ವಿಜಯವಾಡ:ನಿಜವಾದ ಪ್ರೀತಿಯು ಜಾತಿ, ಧರ್ಮ, ಬಣ್ಣ, ಭಾಷೆ ಹಾಗೂ ಗಡಿ ಎಲ್ಲವನ್ನು ಮೀರಿದ್ದು ಎಂಬುದಕ್ಕೂ ಹಾಗೂ ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತಿಗೂ ಆಂಧ್ರ ಪ್ರದೇಶದಲ್ಲಿ ನಡೆದ ಈ ಒಂದು ಮದುವೆ ತಾಜಾ ನಿದರ್ಶನವಾಗಿದೆ.

ಆಂಧ್ರ ಯುವತಿ, ಅಮೆರಿಕ ಯುವಕ ಎತ್ತಣದಿಂದೆತ್ತಣ ಸಂಬಂಧವಯ್ಯ ಎಂದೆನಿಸಬಹುದು. ಆದರೆ, ನಿರ್ಮಲವಾದ ಪ್ರೀತಿ ಎರಡು ಹೃದಯಗಳನ್ನು ಬೆಸೆದು ಮದುವೆ ಎಂಬ ಬಂಧನದಲ್ಲಿ ಇರಿಸಿದೆ. ಹೌದು, ಆಂಧ್ರದ ಟಿ. ಹರ್ಷವಿ ಹಾಗೂ ಅಮೆರಿಕದ ದಮಿಯನ್​​ ಫ್ರ್ಯಾಂಕ್​ ಹಿಂದು ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.

ವಧು ಹರ್ಷವಿ, ತಿರುಪತಿಯ ಜಯಚಂದ್ರ ರೆಡ್ಡಿ ಮತ್ತು ರಾಜೇಶ್ವರಿ ದಂಪತಿಯ ಪುತ್ರಿ. ಬಿ.ಟೆಕ್​ ಪೂರ್ಣಗೊಳಿಸಿರುವ ಹರ್ಷವಿ, ಅಮೆರಿಕದ ಬೋಸ್ಟನ್​ನಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ಕಂಪನಿಯಲ್ಲಿ ಜನರಲ್​ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿರುವ ದಾಮಿಯನ್​ ಫ್ರ್ಯಾಂಕ್​ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ, ಬಳಿಕ ಹಿರಿಯನ್ನು ಒಪ್ಪಿಸಿ, ಇದೀಗ ಇಬ್ಬರು ಸಪ್ತಪದಿ ತುಳಿಯುವ ಮೂಲಕ ತಮ್ಮ ಸಂಬಂಧಕ್ಕೆ ಒಂದು ಹೊಸ ಅರ್ಥವನ್ನು ನೀಡಿದ್ದಾರೆ.

ಈಗಾಗಲೇ ಅಮೆರಿದಲ್ಲಿ ಈ ಜೋಡಿ ಮದುವೆಯಾಗಿದ್ದಾರೆ. ಆದರೆ, ಹರ್ಷವಿ ಕುಟುಂಬದ ಒತ್ತಾಯದ ಮೇರೆಗೆ ತಿರುಪತಿಯಲ್ಲಿ ಮತ್ತೊಮ್ಮೆ ವಿವಾಹ ಕಾರ್ಯ ನೆರವೇರಿದೆ. ತಿರುಪತಿಯ ಹೋಟೆಲ್​ ಒಂದರಲ್ಲಿ ಕಳೆದ ಗುರುವಾರ ರಾತ್ರಿ ಅದ್ಧೂರಿ ಮದುವೆ ನಡೆದಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಸಾಕಷ್ಟು ಹಿತೈಷಿಗಳ ನಡುವೆ ಹರ್ಷವಿ ಮತ್ತು ಫ್ರ್ಯಾಂಕ್​ ಮತ್ತೊಮ್ಮೆ ಮದುವೆ ಆಗಿದ್ದಾರೆ.(ಏಜೆನ್ಸೀಸ್​)

25 ಲಕ್ಷ ರೂಪಾಯಿದ್ದೇ ಗುಸುಗುಸು… ನರೇಶ್​-ಪವಿತ್ರಾ ಬಗ್ಗೆ ಟಾಲಿವುಟ್​ನಲ್ಲಿ ಹರಿದಾಡ್ತಿದೆ‌ ಸೆನ್ಸೇಷನಲ್‌ ನ್ಯೂಸ್

ಒಂದು ಮಗುವಿನ ತಂದೆಯೊಂದಿಗೆ ಸಂಬಂಧ! ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಜಯಶ್ರೀ ಆರಾಧ್ಯ

22 ವರ್ಷದ ಪ್ರೇಯಸಿಗೆ ಕಾರ್​ ಗಿಫ್ಟ್​ ಮಾಡಲು ಪತ್ನಿಯ ಚಿನ್ನಾಭರಣ ಕದ್ದ 44 ವರ್ಷದ ವ್ಯಕ್ತಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − fourteen =
Remember me
