ನವದೆಹಲಿ:ವಿರಾಟ್​ ಕೊಹ್ಲಿ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದು ಕೇವಲ ಕ್ರೀಡಾಭಿಮಾನಿಗಳಿಗೆ ಮಾತ್ರವಲ್ಲ ಅನೇಕ ಆಟಗಾರರಿಗೂ ಬೇಸರವಾಗಿದೆ. ಅದರಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟರ್​ ಶೋಯೆಬ್​ ಅಖ್ತರ್​ ಕೂಡ ಒಬ್ಬರು. ಇದೀಗ ಕೊಹ್ಲಿ ಮದುವೆ ಬಗ್ಗೆ ಕಾಮೆಂಟ್​ ಮಾಡುವ ಮೂಲಕ ಅಖ್ತರ್​ ವಿವಾದದ ಸುಳಿಗೆ ಸಿಲುಕಿದ್ದಾರೆ.
ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಜತೆಗಿನ ಮದುವೆಯೇ ಅವರ ಕಳಪೆ ಪ್ರದರ್ಶನಕ್ಕೆ ಕಾರಣ ಎಂಬ ರೀತಿಯಲ್ಲಿ ಅಖ್ತರ್​ ಮಾತನಾಡಿದ್ದಾರೆ. ಸ್ಟಾರ್ ಕ್ರಿಕೆಟಿಗ ಕೊಹ್ಲಿ ಮದುವೆಯಾಗಬಾರದಿತ್ತು ಮತ್ತು 10 ರಿಂದ 12 ವರ್ಷಗಳ ಕಾಲ ಆಟದ ಮೇಲೆ ಗಮನ ಹರಿಸಬೇಕಿತ್ತು ಎಂದು ಹೇಳಿದ್ದಾರೆ.
ಅಖ್ತರ್​ ಅವರ ಈ ಹೇಳಿಕೆ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಖ್ತರ್​ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೊಂದು ಮೂರ್ಖತನದ ಹೇಳಿಕೆ ಎಂದು ನೆಟ್ಟಿಗರೊಬ್ಬರು ಹೇಳಿದ್ದರೆ, ನಿಜಕ್ಕೂ ಇದೊಂದು ನಾಚಿಕೆಗೇಡಿನ ಹೇಳಿಕೆ ಎಂದು ಮತ್ತೊಬ್ಬ ನೆಟ್ಟಿಗ ಜರಿದಿದ್ದಾರೆ.
You are not..so 🤫#ShoaibAkhtar#Viratpic.twitter.com/yvCMptUAG6
— Mirchi RJ Sameer (@MirchiRJSameer)January 24, 2022

ವಿರಾಟ್​ ಕೊಹ್ಲಿ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಮೂಲಕ ಗಮನ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಖ್ತರ್​ ವಿರುದ್ಧ ಆರೋಪ ಮಾಡಿದ್ದಾರೆ.
ಕೊಹ್ಲಿ, ಟೆಸ್ಟ್​ ನಾಯಕತ್ವಕ್ಕೂ ಗುಡ್​ಬೈ ಹೇಳಿದ ನಿರ್ಧಾರದ ಬಗ್ಗೆ ದೈನಿಕ್​ ಜಾಗರಣ ಮಾಧ್ಯಮದ ಜತೆ ಮಾತನಾಡಿದ ಅಖ್ತರ್​, ಅವರ (ಕೊಹ್ಲಿ) ಜಾಗದಲ್ಲಿ ನಾನಿದ್ದರೆ ಮದುವೆಯಾಗುತ್ತಿರಲಿಲ್ಲ. ನಾನು ರನ್ ಗಳಿಸಿ ಕ್ರಿಕೆಟ್ ಎಂಜಾಯ್ ಮಾಡುತ್ತಿದೆ. ಈ 10 ರಿಂದ 12 ವರ್ಷಗಳ ಕ್ರಿಕೆಟ್ ಸಮಯ ಮತ್ತೆ ಬರುವುದಿಲ್ಲ. ಮದುವೆಯಾಗುವುದು ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ, ನೀವು ಭಾರತಕ್ಕಾಗಿ ಆಡುತ್ತಿದ್ದರೆ, ನೀವು ಸಮಯವನ್ನು ಸ್ವಲ್ಪ ಆನಂದಿಸಬೇಕು ಎಂದಿದ್ದರು.
ಮಕ್ಕಳಿಂದ, ಕುಟುಂಬದವರಿಂದ ಒತ್ತಡವಿರುತ್ತದೆ. ಜವಾಬ್ದಾರಿ ಹೆಚ್ಚಾದಂತೆ ಒತ್ತಡವೂ ಹೆಚ್ಚಾಗುತ್ತದೆ. ಕ್ರಿಕೆಟಿಗರು 14-15 ವರ್ಷಗಳ ಅಲ್ಪಾವಧಿಯ ವೃತ್ತಿಜೀವನವನ್ನು ಹೊಂದಿರುತ್ತಾರೆ. ಈ ಸಮಯದಲ್ಲಿ ಐದು ರಿಂದ ಆರು ವರ್ಷಗಳ ಕಾಲ ಉತ್ತುಂಗದಲ್ಲಿರುತ್ತಾರೆ. ವಿರಾಟ್ ಅವರ ಆ ವರ್ಷಗಳು ಕಳೆದಿವೆ, ಈಗ ಅವರು ಕಷ್ಟಪಡಬೇಕಾಗಿದೆ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್​ ಸರಣಿಯಲ್ಲಿ ಭಾರತವು 1-2 ಅಂತರದಲ್ಲಿ ಸರಣಿಯನ್ನು ಕಳೆದುಕೊಂಡ ಒಂದು ದಿನದ ನಂತರ ವಿರಾಟ್ ಕೊಹ್ಲಿ ಅವರು ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿದರು.(ಏಜೆನ್ಸೀಸ್​)
ಪ್ಯಾಂಟ್​ ಇಲ್ಲದ ಜೀವನ ಬೇಕೆಂದ ಗೋವಾ ಬ್ಯೂಟಿ ಇಲಿಯಾನಾಗೆ ನೆಟ್ಟಿಗರು ಹೇಳಿದ್ದು ಹೀಗೆ…

ಸಮಾಜಸೇವೆ ಚುನಾವಣಾ ಗಿಮಿಕ್‌ ಅಲ್ಲ ಎಂದಿದ್ದ ಸೋನು ಸೂದ್‌ ಮಾತು ತಪ್ಪಿದ್ರಾ? ‘ದೇವರು’ ಎಂದವರೇ ತಿರುಗಿಬಿದ್ದರು!

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟ ಕಾಮುಕರು: ಶಿವಮೊಗ್ಗದಲ್ಲಿ ಹೇಯ ಕೃತ್ಯ

VIDEO: ಪ್ರತಿಭಟನೆಯ ರಹಸ್ಯ ಬಿಚ್ಚಿಟ್ಟ ಟಿಕಾಯತ್‌! ಅವರ ಬಾಯಿಯಿಂದ್ಲೇ ‘ಸತ್ಯ’ ಕೇಳಿ ಅಭಿಮಾನಿಗಳಿಗೂ ಮುಜುಗರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
