ರಾಜಮಂಡ್ರಿ:ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಸೊಸೆಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮಲ್ಕಿಪುರಂ ಮಂಡಲದ ಮೆಡಿಚೆರ್ಲಾ ಪಾಳ್ಯಂನಲ್ಲಿ ನಡೆದಿದೆ.
ಮೃತ ಸೊಸೆಯನ್ನು ಪ್ರಿಯಾಮಣಿ (25) ಎಂದು ಹಾಗೂ ಆರೋಪಿ ಮಾವನನ್ನು ಸತ್ಯನಾರಾಯಣ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಪ್ರಿಯಾಮಣಿ, ಸತ್ಯನಾರಾಯಣ ಮಗ ವಿಜಯ್​ ಕುಮಾರ್​ನನ್ನು ಮದುವೆ ಆಗಿದ್ದಳು. ವಿಜಯ್​ ಕತಾರ್​ನಲ್ಲಿ ಕೆಲಸ ಮಾಡುತ್ತಿದ್ದಾನೆ.
ಪ್ರಿಯಾಮಣಿಯ ಪಾಲಕರು ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದಲ್ಲಿ ನೆಲೆಸಿದ್ದಾರೆ. ಪ್ರಿಯಾಮಣಿ ಮತ್ತೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಕ್ಕೆ ಸತ್ಯನಾರಾಯಣ ಹಾಗೂ ಪ್ರಿಯಾಮಣಿ ಕುಟುಂಬದ ನಡುವೆ ಅನೇಕ ದಿನಗಳಿಂದಲೂ ಘರ್ಷಣೆ ಉಂಟಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 22ರಂದು ಸತ್ಯನಾರಾಯಣ ಸೊಸೆ ಪ್ರಿಯಾಮಣಿ ವಿರುದ್ಧ ದೂರು ನೀಡಿದ್ದ. ಬೇರೊಬ್ಬ ಯುವಕನೊಂದಿಗೆ ಆಕೆ ಓಡಿ ಹೋಗಿದ್ದಾಳೆ ಎಂದು ಆರೋಪಿಸಿದ್ದರು. ಪೊಲೀಸ್​ ಮಧ್ಯಸ್ತಿಕೆಯಿಂದಾಗಿ ಪ್ರಿಯಾಮಣಿ ಮನೆಗೆ ಹಿಂತಿರುಗಿದ್ದಳು. ಸಂಧಾನ ಮಾಡಿ ಮನೆಗೆ ಕಳುಹಿಸಲಾಗಿತ್ತು.
ಎಲ್ಲವೂ ಸರಿಹೋಯಿತು ಅಂದುಕೊಳ್ಳುವಷ್ಟರಲ್ಲಿ ಶುಕ್ರವಾರ ರಾತ್ರಿ ಪ್ರಿಯಾಮಣಿ ಮತ್ತು ಸತ್ಯನಾರಾಯಣನ ನಡುವೆ ಜಗಳ ನಡೆದಿದೆ. ಗಲಾಟೆ ತಾರಕಕ್ಕೇರಿ ತಾಳ್ಮೆ ಕಳೆದುಕೊಂಡ ಸತ್ಯನಾರಾಯಣ ಅಂಡಮಾನ್​ನಿಂದ ಬಂದಿದ್ದ ಪ್ರಿಯಾಮಣಿ ತಾಯಿಯ ಮುಂದೆಯೇ ಆಕೆಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಸದ್ಯ ಸತ್ಯನಾರಾಯಣನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.(ಏಜೆನ್ಸೀಸ್​)
ಯುವತಿಯರನ್ನು ನಂಬಿಸಿ, ಬೆದರಿಸಿ ಅಶ್ಲೀಲ ವಿಡಿಯೋ ಚಿತ್ರೀಕರಣ: ಪೊಲೀಸ್ ಬಲೆಗೆ ಬಿದ್ದ ನಟಿ ನಂದಿತಾ!

ತಿ.ನರಸೀಪುರದಲ್ಲೊಬ್ಬ ಪೋಲಿ ಪ್ರೊಫೆಸರ್​! ತರಗತಿಯಲ್ಲೂ ಹಗ್​, ಕಿಸ್​ ಅನ್ನುತ್ತಾನೆ…

ಗ್ರ್ಯಾಂಡ್​ ಫಿನಾಲೆಗೂ ಮುನ್ನ ಶಾಕಿಂಗ್​ ನ್ಯೂಸ್​ ಕೊಟ್ಟ ಬಿಗ್​ಬಾಸ್ ಡೈರೆಕ್ಟರ್​: ಶೋ ಇತಿಹಾಸದಲ್ಲೇ ಇದು ಮೊದಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
