ವಿಜಯವಾಡ:ದಂಪತಿ ಮತ್ತು ಮಕ್ಕಳಿಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಬಿ. ಕುಡೂರು ವಲಯದಲ್ಲಿ ಬರುವ ಸಗಿಲೇರು ಜಲಾಶಯದಲ್ಲಿ ನಡೆದಿದೆ.
ಶುಕ್ರವಾರ ಬೆಳಗ್ಗೆ ಮೃತದೇಹಗಳು ಪತ್ತೆಯಾಗಿವೆ. ಹತ್ತಿರದ ಗ್ರಾಮಸ್ಥರು ಜಲಾಶಯದಲ್ಲಿ ಶವಗಳು ತೇಲುತ್ತಿದ್ದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಮೃತದೇಹಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಪೊರುಮಾಮಿಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆಯ ಬಳಿಕ ಮೃತರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವರನ್ನು ಬಳ್ಳಾರಿ ರಾಮಕೃಷ್ಣ (43), ಪತ್ನಿ ಅನುಷಾ (35) ಮತ್ತು ಮಕ್ಕಳಾದ ನಿಖಿಲ್​ (4) ಹಾಗೂ ಕಲ್ಯಾಣ್​ (4 ತಿಂಗಳು) ಎಂದು ಗುರುತಿಸಲಾಗಿದೆ. ಮೃತರು ಪೊರುಮಾಮಿಲಾದ ಶ್ರೀರಾಮನಗರ ಕಾಲನಿಯ ನಿವಾಸಿಗಳು. ರಾಮಕೃಷ್ಣ, ಪಾಲಕರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ ಕೆಲ ಮಹತ್ವದ ಮಾಹಿತಿಗಳು ಬಯಲಾಗಿವೆ.
ಗುರುವಾರ ಮಧ್ಯಾಹ್ನ ರಾಮಕೃಷ್ಣ ಮತ್ತು ಅನುಷಾ ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟರು ಎಂದು ರಾಮಕೃಷ್ಣ ತಂದೆ ಹೇಳಿಕೆ ನೀಡಿದ್ದಾರೆ. ಅದಾದ ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿ ದೊರಕಲಿಲ್ಲ. ಫೋಟೋ ನೋಡಿದ ಮೇಲೆಯೇ ಅವರ ಬಗ್ಗೆ ಗೊತ್ತಾಗಿದ್ದು ಎಂದು ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ರಾಮಕೃಷ್ಣ ಫೈನಾನ್ಸ್​ ವ್ಯವಹಾರ ನಡೆಸುತ್ತಿದ್ದರು. ಅತ್ಯಧಿಕ ಸಾಲವಾಗಿದ್ದರಿಂದ ಹೆದರಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.(ಏಜೆನ್ಸೀಸ್​)
ಹದಗೆಟ್ಟ ಆರೋಗ್ಯ ಸ್ಥಿತಿ: ಕರೊನಾ ಸೋಂಕಿತ ಮಾವನನ್ನು ಹೊತ್ತು ಆಸ್ಪತ್ರೆಗೆ ಸಾಗಿದ ಸೊಸೆ!

ಇನ್ನು 24*7 ಬ್ಯಾಂಕ್ ಸೇವೆ; ಆ.1ರಿಂದ ಗ್ರಾಹಕರಿಗೆ ಎನ್​ಎಸಿಎಚ್ ಸೌಲಭ್ಯ ಲಭ್ಯ

ಅಮೆರಿಕ ಮಾಜಿ ಅಧ್ಯಕ್ಷರಿಗೆ ಶಾಕ್​ ಕೊಟ್ಟ​ ಫೇಸ್​ಬುಕ್​: 2 ವರ್ಷ ಡೊನಾಲ್ಡ್​ ಟ್ರಂಪ್ ಖಾತೆ ಬ್ಯಾನ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × two =
Remember me
