ಹೈದರಾಬಾದ್​:ಟಾಲಿವುಡ್​ನ ಪ್ರಖ್ಯಾತ ನಿರೂಪಕಿ ಶ್ಯಾಮಲಾ ಪತಿ ನರಸಿಂಹ ರೆಡ್ಡಿಯನ್ನು ತೆಲಂಗಾಣದ ರಾಯದುರ್ಗ ಪೊಲೀಸರು ಬಂಧಿಸಿದ್ದಾರೆ. ವಂಚನೆ ಮಾಡಿದ್ದಾನೆಂದು ಆರೋಪಿಸಿ ಮಹಿಳೆಯೊಬ್ಬಳು ನೀಡಿದ ದೂರಿನ ಆಧಾರದ ಮೇಲೆ ನರಸಿಂಹನನ್ನು ಬಂಧಿಸಲಾಗಿದೆ.
ಸುಮಾರು 1 ಕೋಟಿ ರೂಪಾಯಿ ಹಣವನ್ನು ಪಡೆದುಕೊಂಡಿದ್ದು ಮರಳಿಸುವಂತೆ ಕೇಳಿದ್ದಕ್ಕೆ ಬೆದರಿಕೆ ಹಾಕಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿದ್ದಾನೆಂದು ನರಸಿಂಹ ವಿರುದ್ಧ ಸಂತ್ರಸ್ತೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಪತಿಯ ಬಂಧನ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ನಿರೂಪಕಿ ಶ್ಯಾಮಲಾ, ಸತ್ಯ ಹೊರಬರಲಿದೆ. ನಾನು ತುಂಬಾ ದಣಿದಿದ್ದ ಕಾರಣ ಹೈದರಾಬಾದ್​ನಲ್ಲಿರುವ ನನ್ನ ಅತ್ತೆ ಮನೆಗೆ ನಾನು ತೆರಳಿದೆ. ನನಗೆ ಸ್ವಲ್ಪ ಜ್ವರವೂ ಇತ್ತು. ಸೋಮವಾರ ತೆರಳಿದ ನನ್ನ ಪತಿ ಮತ್ತೆ ಹಿಂದಿರುಗಲಿಲ್ಲ. ಏನೋ ಕೆಲಸ ಇರಬಹುದು ಅಂದುಕೊಂಡೆ. ಆದರೆ, ಅವರು ಬಂಧನವಾಗಿರುವ ಸುದ್ದಿ ಮಾಧ್ಯಮದಿಂದ ತಿಳಿಯಿತು ಎಂದು ಶ್ಯಾಮಲಾ ಹೇಳಿದ್ದಾರೆ.
ನನ್ನ ಪತಿಯ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನಾವಿಬ್ಬರು ಮದುವೆ ಆಗಿ 10 ವರ್ಷ ಕಳೆದಿವೆ. ಅವರ ಬಗ್ಗೆ ನನಗೆ ಚೆನ್ನಾಗಿಯೇ ತಿಳಿದಿದೆ. ಅವರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ವ್ಯಕ್ತಿಯೇ ಅಲ್ಲ ಎಂದಿದ್ದಾರೆ. ಅಲ್ಲದೆ, ಈ ಪ್ರಕರಣದ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಕೇವಲ ಪ್ರಾಥಮಿಕ ಮಾಹಿತಿ ಆಧಾರದ ಮೇಲೆ ವರದಿ ಮಾಡಬೇಡಿ ಎಂದು ಶ್ಯಾಮಲಾ ಮಾಧ್ಯಮದವರನ್ನು ಮನವಿ ಮಾಡಿದ್ದಾರೆ.
ಸಂಪೂರ್ಣ ತನಿಖೆ ಮಾಡಲು ಪೊಲೀಸರಿಗೆ ಅವಕಾಶ ಮಾಡಿಕೊಡಿ. ಸತ್ಯ ಏನಿದೆ ಅದು ಹೊರಬರಲಿದೆ. ಆ ಬಳಿಕ ವಿಸ್ತೃತವಾಗಿ ಚರ್ಚಿಸೋಣ ಎಂದು ಶ್ಯಾಮಲಾ ಹೇಳಿದ್ದಾರೆ.(ಏಜೆನ್ಸೀಸ್​)
ಕೇರಳದಲ್ಲಿ ಆಕ್ಸಿಜನ್​ ಕೊರತೆಯಾಕಿಲ್ಲ? ನಿಜಕ್ಕೂ ಇತರೆ ರಾಜ್ಯಗಳಿಗಿದು ಮಾದರಿ, ಇಲ್ಲಿದೆ ಅಚ್ಚರಿಯ ಮಾಹಿತಿ
ಆಕ್ಸಿಜನ್​ ಕೊರತೆ ಉಂಟಾಗಿದ್ದು ಏಕೆ? ಪರಿಹಾರ ಏನು?
ರಾಜ್ಯದ ಆರ್ಥಿಕತೆಗೆ ಮತ್ತೆ ಹೊಡೆತ: ಮುಖ್ಯಮಂತ್ರಿ ಯಡಿಯೂರಪ್ಪ ಚಿಂತೆ ಹೆಚ್ಚಿಸಿದ ಬದ್ಧತಾ ವೆಚ್ಚ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
