ತಿರುಪತಿ:ಆಂಧ್ರ ಪ್ರದೇಶದಲ್ಲಿ ಪ್ರಕೃತಿಯ ರೌದ್ರಾವತಾರ ಮುಂದುವರಿದಿದ್ದು, ವರುಣ ಆರ್ಭಟಕ್ಕೆ ಬಲಿಯಾದವರ ಸಂಖ್ಯೆ 24ಕ್ಕೆ ಏರಿದೆ. 100ಕ್ಕೂ ಹೆಚ್ಚು ಮಂದಿ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. 1,316 ಹಳ್ಳಿಗಳಿಗೆ ಹಾನಿಯಾಗಿದೆ. ಸುಮಾರು 24 ಸಾವಿರ ಮಂದಿ ಪ್ರವಾಹದ ಪರಿಣಾಮ ಎದುರಿಸಿದ್ದು, 20,923 ಮಂದಿಯನ್ನು ಪರಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಬೆಟ್ಟ-ಗುಡ್ಡಗಳಲ್ಲಿ ನೀರು ಧುಮುಕುತ್ತಿದೆ. ಹಳ್ಳಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಭಾರೀ ಪ್ರವಾಹದಿಂದಾಗಿ ವಿಶ್ವಪ್ರಸಿದ್ಧ ತಿರುಪತಿ ದೇವಸ್ಥಾನ ಜಲಾವೃತಗೊಂಡಿದ್ದು, ಯಾತ್ರಿಗಳು ಸಿಲುಕಿಕೊಂಡಿದ್ದಾರೆ. ಆಂಧ್ರದಲ್ಲಿ ಬಹಳ ಸಂಕಷ್ಟ ಸಮಯ ಬಂದೊದಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ.
ಶನಿವಾರದವರೆಗೆ ಪ್ರವಾಹದಿಂದ 2.31 ಕೋಟಿ ರೂಪಾಯಿ (ಬೆಳೆ ಹಾನಿ ಹೊರತುಪಡಿಸಿ) ನಷ್ಟವಾಗಿದೆ. ಅಂದಾಜಿನ ಪ್ರಕಾರ, ಸುಮಾರು 488 ಮನೆಗಳು ಮುಳುಗಿದ್ದರೆ, 1,549 ಮನೆಗಳು ಹಾನಿಗೊಳಗಾಗಿವೆ. ಶನಿವಾರ ಸುರಿದ ಭಾರೀ ಮಳೆಯಿಂದ ಕದ್ರಿಯಲ್ಲಿ ಕಟ್ಟಡ ಕುಸಿದು ಅನಂತಪುರ ಜಿಲ್ಲೆಯ ಕದ್ರಿಯಲ್ಲಿ ಮೂವರು ಮಕ್ಕಳು ಸೇರಿ 5 ಮಂದಿ ಮೃತಪಟ್ಟಿದ್ದಾರೆ.
ಶನಿವಾರ ಬೆಳಗ್ಗೆ ಪ್ರವಾಹದಿಂದ ಸಿಲುಕಿದ್ದ ಬುಚ್ಚಿರೆಡ್ಡಿಪಾಳ್ಯಂ ಮಂಡಲದ ದಾಮರಮಡುಗು ಗ್ರಾಮದ ಜನರನ್ನು ರಕ್ಷಿಸಲು ಪ್ರಯತ್ನದಲ್ಲಿರುವಾಗ ಎಸ್​ಡಿಆರ್​ಎಫ್​ ಪೊಲೀಸ್​ ಕಾನ್ಸ್​ಟೇಬಲರ್​ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಆಂಧ್ರದ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತರನ್ನು ಕೆಲ್ಲಾ ಶ್ರೀನಿವಾಸ್​ ರಾವ್​ ಎಂದು ಗುರುತಿಸಲಾಗಿದೆ. ಇವರು ವಿಜಯನಗರದ ಎಸ್​ಡಿಆರ್​ಎಫ್​ ತಂಡದ 5ನೇ ಬೆಟಾಲಿಯನ್​ ಕಾನ್ಸ್​ಟೇಬಲ್​ ಆಗಿದ್ದರು. ರಕ್ಷಣಾ ಕಾರ್ಯಾಚರಣೆ ವೇಳೆ ಇಂದು ಬೆಳಗ್ಗೆ 8.30ಕ್ಕೆ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
#APPoliceconstable sacrifices his life in the service of people:Kella Srinivasa Rao, PC 5th Bn#SDRFof#Vizianagaramdrowned&succumbed today at 8.30 am at Damaramadugu(V), Buchhireddy Palem(M),#NelloreDistrict in a rescue operation to save the villagers stranded in floods.pic.twitter.com/n17wlBsENE
— Andhra Pradesh Police (@APPOLICE100)November 20, 2021

ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಶನಿವಾರ ಚಿತ್ತೂರು ಮತ್ತು ಕಡಪ ಜಿಲ್ಲೆಗಳಲ್ಲಿ ಮಳೆ ಹಾನಿಗೊಳಗಾಗಿ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಕಡಪ, ರೇಣಿಗುಂಟಾ, ತಿರುಪತಿ ಪಟ್ಟಣದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಯನ್ನು ವೀಕ್ಷಿಸಿದ ಅವರು, ಪಾಪಾಗ್ನಿ ಮತ್ತು ಪೆನ್ನಾ ನದಿಯಿಂದ ಹಾನಿಗೊಳಗಾದ ಪೇರೂರು ಯೋಜನೆ ಮತ್ತು ಸ್ವರ್ಣಮುಖಿ ನದಿ ಪ್ರದೇಶಗಳ ಸಮೀಕ್ಷೆ ನಡೆಸಿದರು.
ಕಡಪ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ, ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ನೌಕಾಪಡೆ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಪರಿಹಾರ ಕ್ರಮಗಳ ಕುರಿತು ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಮಾತನಾಡಿದರು. ಪ್ರವಾಹದಿಂದ ತೀವ್ರ ಹಾನಿಗೊಳಗಾದ ವೆಲಿಗಲ್ಲು ಮತ್ತು ಅನ್ನಮಯ್ಯ ನೀರಾವರಿ ಯೋಜನೆ ಪ್ರದೇಶವನ್ನು ಪರಿಶೀಲಿಸಿದರು. ಪಿಂಚಾ ಯೋಜನೆ ಮತ್ತು ಚೆಯ್ಯೆರು ನದಿಯಿಂದ ಹಾನಿಗೊಳಗಾದ ಪ್ರದೇಶಗಳು ಮತ್ತು ಇತರ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದರು.
ಇದೇ ವೇಳೆ ತಿರುಪತಿ ನಗರದಲ್ಲಿ ಸ್ವಚ್ಛತಾ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಹಾಗೂ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕುರಿತು ಮಾಸ್ಟರ್ ಪ್ಲಾನ್ ತಯಾರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ವಿವಿಧ ಪುರಸಭೆಗಳಿಂದ 500 ಸಿಬ್ಬಂದಿಯನ್ನು ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಮತ್ತು ರಸ್ತೆಗಳಲ್ಲಿ ಸಂಗ್ರಹವಾಗಿರುವ ಕಸವನ್ನು ತೆರವುಗೊಳಿಸಲು ಮತ್ತು ಚರಂಡಿಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
ಬೆಳೆ ಹಾನಿ ಅಂದಾಜನ್ನು ಪಟ್ಟಿಯನ್ನು ತ್ವರಿತವಾಗಿ ಸಿದ್ಧಪಡಿಸಿ, ರೈತರಿಗೆ ಬೆಂಬಲ ನೀಡುವ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು. ಪ್ರವಾಹ ಪೀಡಿತ ಕುಟುಂಬಗಳಿಗೆ ತಕ್ಷಣದ ಆರ್ಥಿಕ ನೆರವು ಮತ್ತು ಅವರು ತಮ್ಮ ಮನೆಗೆ ಮರಳಿದಾಗ ಅವರಿಗೆ ಸಹಾಯ ಮಾಡುವ ಕಾರ್ಯವನ್ನು ಅಧಿಕಾರಿಗಳಿಗೆ ವಹಿಸಲಾಗಿದೆ.(ಏಜೆನ್ಸೀಸ್​)
ಮೇಕೆ ಕಳ್ಳರನ್ನು ಚೇಸ್​ ಮಾಡಿದ ಇನ್ಸ್​ಪೆಕ್ಟರ್​ ಬರ್ಬರ ಹತ್ಯೆ: ದುಷ್ಕರ್ಮಿಗಳ ಕೃತ್ಯಕ್ಕೆ ಬೆಚ್ಚಿದ ಸ್ಥಳೀಯರು

2 ಮಕ್ಕಳ ತಾಯಿಯ ಪ್ರೀತಿಯ ಬಲೆಯಲ್ಲಿ ಬಿದ್ದ ಯುವಕ: ಆಕೆಯ ಮಾತು ನಂಬಿ ಹೋದವನ ಬಾಳಲ್ಲಿ ಕತ್ತಲು!

ಇದು ವಿಶ್ವದ ಅತ್ಯಂತ ಶ್ರೀಮಂತ ಶ್ವಾನ: ಇದರ ಹೆಸರಲ್ಲಿರೋ ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ಬೆರಗಾಗ್ತೀರಾ!

ಈಗ ರದ್ದಾದರೂ ಮುಂದೆ ಜಾರಿಯಾಗತ್ತಾ ಕೃಷಿ ಕಾನೂನು? ಸೂಚನೆ ಕೊಟ್ಟ ರಾಜ್ಯಪಾಲ ಮಿಶ್ರಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
