಾಷ್ಟ್ರ):ಮುಂಬೈ ಉಪನಗರ​ ರೈಲಿನ ಮಹಿಳಾ ಮೀಸಲು ಬೋಗಿಯು ನಿನ್ನೆ (ಅ.6) ಜಡೆ ಜಗಳಕ್ಕೆ ಸಾಕ್ಷಿಯಾಯಿತು. ಚಲಿಸುವ ರೈಲಿನಲ್ಲೇ ಮಹಿಳಾಮಣಿಗಳು ಕಿತ್ತಾಡಿಕೊಂಡರು. ಈ ವೇಳೆ ಕರ್ತವ್ಯದಲ್ಲಿದ್ದ ಓರ್ಬ ಮಹಿಳಾ ಪೊಲೀಸ್​ ಸಿಬ್ಬಂದಿ ಸಹ ಗಾಯಗೊಂಡರು.
ಜಡೆ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಥಾಣೆ-ಪನ್ವೆಲ್ ಸ್ಥಳೀಯ ರೈಲಿನ ಮಹಿಳಾ ಬೋಗಿಯಲ್ಲಿ ಮಹಿಳೆಯರು ಕಿತ್ತಾಡಿಕೊಂಡಿದ್ದಾರೆ.
ಈ ಬಗ್ಗೆ ವಾಶಿ ಸರ್ಕಾರಿ ರೈಲ್ವೆ ಪೊಲೀಸ್​ (ಜಿಆರ್​ಪಿ) ವಿಭಾಗದ ಪೊಲೀಸ್​ ಇನ್ಸ್​ಪೆಕ್ಟರ್​ ಸಂಭಾಜಿ ಕಾಟರೆ ಮಾತನಾಡಿದ್ದು, ತುರ್ಭೆ ನಿಲ್ದಾಣ ಸಮೀಪ ಸೀಟಿಗಾಗಿ ಮೂವರು ಮಹಿಳೆಯರ ನಡುವೆ ಆರಂಭವಾದ ಮಾತಿನ ಚಕಮಕಿ ತಾರಕಕ್ಕೇರಿ ಜಗಳ ನಡೆಯಿತು. ಈ ವೇಳೆ ಮತ್ತಷ್ಟು ಮಹಿಳೆಯರು ತಮ್ಮವರಿಗೆ ಬೆಂಬಲಿಸಲು ಹೋಗಿ ಜಗಳವನ್ನು ದೊಡ್ಡದು ಮಾಡಿದರು ಎಂದು ಮಾಹಿತಿ ನೀಡಿದರು.
ಗಲಾಟೆ ಸಮಯದಲ್ಲಿ ಓರ್ವ ಮಹಿಳಾ ಪೊಲೀಸ್​ ಸಿಬ್ಬಂದಿ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಿದರು. ಆದರೆ, ಕೆಲ ಮಹಿಳೆಯರು ಸಿಬ್ಬಂದಿಯ ಮೇಲೆಯೇ ದಾಳಿ ನಡೆಸಿದ್ದು, ಪರಿಣಾಮ ಅವರು ಗಾಯಗೊಂಡರು. ಅಲ್ಲದೆ, ಮೂವರು ಮಹಿಳೆಯರಿಗೂ ಗಾಯಗಳಾಗಿವೆ. ಓರ್ವ ಮಹಿಳೆಯ ತಲೆಗೆ ತೀವ್ರ ಪೆಟ್ಟು ಬಿದ್ದು, ರಕ್ತಸ್ರಾವವಾಯಿತು.
ಪೊಲೀಸರ ಪ್ರಕಾರ, ತುರ್ಭೆ ನಿಲ್ದಾಣದಲ್ಲಿ ಸೀಟು ಖಾಲಿಯಾದಾಗ ಓರ್ವ ಮಹಿಳಾ ಪ್ರಯಾಣಿಕರು ಎರಡನೇ ಮಹಿಳೆಗೆ ಸೀಟಿನಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲು ಪ್ರಯತ್ನಿಸಿದರು. ಆದರೆ, ಮೂರನೇ ಮಹಿಳೆ ಕೂಡ ಅದೇ ಸೀಟಿನಲ್ಲಿ ಕುಳಿತುಕೊಳ್ಳಲು ಯತ್ನಿಸಿದ್ದಾರೆ. ಇದರಿಂದ ಮೂವರು ಮಹಿಳೆಯರ ನಡುವೆ ತೀವ್ರ ವಾಗ್ವಾದ ನಡೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಇನ್ಸ್​ಪೆಕ್ಟರ್​ ಸಂಭಾಜಿ ಕಾಟರೆ ತಿಳಿಸಿದರು.(ಏಜೆನ್ಸೀಸ್​)
#Watch: A massive fight broke out between few#womeninside a#localtrainrunning between#Thaneand#Panvel.
The video of the scuffle has gone#viralon social media.The women hit each other following dispute over seat.
One female staff was injured in the incident: Policepic.twitter.com/Q28v2cu1Iz
— Free Press Journal (@fpjindia)October 6, 2022

ರಾಜ್ಯದಲ್ಲಿ 6ನೇ ದಿನದ ಭಾರತ್​ ಜೋಡೋ ಯಾತ್ರೆ ಆರಂಭ: ಮೊಳಗಿದ ಗೌಡರ ಗೌಡ ರಾಹುಲ್ ಗೌಡ ಘೋಷಣೆ

ಸದ್ದಿಲ್ಲದೆ ಏರಿದ ಮನೆ ಕಂದಾಯ; ಗ್ರಾಮೀಣರಿಗೆ ಹೊರೆಯಾದ ತೆರಿಗೆ ಸೂತ್ರ, ಪಂಚತಂತ್ರ ಸಾಫ್ಟ್​ವೇರ್​ನಲ್ಲೂ ಅವ್ಯವಸ್ಥೆ

ನಮ್ಮ ಕನ್ನಡ ಸಿನಿಮಾ ಮಂದಿಗೆ ನಾಚಿಕೆ ಆಗ್ಬೇಕು: ಕಲಾವಿದರ ವಿರುದ್ಧ ಗುಡುಗಿದ ನಟ ಜಗ್ಗೇಶ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + ten =
Remember me
