ವಿಜಯನಗರ:ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ಹೋಮ್​ ಗಾರ್ಡ್ಸ್​ ಉಸ್ತುವಾರಿಯಾಗಿದ್ದ ಸಶಸ್ತ್ರ ಮೀಸಲು ಪೊಲೀಸ್ ಇನ್ಸ್​ಪೆಕ್ಟರ್ ಪಿ. ಈಶ್ವರ ರಾವ್​ (34) ಅವರು ಸೇವಾ ರಿವಾಲ್ವರ್​ನಲ್ಲಿ ಫೈರಿಂಗ್​ ಮಾಡಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿರುವ ಪೊಲೀಸ್​ ಕ್ವಾಟ್ರಸ್​ನ ತಮ್ಮ ವಸತಿ ಗೃಹದಲ್ಲಿ ಘಟನೆ ನಡೆದಿದೆ. ಭಾನುವಾರ ಮಧ್ಯಾಹ್ನ 12 ಗಂಟೆಗೆ ಮನೆಯಲ್ಲಿದ್ದ ಈಶ್ವರ ರಾವ್​, ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡು ಫೈರಿಂಗ್​ ಮಾಡಿಕೊಂಡಿದ್ದಾರೆ. ಈ ವೇಳೆ ಅವರ ಪತ್ನಿ ಹರಿಪ್ರಿಯಾ ಮನೆಯಲ್ಲಿದ್ದರು. ಫೈರಿಂಗ್​ ಶಬ್ದ ಕೇಳಿ ಆಘಾತಕ್ಕೆ ಒಳಗಾದ ಹರಿಪ್ರಿಯಾ, ಗಂಡನ ಸ್ಥಿತಿ ನೋಡಿ ತಕ್ಷಣ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದರು.
ಈಶ್ವರ್​ ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಿದಾದರೂ ಅಷ್ಟರಲ್ಲಾಗಲೇ ಈಶ್ವರ್​ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ. ದೀಪಿಕಾ ಅವರು ಮಾಹಿತಿ ಪಡೆದುಕೊಂಡಿದ್ದಾರೆ. ಈಶ್ವರ ರಾವ್​ ಅವರು ಪೂರ್ವ ಗೋದಾವರಿ ಜಿಲ್ಲೆಯ ವೇದುರುಪಕ ಸವರಮ್​ ಮೂಲದವರು. 2011ರಲ್ಲಿ ಆರ್​ಎಸ್​ಐ ಆಗಿ ಪೊಲೀಸ್​ ಇಲಾಖೆ ಸೇರಿದರು.
2020ರಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆದ ಇನ್ಸ್​ಪೆಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಾಲ್ಕು ವರ್ಷದ ಹಿಂದಷ್ಟೇ ಹರಿಪ್ರಿಯಾ ಎಂಬುವರನ್ನು ಮದುವೆಯಾಗಿದ್ದಾರೆ. ಮೂರು ವರ್ಷದ ಹೆಣ್ಣು ಮಗಳಿದ್ದಾಳೆ. ಹರಿಪ್ರಿಯಾ ಪ್ರಸ್ತುತ 7 ತಿಂಗಳ ಗರ್ಭಿಣಿ. ವೈಯಕ್ತಿಕ ಕಾರಣಗಳಿಂದ ಈಶ್ವರ್​ ರಾವ್​ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ನಂಬಲಾಗಿದೆ. ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭವಾಗಿದೆ.(ಏಜೆನ್ಸೀಸ್​)
ಷಣ್ಮುಖ​ ಜಸ್ವಂತ್ ಮುಖವಾಡ ಬಯಲು: ಇನ್​ಸ್ಟಾಗ್ರಾಂ ಲೈವ್​ನಲ್ಲಿ ಕಣ್ಣೀರಧಾರೆ ಹರಿಸಿದ ನಟಿ ದೀಪ್ತಿ ಸುನೈನಾ!​

ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಕೋವಿಡ್​ ಪರೀಕ್ಷೆ ಒಂದು ಹಗರಣ: ಪ್ರಯಾಣಿಕನ ಆರೋಪ

ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಅಟ್ಟಹಾಸ: ಮುಸುಕುಧಾರಿಯಿಂದ ಕಾರಿನ ಮೇಲೆ ಕಲ್ಲು ತೂರಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
