ಭುವನೇಶ್ವರ್​:ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳಾ ಬ್ಲಾಕ್​ಮೇಲರ್​ ಅರ್ಚನಾ ನಾಗ್​ ಎಂಬಾಕೆಯನ್ನು ಒಡಿಶಾ ಪೊಲೀಸರು ಬಂಧಿಸಿದ್ದು, ಇದೀಗ ಪ್ರತಿದಿನ ಸಾಕಷ್ಟು ಶಾಕಿಂಗ್​ ಸಂಗತಿಗಳು ಬೆಳಕಿಗೆ ಬರುತ್ತಿವೆ.
ಪೊಲೀಸ್​ ಮೂಲಗಳ ಪ್ರಕಾರ. ಅರ್ಚನಾ ನಾಗ್​, 2018ರಲ್ಲಿ ಭುವನೇಶ್ವರ್​ ಮೂಲದ ಉದ್ಯಮಿಯೊಬ್ಬರಿಂದ 20 ಸಾವಿರ ರೂ. ಹಣವನ್ನು ಮಗನ ಆಸ್ಪತ್ರೆ ಖರ್ಚಿಗೆಂದು ಹೇಳಿ ಸಾಲ ಪಡೆದಿದ್ದಳಂತೆ. ಸ್ವಲ್ಪ ದಿನಗಳ ಬಳಿಕ ಉದ್ಯಮಿ ಹಣವನ್ನು ವಾಪಸ್​ ಕೇಳಿದಾಗ, ಹಣ ಕೊಡುವ ಬದಲು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಆತನನ್ನು ಬೆದರಿಸಿದ್ದಾಳಂತೆ. ಇದರಿಂದ ಹೆದರಿದ್ದ ಉದ್ಯಮಿ, ಮರ್ಯಾದೆ ಹೋಗುತ್ತದೆ ಅಂತಾ ಹಣವನ್ನೇ ಕೇಳಲಿಲ್ಲ ಎಂಬುದು ಪೊಲೀಸ್​ ವಿಚಾರಣೆಯಲ್ಲಿ ತಿಳಿದುಬಂದಿದೆ.
ಆರೋಪಿ ಅರ್ಚನಾ ಸದ್ಯ ಪೊಲೀಸ್​ ಬಂಧನದಲ್ಲಿದ್ದು, ಆಕೆಯ ಜಾಮೀನು ಅರ್ಜಿಯನ್ನು ಭುವನೇಶ್ವರದ ಉಪವಿಭಾಗೀಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್​ ತಿರಸ್ಕರಿಸಿದೆ. ಅಧೀನ ನ್ಯಾಯಾಲಯವು ಜಾಮೀನು ನೀಡದಿದ್ದರೆ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸುವುದಾಗಿ ಅರ್ಚನಾ ಪರ ವಕೀಲ ದೇಬಾಶಿಶ್ ಮೊಹಾಪಾತ್ರ ಶುಕ್ರವಾರ ತಿಳಿಸಿದ್ದಾರೆ.
ಅಂದಹಾಗೆ ಅರ್ಚನಾ ನಾಗ್​, 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್​ ಬಲೆಗೆ ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಹನಿಟ್ರ್ಯಾಪ್​ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ನೇತೃತ್ವದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದಾರೆ.
ಅರ್ಚನಾ ಮತ್ತು ಆಕೆಯ ಪತಿ ಪ್ರಭಾವಿ ವ್ಯಕ್ತಿಗಳನ್ನು ಹನಿಟ್ರ್ಯಾಪ್​ ಬಲೆಗೆ ಕೆಡವಿ, ಅವರ ಲೈಂಗಿಕ ವಿಡಿಯೋಗಳನ್ನು ರೆಕಾರ್ಡ್ ಮಾಡುವ ಮೂಲಕ ಬ್ಲಾಕ್​ಮೇಲ್ ಮಾಡಿ, ಹಣ ಸುಲಿಗೆ ಮಾಡುತ್ತಿದ್ದರು. ಆದರೆ, ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗುತ್ತಿದೆ.(ಏಜೆನ್ಸೀಸ್​)
ಕಡು ಬಡತನದಲ್ಲಿ ಹುಟ್ಟಿ 30 ಕೋಟಿ ರೂ. ಬೆಲೆ ಬಾಳುವ ಆಸ್ತಿ ಗಳಿಸಿದ್ಹೇಗೆ? ಕಿಲಾಡಿ ಲೇಡಿಯ ಹಿನ್ನೆಲೆ ತಿಳಿದ್ರೆ ದಂಗಾಗ್ತೀರಾ!

18 ಶಾಸಕರು ಸೇರಿ 25 ಪ್ರಭಾವಿಗಳನ್ನು ಹನಿಟ್ರ್ಯಾಪ್​ ಬಲೆಗೆ ಕಡೆವಿ ಸರ್ಕಾರಕ್ಕೆ ಕುತ್ತು ತಂದಿಟ್ಟ ಖತರ್ನಾಕ್​ ಲೇಡಿ!

ಡಿಕೆಶಿ ಸ್ವಕ್ಷೇತ್ರದಲ್ಲಿ ಮತ್ತೆ ಏಸುಕ್ರಿಸ್ತನ ಜಪ: ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷರಿಂದ ದೂರು ದಾಖಲು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × four =
Remember me
