ನವದೆಹಲಿ:ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಸುಮಾರು 12 ಗಂಟೆಗಳ ವಿಚಾರಣೆ ಬಳಿಕ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್​ ದೇಶ್​ಮುಖ್​ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್​ಸಿಪಿ)ದ ನಾಯಕರಾದ ದೇಶ್​ಮುಖ್​ ವಿರುದ್ಧ ಸುಮಾರು 100 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ(ಮನಿ ಲಾಂಡರಿಂಗ್)​ ಆರೋಪದ ತನಿಖೆಯನ್ನು ಇಡಿ ಕೈಗೆತ್ತಿಕೊಂಡಿದೆ. ವಿಚಾರಣೆಗಾಗಿ ಹಾಜರಾಗಲು ಅವರಿಗೆ ಹಲವು ಸಮನ್ಸ್​ ಜಾರಿಗೊಳಿಸಿದ್ದರೂ ಕೆಲ ದಿನಗಳವರೆಗೆ ಹಾಜರಾಗಿರಲಿಲ್ಲ. ಇದಾದ ಬಳಿಕ ಇಡಿ ಲುಕ್​ ಔಟ್​ ನೋಟೀಸ್​ ಹೊರಡಿಸಿತ್ತು. ಹಲವು ಸಮನ್ಸ್​ಗಳಿಗೆ ದೇಶಮುಖ್​ ಸೂಕ್ತವಾಗಿ ಸ್ಪಂದಿಸದೆ ಇರುವ ಹಿನ್ನೆಲೆಯಲ್ಲಿ, ಅವರು ದೇಶ ಬಿಟ್ಟು ಹೋಗುವುದನ್ನು ತಡೆಯಲು ಇಡಿ ಲುಕ್​ಔಟ್​ ಜಾರಿಮಾಡಿತ್ತು.
ಅನಿಲ್​ ಅವರ ವಿರುದ್ಧ ಮುಂಬೈ ಮಾಜಿ ಪೊಲೀಸ್​ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಪರಮ್​ ಬೀರ್​ ಸಿಂಗ್​ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬರೆದ ಪತ್ರದಲ್ಲಿ, ದೇಶಮುಖ್ ಅವರು ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಮತ್ತು ಪೊಲೀಸರನ್ನು ಬಳಸಿಕೊಂಡು ಪ್ರತಿ ತಿಂಗಳು 100 ಕೋಟಿ ರೂ.ವರೆಗೆ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪ ಬೆನ್ನಲ್ಲೇ ದೇಶ್​ಮುಖ್​ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಇಡಿ ಅಂದಿನಿಂದ ತನಿಖೆ ನಡೆಸುತ್ತಿತ್ತು. ನಿನ್ನೆ ವಿಚಾರಣೆಗೆ ಆಗಮಿಸಿದ ದೇಶ್​ಮುಖ್​ರನ್ನು 12 ಗಂಟೆಗಳ ಕಾಲ ವಿಚಾರಣೆಯ ಬಳಿಕ ಇಡಿ ಬಂಧಿಸಿದೆ.(ಏಜೆನ್ಸೀಸ್​)
ಪುನೀತ್​ ಬಗ್ಗೆ ಅಶ್ಲೀಲ ಪದ ಬಳಸಿ ಅವಮಾನ ಮಾಡಿದ್ದ ಕಿಡಿಗೇಡಿಯ ಬಂಧನ: ಕೀಳು ಮನಸ್ಥಿತಿಗೆ ಬೆಲೆ ತೆರಲೇಬೇಕು

ದೀಪಾವಳಿ ಬಳಿಕ ಕೋವಿಡ್ ಉಲ್ಬಣ?; ನಿಯಮ ಪಾಲಿಸದಿದ್ದರೆ 3ನೇ ಅಲೆ ನಿಶ್ಚಿತ; ತಜ್ಞರಿಂದ ಗಂಭೀರ ಎಚ್ಚರಿಕೆ

ಕನ್ನಡಿಗರಿಗೆ ಶೇ.75 ಉದ್ಯೋಗ; ಖಾಸಗಿ ವಲಯದಲ್ಲಿ ಮೀಸಲು; ರಾಜ್ಯೋತ್ಸವ ಸಮಾರಂಭದಲ್ಲಿ ಸಿಎಂ ಅಭಯ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − 2 =
Remember me
