ಲಖನೌ:ಇಂದಿನ ಕಾಲದಲ್ಲಿ ಮದುವೆ ಮಾಡಿಕೊಳ್ಳಲು ಕೆಲವರು ನಾನಾ ವೇಷ ಧರಿಸುತ್ತಾರೆ. ಒಂದಿಷ್ಟು ಮಂದಿ ಮದುವೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ, ಇನ್ನೊಂದಿಷ್ಟು ಮಂದಿಗೆ ಅದೃಷ್ಟ ಕೈಕೊಡುತ್ತದೆ. ಇಂಥದ್ದೆ ಘಟನೆ ಇದೀಗ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅಂದುಕೊಂಡಂತೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿತ್ತು. ಆದರೆ, ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವರನ ತಲೆಯಿಂದ ವಿಗ್​ ಕಳಚಿ ಬಿದ್ದು, ಮದುವೆ ರದ್ದಾದ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ಆಗಿದ್ದೇನು?ಕಾನ್ಪುರದ ವರ ಮದುವೆಯ ಅಂತಿಮ ಸಂಪ್ರದಾಯಕ್ಕಾಗಿ ಇನ್ನೇನು ಮಂಟಪಕ್ಕೆ ಕಾಲಿಡಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ಆತ ಮೂರ್ಛೆ ತಪ್ಪಿ ನೆಲಕ್ಕೆ ಬಿದ್ದನು. ಈ ವೇಳೆ ಅವನ ತಲೆಯಿಂದ ವಿಗ್ ಬೇರ್ಪಟ್ಟು ಹೊರಬಂದಿತು. ಈ ವೇಳೆ ಆತನ ಬೋಳು ತಲೆಯನ್ನು ಎಲ್ಲರು ನೋಡಿದರು. ಮದುವೆಗೂ ಮುನ್ನ ವಧುವಿನ ಕುಟುಂಬಕ್ಕೆ ಹೇಳದೇ ಇದನ್ನು ಮರೆಮಾಚಲಾಗಿತ್ತು. ಯಾವಾಗ ಈ ವಿಚಾರ ವಧುವಿಗೆ ತಿಳಿಯಿತೋ ಆಕೆ ಮದುವೆ ಮಂಟಪಕ್ಕೆ ಕಾಲಿಡಲು ಹಿಂದೇಟು ಹಾಕಿದಳು.
ಎಷ್ಟೇ ಮನವರಿಕೆ ಮಾಡಿದರೂ ವಧು ಮಾತ್ರ ತನ್ನ ನಿಲುವನ್ನು ಬದಲಿಸಲೇ ಇಲ್ಲ. ಈ ವಿಚಾರ ಕೊನೆಗೆ ಸ್ಥಳೀಯ ಪೊಲೀಸ್​ ಠಾಣೆಯ ಮೆಟ್ಟಿಲೇರಿತು. ಪೊಲೀಸರು ಕೂಡ ಮಧ್ಯ ಪ್ರವೇಶಿಸಿ ವಧುವಿನ ಮನವೊಲಿಕೆಗೆ ಪ್ರಯತ್ನಿಸಿದಾದರೂ ಆಕೆ ಮಾತ್ರ ತನ್ನ ನಿಲುವಿನಿಂದ ಒಂದು ಚೂರು ಕದಲಿಲ್ಲ. ಕೊನೆಗೂ ಪಂಚಾಯಿತಿ ಮಟ್ಟದಲ್ಲಿ ಒಂದು ತೀರ್ಮಾನಕ್ಕೆ ಬರಲಾಯಿತು. ಈ ಮದುವೆಗೆ ವಧುವಿನ ಕಡೆಯವರು 5.66 ಲಕ್ಷ ರೂ. ಖರ್ಚು ಮಾಡಿದ್ದರು. ಅದನ್ನು ಹಿಂತಿರುಗಿಸುವಂತೆ ವರನ ಕುಟುಂಬಕ್ಕೆ ಹೇಳಲಾಯಿತು. ಅದಕ್ಕೆ ವರನ ಕುಟುಂಬವೂ ಸಹ ಒಪ್ಪಿಗೆ ನೀಡಿ ಬಂದ ದಾರಿಗೆ ಸುಂಕವಿಲ್ಲ ಮತ್ತು ಹೆಣ್ಣೂ ಇಲ್ಲ ಅಂದುಕೊಂಡು ಹಿಂತಿರುಗಿದರು.
ಅಂದಹಾಗೆ ವರ, ಕಾನ್ಪುರದ ನಿವಾಸಿ. ಆತ ಬೋಳು ತಲೆಯವರು ಎಂಬ ವಿಚಾರವನ್ನು ಮರೆಮಾಚಬಾರದಿತ್ತು ಎಂದು ವಧುವಿನ ಚಿಕ್ಕಪ್ಪ ಹೇಳಿದ್ದಾರೆ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸಿ ಅಂತಾರೆ ಆದರೆ, ಒಂದೇ ಒಂದು ಸುಳ್ಳು ಮದುವೆಯನ್ನೇ ಮುರಿದು ಬಿಡ್ತು. ಕೊನೆಯ ಗಳಿಗೆಯಲ್ಲಿ ವರನಿಗೆ ಅದೃಷ್ಟ ಕೈಕೊಟ್ಟು ಆತನ ವಿಗ್​ ಕೆಳಬಿದ್ದು, ಮದುವೆಯೇ ರದ್ದಾಗಿದ್ದು ದುರಂತ ಅಂತ್ಯವೇ ಸರಿ.(ಏಜೆನ್ಸೀಸ್​)
ಇಡೀ ರಾಜ್ಯ ಕಂಬನಿ ಮಿಡಿದಿದ್ದ ವಿಸ್ಮಯ ಸಾವು ಪ್ರಕರಣ: 9 ತಿಂಗಳ ನಂತ್ರ ಸ್ಫೋಟಕ ಆಡಿಯೋ ಬಹಿರಂಗ!

ಬಾಡಿಗೆ ಕಾರಿನೊಳಗೆ ಪೆಟ್ರೋಲ್​ ಸುರಿದುಕೊಂಡು ಪ್ರೇಮಿಗಳಿಬ್ಬರ ದುರಂತ ಸಾವು: ಉಡುಪಿಯಲ್ಲಿ ದುರ್ಘಟನೆ

ನಿಮ್ಮ ಕಣ್ಣಿಗೊಂದು ಸವಾಲ್​: ಈ ಫೋಟೋದಲ್ಲಿರುವ ಬಾಲಕಿಯನ್ನು ಪತ್ತೆಹಚ್ಚಿದ್ರೆ ನಿಮಗೆ ಫುಲ್​ ಮಾರ್ಕ್ಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 8 =
Remember me
