ಡೆಹ್ರಾಡೂನ್​:ಉತ್ತರಾಖಂಡದ ಹಿರಿಯ ಬಿಜೆಪಿ ಮುಖಂಡನ ಪುತ್ರನಿಗೆ ಸೇರಿದ ರೆಸಾರ್ಟ್​ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಅಂಕಿತಾ ಭಂಡಾರಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಮಾಜಿ ಡಿಜಿಪಿ ಅಲೋಕ್​ ಬಿ ಲಾಲ್​ ಅವರು ನೀಡಿರುವ ಹೇಳಿಕೆಯೊಂದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಂಕಿತಾಳ ಕೊಲೆ ಪ್ರಕರಣ ಬೆಳಕಿಗೆ ಬಂದ ಕೂಡಲೇ ಉಚ್ಛಾಟಿತ ಬಿಜೆಪಿ ನಾಯಕ ವಿನೋದ್​ ಆರ್ಯ ಪುತ್ರ ಹಾಗೂ ಆರೋಪಿ ಪುಳ್ಕಿತ್​ ಆರ್ಯ ಹೆಸರಿನಲ್ಲಿದ್ದ ರೆಸಾರ್ಟ್ ಅನ್ನು ಧ್ವಂಸ ಮಾಡಿದ್ದು, ಉದ್ದೇಶಪೂರ್ವಕವಾಗಿಯೇ ರೆಸಾರ್ಟ್​ ಹೊಡೆದುರುಳಿಸಲಾಗಿದೆ ಎಂದು ಡಿಜಿಪಿ ಅಲೋಕ್​ ಬಿ ಲಾಲ್​ ಆರೋಪ ಮಾಡಿದ್ದಾರೆ.
ರೆಸಾರ್ಟ್​ನಲ್ಲಿದ್ದ ಮಹತ್ವದ ಸಾಕ್ಷಿಗಳನ್ನು ನಾಶ ಮಾಡಲೆಂದು ಕಟ್ಟದ ನೆಲಸಮ ದಾರಿಯನ್ನು ಆಯ್ದುಕೊಂಡಿದ್ದಾರೆ. ಇದಕ್ಕೆ ಸರ್ಕಾರ ಕುಮ್ಮಕ್ಕು ಸಹ ನೀಡಿದೆ. ಏಕೆಂದರೆ, ರೆಸಾರ್ಟ್​ ಧ್ವಂಸ ಮಾಡಲು ಅನುಸರಿಸಬೇಕಾದ ನಿಯಮವನ್ನು ಗಾಳಿಗೆ ತೂರಲಾಗಿದೆ. ರೆಸಾರ್ಟ್​ ಅಕ್ರಮ ಎಂದು ಕಾರಣ ನೀಡಿರುವುದು ಸಮಂಜಸವಲ್ಲ. ಅಕ್ರಮ ಎಂದು ತಿಳಿದಾಗ ಮೊದಲು ನೋಟಿಸ್​ ಕೊಟ್ಟು, ಆ ಬಳಿಕ ಕಾರ್ಯಾಚರಣೆ ಆರಂಭಿಸಲಾಗುತ್ತದೆ. ಆದರೆ, ಇಲ್ಲಿ ಯಾವುದೇ ನಿಯಮವನ್ನು ಅನುಸರಿಸಿಲ್ಲ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ದಿಢೀರನೇ ಕಟ್ಟಡವನ್ನು ಧ್ವಂಸ ಮಾಡುವ ಮೂಲಕ ಸಾಕ್ಷಿ ನಾಶ ಮಾಡಿರಬಹುದು ಎಂದು ಅಲೋಕ್​ ಬಿ ಲಾಲ್​ ದೂರಿದರು.
ಈ ಪ್ರಕರಣದಲ್ಲಿ ಸರ್ಕಾರವು ತಾನು ಪರಿಣಾಮಕಾರಿ ಎಂದು ಹೇಳಿಕೊಳ್ಳುವ ಸಲುವಾಗಿ ತರಾತುರಿಯಲ್ಲಿ ರೆಸಾರ್ಟ್ ಅನ್ನು ನಾಶಪಡಿಸಿದೆ. ಆರೋಪಿಗಳೇ ಆವರಣವನ್ನು ಕೆಡವಿದ್ದಾರೆಯೇ ಎಂದು ಅವರು ಲಾಲ್​ ಆಶ್ಚರ್ಯ ವ್ಯಕ್ತಪಡಿಸಿದರು.
ರೆಸಾರ್ಟ್‌ನ ಮಾಲೀಕರ ಬೇಡಿಕೆಯಂತೆ ಅತಿಥಿಗಳೊಂದಿಗೆ ಲೈಂಗಿಕ ಸಂಭೋಗ ನಡೆಸಲು ನಿರಾಕರಿಸಿದ್ದರಿಂದ ಅಂಕಿತಾಳನ್ನು ಕೊಲ್ಲಲಾಗಿದೆ ಎಂದು ಆಕೆಯ ಫೇಸ್‌ಬುಕ್ ಫ್ರೆಂಡ್​ ಒಬ್ಬರು ಆರೋಪ ಮಾಡಿದ್ದಾರೆ. ಅಂಕಿತಾಳನ್ನು ಕೊಲೆ ಮಾಡಿದ್ದಾಗಿ ಉಚ್ಛಾಟಿತ ಬಿಜೆಪಿ ನಾಯಕ ವಿನೋದ್​ ಆರ್ಯ ಪುತ್ರ ಪುಳ್ಕಿತ್​ ಆರ್ಯ ಪೊಲೀಸ್​ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಅಂಕಿತಾಳ ಜೊತೆ ನಡೆದ ವಾಗ್ವಾದದ ವೇಳೆ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಕಾಲುವೆಗೆ ನೂಕಿ ಕೊಂದಿದ್ದಾಗಿ ಆರೋಪಿಗಳು ಸಹ ತಪ್ಪೊಪ್ಪಿಕೊಂಡಿದ್ದಾರೆ. ಈಗಾಗಲೇ ಪುಳ್ಕಿತ್​ ಆರ್ಯ ಸೇರಿ ಮೂವರನ್ನು ಉತ್ತರಾಖಂಡದ ಪೊಲೀಸರು ಬಂಧಿಸಿದ್ದಾರೆ.(ಏಜೆನ್ಸೀಸ್​)
10 ಸಾವಿರಕ್ಕೆ ನನ್ನನ್ನು ನಾನು ಮಾರಿಕೊಳ್ಳಲ್ಲ: ಅಂಕಿತಾಳ ವಾಟ್ಸ್​ಆ್ಯಪ್​ ಚಾಟ್​ನಲ್ಲಿ ಸ್ಫೋಟಕ ಮಾಹಿತಿ

VIDEO| ಭೂತದ ಹಿಂದೆ ಬಿದ್ದ ವಾರಣಾಸಿ ಪೊಲೀಸರು: ಏರಿಯಾ ಪೂರ್ತಿ ಗಸ್ತು, ದೆವ್ವದ ವಿಡಿಯೋ ವೈರಲ್​

ದೇಶದಲ್ಲಿ PFI ಬ್ಯಾನ್: ಮುಂದಿನ ಕ್ರಮಗಳೇನು? ಕಾರ್ಯಕರ್ತರು, ಮುಖಂಡರ ಕತೆ ಏನು? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
