ತಿರುವನಂತಪುರಂ:ವರದಕ್ಷಿಣೆ ಕಿರುಕುಳ ಸಹಿಸದೇ ಆತ್ಮಹತ್ಯೆ ಮಾಡಿಕೊಂಡ ಕೊಲ್ಲಂ ನಿವಾಸಿ ವಿಸ್ಮಯ ಪ್ರಕರಣವು ಕೇರಳ ರಾಜ್ಯದಲ್ಲಿ ಭಾರಿ ತಲ್ಲಣ ಸೃಷ್ಟಿಸಿದ್ದನ್ನು ಕೇಳಿ ಆಲಪ್ಪುಳ ನಿವಾಸಿ ಸುನಿತಾ ಹೆದರಿದ್ದರು. ತಕ್ಷಣ ತನ್ನ 19 ವರ್ಷದ ವಿವಾಹಿತ ಮಗಳು ಸುಚಿತ್ರಾಗೆ ಕರೆ ಮಾಡಿ ಧೈರ್ಯ ತುಂಬಿದ್ದರು. ಆದರೆ, ವಿಧಿ ಆಕೆಯನ್ನು ಬಿಡಲಿಲ್ಲ.
ಸುಚಿತ್ರಾಗೆ ಕೇವಲ 3 ತಿಂಗಳ ಹಿಂದಷ್ಟೇ ವಲ್ಲಿಕುನ್ನಮ್​ ಏರಿಯಾ ನಿವಾಸಿಗೆ ಮದುವೆ ಮಾಡಿಕೊಡಲಾಗಿತ್ತು. ವಿಸ್ಮಯ ರೀತಿಯಲ್ಲೇ ಸುಚಿತ್ರಾ ಕೂಡ ಅತ್ತೆಯಿಂದ ಸಮಸ್ಯೆ ಎದುರಿಸುತ್ತಿರುವ ವಿಷಯ ತಾಯಿ ಸುನಿತಾಗೆ ತಿಳಿದಿತ್ತು. ಹೀಗಾಗಿ ವಿಸ್ಮಯ ಪ್ರಕರಣ ಬೆನ್ನಲ್ಲೇ ಸುಚಿತ್ರಾಗೆ ಕರೆ ಮಾಡಿದ್ದ ಸುನಿತಾ, ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡ ಮಗಳೆ… ಏನೇ ಆಗಲಿ ನಾನು ಮತ್ತು ನಿನ್ನ ತಂದೆ ಜತೆಯಾಗಿರುತ್ತೇವೆ ಎಂದು ಧೈರ್ಯ ತುಂಬಿದ್ದರು. ಅದಾದ ಮಾರನೇ ದಿನವೇ ಅಂದರೆ ಮಾರ್ಚ್​ 22ರಂದು ಸುಚಿತ್ರಾ ಅತ್ತೆ ಮನೆಯ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು.
ನಾನು ಆತ್ಮಹತ್ಯೆಯಂತ ಸುದ್ದಿ ನೋಡಿದಾಗಲೆಲ್ಲ ನಾನು ಮತ್ತು ತಂದೆ ಜತೆಯಾಗಿರುವುದಾಗಿ ಮಗಳಿಗೆ ಹೇಳುತ್ತಿದ್ದೆ. ಅವಳ ಸಂತೋಷಕ್ಕಾಗಿ ಏನು ಮಾಡಲು ನಾವು ತಯಾರಿದ್ದೆವು. ನನ್ನ ಮಗಳು ಈ ರೀತಿ ಸಾಯಬಾರದು ಎಂಬುದೇ ನಮ್ಮ ಉದ್ದೇಶವಾಗಿತ್ತು. ಆದರೆ, ಆಕೆಯ ಸಾವು ತುಂಬಾ ನೋವುಂಟು ಮಾಡಿದೆ. ನನ್ನ ಮಗಳದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ತಾಯಿ ಸುನಿತಾ ಆರೋಪಿಸಿದ್ದಾರೆ.
