ಚೆನ್ನೈ:ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ. ಕಾರ್ತಿಕ್ ಎಂಬುವರು ಕೇವಲ ಒಂದೇ ಒಂದು ಮತವನ್ನು ಪಡೆಯುವ ಮೂಲಕ ಹೀನಾಯ ಸೋಲು ಅನುಭವಿಸಿದ್ದಾರೆ. ತಮ್ಮ ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದರು ಸಹ ಕೇವಲ ಒಂದೇ ಒಂದು ಮತ ಪಡೆದಿರುವುದು ಬಿಜೆಪಿ ಅಭ್ಯರ್ಥಿ ಪಾಲಿಗೆ ದುರಂತದ ಸಂಗತಿ ಆಗಿದೆ.​
ಕೊಯಮತ್ತೂರು ಜಿಲ್ಲೆಯ ಪೆರಿಯಾನೈಕೆನ್ಪಾಳ್ಯಂ ಯೂನಿಯನ್​ನಿಂದ ವಾರ್ಡ್​ ಸದಸ್ಯ ಚುನಾವಣೆಗೆ ಕಾರ್ತಿಕ್​ ಸ್ಪರ್ಧಿಸಿದ್ದರು. ಆದರೆ, ಅವರಿಗೆ ಕೇವಲ ಒಂದೇ ಒಂದು ಮತ ಬಿದ್ದಿದೆ. ಈ ಬಗ್ಗೆ ಮಾತನಾಡಿರುವ ಕಾರ್ತಿಕ್​, ನನ್ನ ಮನೆ ಇರುವುದು ನಾಲ್ಕನೇ ವಾರ್ಡಿನಲ್ಲಿ ಆದರೆ, ನಾನು ಸ್ಪರ್ಧಿಸಿದ್ದು 9ನೇ ವಾರ್ಡಿನಲ್ಲಿ. ಹೀಗಾಗಿ ನಮ್ಮ ಮನೆಯವರು ವೋಟ್​ ಮಾಡಲು ಆಗಲಿಲ್ಲ ಎಂದಿದ್ದಾರೆ. ಬೇರೆ ವಾರ್ಡ್​ ಆದ್ದರಿಂದ ಜನರ ಬೆಂಬಲ ದೊರೆಯಲಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಒಂದು ಪಡೆದಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ಇಂತಹ ಪರಿಸ್ಥಿತಿಯಲ್ಲೂ ಒಂದು ವೋಟ್​ ಪಡೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು, ಆಗ ಖಂಡಿತ ಗೆಲ್ಲುತ್ತಾರೆಂದು ಹೇಳಿದ್ದಾರೆ. ಅಲ್ಲದೆ, ಅಭ್ಯರ್ಥಿ ಕಾರ್ತಿಕ್​ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಅ. 6 ರಿಂದ 9ರವರೆಗೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆದಿದೆ. ಒಟ್ಟು 27,003 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 79,433 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾರ್ತಿಕ್​ ಅವರು ತುಂಬಾ ಪ್ರಚಾರ ನಡೆಸಿದ್ದರು. ಆದರೆ, ಕೇವಲ ಒಂದು ಮತವನ್ನು ಮಾತ್ರ ಪಡೆದುಕೊಂಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ಇದು ನಿರಂತರ ಬೆಲೆ ಏರಿಕೆಯ ಪರಿಣಾಮ ಎಂಬ ಚರ್ಚೆಗಳು ಜಾಲತಾಣದಲ್ಲಿ ನಡೆಯುತ್ತಿದೆ.(ಏಜೆನ್ಸೀಸ್​)
ಅಬ್ಬರದ ಪ್ರಚಾರ ಮಾಡಿದ್ರೂ ಬಿಜೆಪಿ ಅಭ್ಯರ್ಥಿ ಪಡೆದಿದ್ದು ಒಂದೇ ಮತ:​ ಕುಟುಂಬದ ವೋಟು ಬೀಳದೆ ಹೀನಾಯ ಸೋಲು..!

ಇನ್ಮುಂದೆ ಸಿನಿಮಾ ಪೈರಸಿ ಮಾಡುವವರಿಗೆ ಕಾದಿದೆ ಬಹು ದೊಡ್ಡ ಶಾಕ್​: ಟೆಲಿಗ್ರಾಂ ಮೇಲೆ ಖಾಕಿ ಕಣ್ಣು

ಮೂರನೇ ವಿಶ್ವಯುದ್ಧಕ್ಕೆ ಏಲಿಯನ್​ಗಳ ತಯಾರಿ! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಯುಎಸ್​ ಮಾಜಿ ಸೇನಾಧಿಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
