ಮುಂಬೈ:ವಾರ್ಷಿಕ ಆದಾಯ ಬರೋಬ್ಬರಿ ಒಂದೂವರೆ ಕೋಟಿ ರೂ. ಇದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಬಾಲಿವುಡ್​ ಹಿರಿಯ ನಟ ಅಮಿತಾಭ್​​ ಬಚ್ಚನ್​ ಅವರ ಪೊಲೀಸ್​ ಬಾಡಿಗಾರ್ಡ್​ ಜೀತೇಂದ್ರ ಶಿಂಧೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ವಿಭಾಗೀಯ ತನಿಖೆಗೂ ಸಹ ಆದೇಶಿಸಲಾಗಿದೆ.
ಕಾನ್ಸ್​ಟೇಬಲ್​ ಆಗಿರುವ ಶಿಂಧೆ ಅವರನ್ನು ಮುಂಬೈ ಪೊಲೀಸ್​ ಇಲಾಖೆ ಬಚ್ಚನ್​ ಅವರ ಬಾಡಿಗಾರ್ಡ್​ ಆಗಿ ನೇಮಿಸಿತ್ತು. ಅನೇಕ ವರ್ಷಗಳಿಂದ ಬಿಗ್​ಬಿ ಅವರ ಅಂಗರಕ್ಷಕರಾಗಿ ಸೇವೆ ಸಲ್ಲಿಸಿರುವ ಶಿಂಧೆ ವಿರುದ್ಧ ಇತ್ತೀಚೆಗೆ ಅಚ್ಚರಿಯ ವರದಿಯೊಂದು ಹರಿದಾಡುತ್ತಿದೆ. ಸಾಮಾನ್ಯ ಪೊಲೀಸ್​ ಕಾನ್ಸ್​ಟೇಬಲ್​ ಆಗಿರುವ ಶಿಂಧೆ ಅವರ ವಾರ್ಷಿಕ ಆದಾಯ ಒಂದೂವರೆ ಕೋಟಿ ರೂಪಾಯಿ.
ಈ ವಿಚಾರ ಮುಂಬೈ ಪೊಲೀಸರ ಕಣ್ಣನ್ನು ಕೆಂಪಾಗಿಸಿದ್ದು, ಅವರನ್ನು ವರ್ಗಾವಣೆ ಮಾಡಿ ತನಿಖೆಗೆ ಆದೇಶಿಸಿದೆ. ಶಿಂಧೆ ಬಚ್ಚನ್​ ಅವರಿಂದ ಅಥವಾ ಬೇರೆ ಯಾರಾದರಿಂದ ಹಣ ಪಡೆಯುತ್ತಿದ್ದರಾ? ಎಂಬ ಮೂಲವನ್ನು ಹುಡುಕಿ ಹೊರಟಿದ್ದಾರೆ.
ಶಿಂಧೆ ವಿಚಾರಣೆ ಸಹ ಎದುರಿಸಿದ್ದಾರೆ. ತಾನೊಂದು ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿರುವುದಾಗಿ ಹೇಳಿರುವ ಶಿಂಧೆ ತಮ್ಮ ಏಜೆನ್ಸಿ ಮೂಲಕ ಸೆಲೆಬ್ರಿಟಿಗಳಿಗೆ ಹಾಗೂ ಹೆಸರಾಂತ ವ್ಯಕ್ತಿಗಳಿಗೆ ಬಾಡಿಗಾರ್ಡ್​ಗಳನ್ನು ಒದಗಿಸುತ್ತೇವೆ ಎಂದಿದ್ದಾರೆ. ಇನ್ನು ನಮ್ಮ ಏಜೆನ್ಸಿ ನನ್ನ ಪತ್ನಿಯ ಹೆಸರಲ್ಲಿದೆ. ನನಗೆ ಬಚ್ಚನ್​ ಅವರು ಹಣ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮುಂಬೈ ಪೊಲೀಸರ ಪ್ರಕಾರ ಓರ್ವ ಸಿಬ್ಬಂದಿಯನ್ನು 5 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಕಡೆ ಇರಿಸುವಂತಿಲ್ಲ, ಹೀಗಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಸುದ್ದಿಯೂ ಇದೆ. ಶಿಂಧೆ ಅವರು 2015ರಿಂದಲೂ ಬಚ್ಚನ್​​ ಅವರಿಗೆ ಬಾಡಿಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದರು. ಶಿಂಧೆಯೊಂದಿಗೆ ಇಬ್ಬರು ಕಾನ್ಸ್​ಟೇಬಲ್​ಗಳನ್ನು ಸಹ ಪೋಸ್ಟ್​ ಮಾಡಲಾಗಿತ್ತು. ಬಚ್ಚನ್​ ಇರುತ್ತಿದ್ದ ಎಲ್ಲ ಸ್ಥಳಗಳಲ್ಲಿಯು ಶಿಂಧೆ ಇರುತ್ತಿದ್ದರು. ಇದೀಗ ಅವರ ಆದಾಯ ಮೂಲ ಅವರನ್ನು ಬಚ್ಚನ್​ನಿಂದ ದೂರ ಮಾಡಿದ್ದು, ಸದ್ಯ ದಕ್ಷಿಣ ಮುಂಬೈ ಪೊಲೀಸ್​ ಠಾಣೆಗೆ ವರ್ಗಾವಣೆ ಮಾಡಲಾಗಿದೆ.(ಏಜೆನ್ಸೀಸ್​)
ಚಿರತೆಗಳೊಂದಿಗೆ ಫೋಟೋಶೂಟ್​… ಆಸ್ಪತ್ರೆ ಸೇರಿದ ಮಾಡೆಲ್!

VIDEO| ನಟಿಯೊಂದಿಗೆ ಆರ್​ಜಿವಿ ಡ್ಯಾನ್ಸ್​ ವಿಡಿಯೋ ವೈರಲ್: ಏನಿದು ಅಸಹ್ಯ ಅಂದ್ರು ನೆಟ್ಟಿಗರು!​

ಕಾಬುಲ್​ ಏರ್​ಪೋರ್ಟ್​ನಲ್ಲಿ ಆತ್ಮಾಹುತಿ ಬಾಂಬ್​ ದಾಳಿ: ಐಸಿಸ್​-ಕೆ ವಿರುದ್ಧ ಗುಡುಗಿದ ಜೋ ಬೈಡೆನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