ಯೋಧನಾಗಿರುವ ವಿಷ್ಣು ಎಂಬಾತನ ಜತೆ ಮಾರ್ಚ್​ 21ರಂದು ಕೃಷ್ಣಪುರಂ ನಿವಾಸಿ ಸುಚಿತ್ರಾ ಮದುವೆ ಆಗಿತ್ತು. 20 ವರ್ಷಗಳ ಒಳಗೆ ಮದುವೆ ಆಗದಿದ್ದರೆ ಏಳು ವರ್ಷಗಳ ನಂತರವೇ ಅವಳ ಮದುವೆ ನಡೆಯುವುದು ಎಂಬ ಜಾತಕದ ಮಾತನ್ನು ನಂಬಿ 19 ವರ್ಷದಲ್ಲೇ ಸುಚಿತ್ರಾಳನ್ನು ಮದುವೆ ಮಾಡಿಕೊಟ್ಟಿದ್ದರು. ಜಾತಕವನ್ನು ನಂಬಿರದಿದ್ದರೆ ಬಹುಶಃ ಸುಚಿತ್ರಾ ಮದುವೆ ಇನ್ನು ತಡವಾಗಿ ನಡೆಯುತ್ತಿತ್ತು. ಆಕೆಯ ಭವಿಷ್ಯವು ಚೆನ್ನಾಗಿರುತ್ತಿತ್ತೇನೋ? ಆದರೆ, ಜಾತಕ ಮಾತಿಗೆ ಕಟ್ಟುಬಿದ್ದು ಪಾಲಕರು ಮಗಳನ್ನು ವರದಕ್ಷಿಣೆ ಎಂಬ ಪಿಡುಗಿಗೆ ಬಲಿ ಕೊಟ್ಟಂತಾಗಿದೆ.
ಮದುವೆ ಅದ್ಧೂರಿಯಾಗಿಯೇ ನಡೆದಿತ್ತುಮದುವೆ ವೇಳೆ 51 ಸವರನ್​ ಗೋಲ್ಡ್​ ಮತ್ತು ಕಾರನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದರೂ ಮದುವೆ ಬಳಿಕ ಸುಚಿತ್ರಾಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿತ್ತು. ಇನ್ನು ಹೆಚ್ಚಿನ ವರದಕ್ಷಿಣೆಗಾಗಿ ಸುಚಿತ್ರಾ ಅತ್ತೆ ಬೇಡಿಕೆ ಇಟ್ಟಿದ್ದರು. ನಾವು ದ್ವಿಚಕ್ರ ವಾಹನ ನೀಡಲು ಒಪ್ಪಿದ್ದೆವು. ಆದರೆ, ಸುಚಿತ್ರಾಳ ಮಾವ ಕಾರಿಗೆ ಬೇಡಿಕೆ ಇಟ್ಟಿದ್ದರು. ನಂತರದ ದಿನಗಳಲ್ಲಿ 10 ಲಕ್ಷ ರೂ.ಗೆ ಒತ್ತಾಯ ಮಾಡಿದ್ದರು ಎಂದು ಸುಚಿತ್ರಾ ತಂದೆ ಹೇಳಿದ್ದಾರೆ.
ಚಿನ್ನದ ಆಭರಣಗಳನ್ನು ಲಾಕರ್‌ನಲ್ಲಿ ಇಡಬೇಕೆಂದು ಸುಚಿತ್ರಾ ಒತ್ತಾಯಿಸಿದ್ದಕ್ಕೆ ಅತ್ತೆ ಕಿರುಕುಳ ನೀಡಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಅಲ್ಲದೆ, ಸುಚಿತ್ರಾ ಆಭರಣಗಳ ಒಂದು ಭಾಗವನ್ನು ಆಕೆಯ ಅತ್ತೆ ಅಡಮಾನ ಇಟ್ಟಿರುವ ಆರೋಪವು ಇದೆ. ಸದ್ಯ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.(ಏಜೆನ್ಸೀಸ್​)
ಭೀಕರ ಅಪಘಾತ- ಬಿಗ್‌ಬಾಸ್‌ ಖ್ಯಾತಿಯ ನಟ ಮಹೇಶ್‌ ಪ್ರಜ್ಞಾಹೀನ: ಐಸಿಯುನಲ್ಲಿ ಚಿಕಿತ್ಸೆ

ವದಂತಿಗಳಿಗೆ ಕಿವಿಗೊಡಬೇಡಿ, ಲಸಿಕೆ ಹಿಂಜರಿಕೆ ಬಿಡಿ : ಪ್ರಧಾನಿ ಮೋದಿ

ಮನೆ ಎದುರಿಗಿದ್ದ ಕಾಮುಕನಿಂದ ನಿರಂತರ ಲೈಂಗಿಕ ಕಿರುಕುಳ ಸಹಿಸದೇ ಸಾವಿನ ಹಾದಿ ಹಿಡಿದ ಮಹಿಳೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − two =
Remember me
