ಲಖನೌ:ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸರಯೂ ನದಿಯ ದಂಡೆಯಲ್ಲಿರುವ ಘಾಟ್‌ಗಳ ಸರಣಿ ರಾಮ್ ಕಿ ಪೈಡಿಯಲ್ಲಿ ಸ್ನಾನ ಮಾಡುವಾಗ ಸಾರ್ವಜನಿಕವಾಗಿ ಪತ್ನಿಗೆ ಮುತ್ತಿಟ್ಟ ವ್ಯಕ್ತಿಯನ್ನು ಪಕ್ಕದಲ್ಲೇ ಇದ್ದ ಜನರ ಗುಂಪು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ತಮ್ಮ ಸುತ್ತಮುತ್ತ ಜನರಿದ್ದರು ಘಾಟ್​ನಲ್ಲಿ ಸ್ನಾನ ಮಾಡುತ್ತಿದ್ದ ದಂಪತಿ ಪರಸ್ಪರ ಚುಂಬಿಸುವುದನ್ನು ನೋಡಿದ ವ್ಯಕ್ತಿಯೊಬ್ಬ ಮಹಿಳೆಯ ಗಂಡನನ್ನು ಎಳೆದುಕೊಂಡು ಹೊಡೆಯಲು ಆರಂಭಿಸುತ್ತಾನೆ. ಈ ವೇಳೆ ಅಲ್ಲಿದ್ದ ಜನರೆಲ್ಲ ಸೇರಿ ಆತನ ಮೇಲೆ ಹಲ್ಲೆ ಮಾಡುವಾಗ ತನ್ನ ಗಂಡನ ಮೇಲೆ ಹಲ್ಲೆ ಮಾಡದಂತೆ ಪತ್ನಿ ತಡೆಯಲು ಯತ್ನಿಸುತ್ತಾಳೆ. ಇಬ್ಬರನ್ನು ನೀರಿನಿಂದ ಹೊರಗೆಳೆದು ಮಹಿಳೆಯ ಗಂಡನನ್ನು ಸುತ್ತುವರಿದು ಹಲ್ಲೆ ಮಾಡುತ್ತಾರೆ. ಇದಿಷ್ಟನ್ನು ವಿಡಿಯೋ ರೆಕಾರ್ಡ್​ ಮಾಡಲಾಗಿದೆ.
ಅಯೋಧ್ಯೆಯಲ್ಲಿ ಈ ಅಸಭ್ಯತೆಯನ್ನು ಸಹಿಸಲಾಗುವುದಿಲ್ಲ ಎಂದು ಕೋಪಗೊಂಡ ಗುಂಪಿನ ಯುವಕ ಹೇಳಿರುವುದು ವಿಡಿಯೋದಲ್ಲಿದೆ.
This man did a ‘mistake’ of kissing his wife – Ram Bhakts in Ayodhya misbehaved with his wife and beat up the man! Kissing is not Indian culture, but lynching has become one.pic.twitter.com/GHKXTbBNLP
— Ashok Swain (@ashoswai)June 22, 2022

ವಿಡಿಯೋವನ್ನು ಅಶೋಕ್​ ಸ್ವೈನ್​ ಎಂಬುವರು ಶೇರ್​ ಮಾಡಿಕೊಂಡಿದ್ದಾರೆ. ಈ ವ್ಯಕ್ತಿ ತನ್ನ ಹೆಂಡತಿಗೆ ಮುತ್ತು ನೀಡಿ ತಪ್ಪು ಮಾಡಿಬಿಟ್ಟ. ಅಯೋಧ್ಯೆಯಲ್ಲಿರುವ ರಾಮಭಕ್ತರು ಹಲ್ಲೆಗೊಳಗಾದ ವ್ಯಕ್ತಿಜಯ ಪತ್ನಿಯ ಜತೆ ಅಸಭ್ಯವಾಗಿ ವರ್ತಿಸಿ, ವ್ಯಕ್ತಿಯನ್ನು ಥಳಿಸಿದ್ದಾರೆ, ಮುತ್ತಿಡುವುದು ಭಾರತೀಯ ಸಂಸ್ಕೃತಿಯಲ್ಲವಂತೆ. ಆದರೆ, ಗುಂಪು ಹಲ್ಲೆ ಸಂಸ್ಕೃತಿಯಲ್ಲಿ ಒಂದಂತೆ ಎಂದು ಅಶೋಕ್​ ಸ್ವೈನ್​ ಎಂಬುವರು ಟೀಕಿಸಿದ್ದಾರೆ.
ಸದ್ಯ ವಿಡಿಯೋ ವೈರಲ್​ ಆಗಿದ್ದು, ಈಗಾಗಲೇ 1 ಮಿಲಿಯನ್​ಗೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ವಿಡಿಯೋಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ಘಟನೆಯ ಬಗ್ಗೆ ಮಾತನಾಡಿರುವ ಅಯೋಧ್ಯೆಯ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಶೈಲೇಶ್ ಪಾಂಡೆ, ಈ ವಿಡಿಯೋ ಒಂದು ವಾರ ಹಳೆಯದಾಗಿದೆ ಮತ್ತು ಈ ವಿಷಯದಲ್ಲಿ ನಮಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಈಗ ದಂಪತಿಗಳು ಎಲ್ಲಿ ವಾಸಿಸುತ್ತಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಕ್ರಮ ತೆಗೆದುಕೊಳ್ಳಲು ಬಯಸಿದರೆ ಅವರು ದೂರು ದಾಖಲಿಸಬಹುದು ಎಂದಿದ್ದಾರೆ.(ಏಜೆನ್ಸೀಸ್​)
ಕ್ಯಾಮೆರಾ ಕಂಡೊಡನೆ ಕಾಲ್ಕಿತ್ತ ಶಾರುಖ್​ ಪುತ್ರಿ: ಸಿಕ್ಕಾಪಟ್ಟೆ ಟ್ರೋಲ್​ ಆಯ್ತು ಸುಹಾನಾಳ​ ಹಾಟ್ ಲುಕ್​​

ಬೆಳ್ಳಂಬೆಳಗ್ಗೆ ಹಾಸನದ ಹಲವೆಡೆ ಕಂಪಿಸಿದ ಭೂಮಿ: ಭೂಕಂಪನ ದೃಢಪಡಿಸಿದ ಅಧಿಕಾರಿಗಳು

ತರಕಾರಿಯಂತೆ ಬೀದಿಗಳಲ್ಲಿ ಕುಡಿವ ನೀರು ಮಾರಾಟ!; ಇದು ಬಳ್ಳಾರಿ ತಾಲೂಕಿನ ಗಡಿ ಗ್ರಾಮಗಳ ದುಸ್ಥಿತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
