ಹೈದರಾಬಾದ್​:ಆಂಧ್ರ ಪ್ರದೇಶದ ತಿರುಪತಿಯಲ್ಲಿ ಸೂಟ್​ಕೇಸ್​ ಒಂದರಲ್ಲಿ 27 ವರ್ಷದ ಟೆಕ್ಕಿಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಇಂದು ಮೃತ ಟೆಕ್ಕಿ, ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಭುವನೇಶ್ವರಿ ಎಂಬಾಕೆ ಹೈದರಾಬಾದ್​ನ ಕಾಗ್ನಿಜೆಂಟ್​ ಟೆಕ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಕೆಯ ಇಂಜಿನಿಯರ್​ ಪತಿ ಮರಮರೆಡ್ಡಿ ಶ್ರೀಕಾಂತ್​ ರೆಡ್ಡಿಯನ್ನು ಮೊಬೈಲ್​ ಟ್ರ್ಯಾಕಿಂಗ್​ ಸಿಸ್ಟಮ್​ ಬಳಸಿ ವಿಜಯವಾಡದ ಬಳಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜೂನ್ 23 ರಂದು ರುಯಾ ಆಸ್ಪತ್ರೆಯ ಬಳಿ ಭುವನೇಶ್ವರಿಯ ಸುಟ್ಟ ಶವ ಪತ್ತೆಯಾದ ನಂತರ, ತನಿಖೆ ಕೈಗೊಂಡ ತಿರುಪತಿಯ ಅಲಿಪಿರಿ ಪೊಲೀಸರು, ಮರುದಿನ ಜೂನ್ 24 ರಂದು ಟ್ಯಾಕ್ಸಿ ಚಾಲಕನನ್ನು ಅನುಮಾನದ ಮೇಲೆ ಬಂಧಿಸಿದರು.
ನಂತರ ನಡೆದ ವಿಚಾರಣೆಯಲ್ಲಿ, ಟ್ಯಾಕ್ಸಿ ಚಾಲಕ ಈ ಪ್ರಕರಣದ ಪ್ರಮುಖ ಆರೋಪಿ ರೆಡ್ಡಿ ತನ್ನ ಮಗುವಿನೊಂದಿಗೆ ಭಾರೀ ಸೂಟ್‌ಕೇಸ್ ಹೊತ್ತುಕೊಂಡು ಅಪಾರ್ಟ್ಮೆಂಟ್‌ನಿಂದ ಮತ್ತು ಹಿಂಭಾಗದಿಂದ ಬಂದು ತನ್ನ ಕ್ಯಾಬ್‌ನಲ್ಲಿ ಪ್ರಯಾಣಿಸಿದ ಎಂದು ಟ್ಯಾಕ್ಸಿ ಚಾಲಕ ಹೇಳಿದನು.
ಇನ್ನು ಅಪಾರ್ಟ್​ಮೆಂಟ್​ನ ಸಿಸಿಟಿವಿ ದೃಶ್ಯಾವಳಿಗಳನ್ನು ಭುವನೇಶ್ವರಿಯ ಸಂಬಂಧಿ ಮಮತಾ ಅವರು ಒದಗಿಸಿದ್ದಾರೆ, ಅವರು ಕಡಪದಲ್ಲಿ ತರಬೇತಿ ಎಸ್ಐ ಆಗಿದ್ದಾರೆ. ವಿಡಿಯೋ ತುಣುಕಿನಲ್ಲಿ ರೆಡ್ಡಿ ಸೂಟ್‌ಕೇಸ್ ಅನ್ನು ತಮ್ಮ ಮನೆಗೆ ತರುವುದು ಮತ್ತು ತನ್ನ ಅಂಬೆಗಾಲು ಇಡುವ ಮಗಳನ್ನು ಹಿಡಿದುಕೊಂಡು, ದೊಡ್ಡ ಸೂಟ್‌ಕೇಸ್ ಅನ್ನು ಇನ್ನೊಂದು ಕೈಯಿಂದ ಉರುಳಿಸಿಕೊಂಡು ಬರುತ್ತಿರುವುದು ರೆಕಾರ್ಡ್​ ಆಗಿದೆ.
ಟ್ಯಾಕ್ಸಿ ಡ್ರೈವರ್‌ನಿಂದ ಪಡೆದ ಮಾಹಿತಿಯೊಂದಿಗೆ ವೀಡಿಯೊ ಸಾಕ್ಷಿಗಳನ್ನು ಆಧಾರವಾಗಿಟ್ಟುಕೊಂಡು ಶ್ರೀಕಾಂತ್ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ರೆಡ್ಡಿ ತಾನು ಕೊಲೆ ಮಾಡಿಲ್ಲ ಎಂದು ನಿರಾಕರಿಸಿದ್ದು, ಅಪಾರ್ಟ್​ಮೆಂಟ್​ನ ಸಂಕೀರ್ಣದಲ್ಲಿರುವ ಅವರ ಪ್ಲ್ಯಾಟ್​ನಲ್ಲಿ ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಸಮರ್ಥನೆ ನೀಡಿದ್ದ.
ರೆಡ್ಡಿ ಮತ್ತು ಭುವನೇಶ್ವರಿ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು. ಇಬ್ಬರೂ ಕೂಡ ಹೈದರಾಬಾದ್ ಮೂಲದ ಒಂದೇ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತಿಯ ಕೋರಿಕೆಯ ಮೇರೆಗೆ ಅವರು ತಿರುಪತಿಗೆ ಬಂದರು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ದಂಪತಿಗಳು ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ತಿಳಿದುಬಂದಿದೆ.(ಏಜೆನ್ಸೀಸ್​)
ಟಾಯ್ಲೆಟ್​ನಲ್ಲಿದ್ದಾಗಲೇ ಮಗು ಜನನ; ಹುಟ್ಟಿದ ಮಗುವನ್ನು ಮುದ್ದಾಡುವುದು ಬಿಟ್ಟು ಹೊಡೆದು ಕೊಂದ ತಾಯಿ!

ಮಕ್ಕಳೊಂದಿಗೇ ಕುಳಿತು ಅಶ್ಲೀಲ ವಿಡಿಯೋಗಳನ್ನ ನೋಡ್ತಾರಂತೆ ಈ ಸಿಂಗರ್!

ಕೋವಿಶೀಲ್ಡ್​ ಲಸಿಕೆ ಪಡೆದವರಿಗೆ ಗುಡ್​ ನ್ಯೂಸ್​: ಯೂರೋಪಿನ 9 ದೇಶಗಳಲ್ಲಿ ಗ್ರೀನ್​ ಪಾಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 7 =
Remember me
