ಚಿತ್ತೂರು:ಮೂರು ದಿನಗಳಿಂದ ನನ್ನ ಪತಿ ಕಾಣುತ್ತಿಲ್ಲ ಎಂದು ಯುವತಿಯೊಬ್ಬಳು ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದ್ದು, ಅತ್ತೆ ಮನೆಯ ವಿರುದ್ಧ ಆರೋಪ ಮಾಡಿದ್ದಾಳೆ.
ಆಂಧ್ರದ ನಲ್ಗೊಂಡ ಜಿಲ್ಲೆಯ ಚಿಂತಪಲ್ಲಿ ಮಂಡಲದ ಮೊಹಮ್ಮೆದ್​ ಸನಾ, ಮದನಪಲ್ಲಿ ಗ್ರಾಮೀಣ ವಲಯದ ವಂದ್ಲಪಲ್ಲಿ ಮೂಲದ ರಮೇಶ್​ ಕುಮಾರ್​ ಎಂಬಾತನ್ನು ಮದುವೆ ಆಗಿದ್ದಾಳೆ. ಇಬ್ಬರು ಪ್ರೀತಿಸಿ ಕಳೆದ ಜನವರಿ 4ರಂದು ಮದನಪಲ್ಲಿಯ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ.
ಮದುವೆಯಾದ ಮರು ದಿನದಿಂದಲೇ ಅತ್ತೆ ಮನೆಯವರು ಕಿರುಕುಳ ನೀಡಲು ಆರಂಭಿಸಿದರು ಎಂದು ಸನಾ ಆರೋಪಿಸಿದ್ದಾರೆ. ಮದನಪಲ್ಲಿಯಲ್ಲಿ ಬಾಡಿಗೆ ಮನೆಯೊಂದಕ್ಕೆ ಇತ್ತೀಚೆಗಷ್ಟೇ ಸ್ಥಳಾಂತರವಾದೆವು. ಮೂರು ದಿನಗಳ ಹಿಂದೆ ಹೊರ ಹೋಗಿ ಬರುವುದಾಗಿ ಹೇಳಿ ಹೋದ ರಮೇಶ್​ ಮತ್ತೆ ಮರಳಿ ಬಂದಿಲ್ಲ. ನನ್ನ ಪತಿಯನ್ನು ನನ್ನ ಅತ್ತೆಯೇ ಬಚ್ಚಿಟ್ಟಿದ್ದಾರೆಂದು ಸನಾ ಆರೋಪಿಸಿದ್ದಾರೆ.
ಈ ಸಂಬಂಧ ಸನಾ ಪೊಲೀಸ್​ ಠಾಣೆಯಲ್ಲಿ ದೂರು ಸಹ ಸಲ್ಲಿಸಿದ್ದಾರೆ. ರಮೇಶ್​ನನ್ನು ಬಿಟ್ಟುಬಿಡುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸನಾ ಹೇಳಿದ್ದಾರೆ. ಇತ್ತ ಸನಾ ವಿರುದ್ಧ ರಮೇಶ್​ ಕುಟುಂಬ ಕೂಡ ದೂರು ದಾಖಲಿಸಿದೆ. ಸನಾ ಕುಟುಂಬವೂ ರಮೇಶ್​ ಕುಟುಂಬದ ವಿರುದ್ಧ ದೂರು ದಾಖಲಿಸಿದೆ. ಎರಡು ದೂರನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
VIDEO: ಆರು ಮಂದಿ ಸೇಮ್​ ಸೇಮ್​, ನನ್ನಮ್ಮ ಯಾರು? ಕೊನೆಗೂ ಕಂದಮ್ಮ ಸಕ್ಸಸ್​: ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಶಾಲಾ ಸಮವಸ್ತ್ರದಲ್ಲಿ ಬಂದ ಹುಡುಗಿಯಿಂದ ನೀಚ ಕೃತ್ಯ: ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ!

ಚಿಕನ್​ ಪ್ರಿಯರಿಗೆ ಶಾಕಿಂಗ್​ ನ್ಯೂಸ್​! ಈ ಒಂದು ಕಾರಣದಿಂದ ಕೋಳಿ ಮಾಂಸದ ಬೆಲೆ ಇನ್ನಷ್ಟು ಹೆಚ್ಚಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
