ಹೈದರಾಬಾದ್​:ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ದುಷ್ಟನ ಸಂಹಾರಕ್ಕೆ ದೇಶಾದ್ಯಂತ ಆಗ್ರಹಗಳು ಕೇಳಿಬರುತ್ತಿವೆ. ಕಳೆದ ವಾರದ ಸೈದಾಬಾದ್​ ಸಿಂಗ್ರೌನಿ ಕಾಲನಿಯಲ್ಲಿ ಪಕ್ಕದ ಮನೆಯ ಆರು ವರ್ಷದ ಬಾಲಕಿಯನ್ನು ಕಾಮುಕ ರೇಪ್​ ಮಾಡಿ ಕೊಲೆ ಮಾಡಿದ್ದಾನೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದು ಈವರೆಗೂ ಆತನ ಸುಳಿವು ಪತ್ತೆಯಾಗಿಲ್ಲ.
ಆರೋಪಿಯ ಬಂಧನವಾದ ಕೂಡಲೇ ಆತನನ್ನು ಎನ್​ಕೌಂಟರ್​ ಮಾಡುವಂತೆ ತೆಲಂಗಾಣ ಕಾರ್ಮಿಕ ಸಚಿವ ಮಲ್ಲ ರೆಡ್ಡಿ ಒತ್ತಾಯಿಸಿದ್ದಾರೆ. ನಾನು ಆದಷ್ಟು ಬೇಗ ಅತ್ಯಾಚಾರಿಯನ್ನು ಹಿಡಿಯುತ್ತೇವೆ. ಅವನ ಸಿಕ್ಕಿದ ತಕ್ಷಣ ಎನ್​ಕೌಂಟರ್​ ನಡೆಯಲಿದೆ ಎಂದಿದ್ದಾರೆ.
ಇದರ ನಡುವೆ ಆರೋಪಿಯ ಸುಳಿವು ನೀಡಿದವರಿಗೆ ಸೈಬರಾಬಾದ್​ ಪೊಲೀಸರು 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ. ಅಲ್ಲದೆ, ಆತನ ಫೋಟೋವನ್ನು ಸಹ ಬಿಡುಗಡೆ ಮಾಡಲಾಗಿದೆ. ಆರೋಪಿ ಪತ್ತೆಯಾದಲ್ಲಿ 9490616366, – 9490616627 ಈ ಎರಡು ನಂಬರ್​ಗೆ ಕರೆ ಮಾಡುವಂತೆ ಹೈದರಾಬಾದ್​ ಪೊಲೀಸರು ಹೇಳಿದ್ದಾರೆ.
ಆರೋಪಿಯನ್ನು ಪಲ್ಲಕೊಂಡ ರಾಜು (30) ಎಂದು ಗುರುತಿಸಲಾಗಿದೆ. ಆತ ಮೃತ ಬಾಲಕಿಯ ಪಕ್ಕದ ಮನೆ ನಿವಾಸಿ. ಬಾಲಕಿ ಮನೆಯಲ್ಲಿ ಶವವಾಗಿ ಪತ್ತೆಯಾದಾಗಿನಿಂದ ಆರೋಪಿ ನಾಪತ್ತೆಯಾಗಿದ್ದಾನೆ.
ಸೆಪ್ಟೆಂಬರ್​ 9ರಂದು ಬಾಲಕಿ ಸೈದಾಬಾದ್​ನ ಸಿಂಗ್ರೌಣಿ ಕಾಲನಿಯಲ್ಲಿರುವ ತನ್ನ ನಿವಾಸದಿಂದ ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಮೃತದೇಹವು ಬೆಡ್​ಶೀಟ್​ನಲ್ಲು ಸುತ್ತಿಟ್ಟಿದ್ದ ಸ್ಥಿತಿಯಲ್ಲಿ ನೆರೆಯ ಮನೆಯಲ್ಲೇ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂಬ ಆರಂಭದಲ್ಲಿ ಹೇಳಲಾಗಿತ್ತು. ಆದರೆ, ನಂತರ ಆರೋಪಿ ಇನ್ನೂ ಪತ್ತೆಯಾಗಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡು ಎಲ್ಲಡೆ ಪ್ರತಿಭಟನೆಗಳು ವ್ಯಕ್ತವಾಗಿವೆ. ಬಾಲಕಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಗಳು ಕೇಳಿಬರುತ್ತಿವೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ತೆಲಂಗಾಣ ಸಚಿವ ಕೆ.ಟಿ. ರಾಮರಾವ್​, ಆರಂಭದಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆಂದು ಟ್ವೀಟ್​ ಮಾಡಿದ್ದರು. ಬಳಿಕ ಅದಕ್ಕೆ ಸ್ಪಷ್ಟನೆ ನೀಡಿದ ಅವರು ನನಗೆ ಸರಿಯಾದ ಮಾಹಿತಿ ಸಿಗಲಿಲ್ಲ. ನನ್ನ ತಪ್ಪಾದ ಹೇಳಿಕೆಗೆ ವಿಷಾದಿಸುತ್ತೇನೆ. ಆರೋಪಿ ತಲೆಮರೆಸಿಕೊಂಡಿದ್ದಾನೆ. ಹೈದರಾಬಾದ್​ ಪೊಲೀಸರು ಆತನ ಹಿಂದೆ ಬಿದ್ದಿದ್ದಾರೆ. ಆದಷ್ಟು ಬೇಗ ಆರೋಪಿಯನ್ನು ಬಂಧಿಸಲಾಗುವುದು ಮತ್ತು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎಂದಿದ್ದಾರೆ.
ಅನೇಕ ರಾಜಕಾರಣಿಗಳು, ಕಾರ್ಯಕರ್ತರು ಮತ್ತು ಸಿನಿಮಾ ಕಲಾವಿದರು ಈ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಇನ್ನು ಹಲವು ಕಡೆ ಸಂತ್ರಸ್ತ ಬಾಲಕಿಯ ಫೋಟೋಗಳು ಹರಿದಾಡುತ್ತಿರುವದಕ್ಕೂ ಸಾಮಾಜಿಕ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ.(ಏಜೆನ್ಸೀಸ್​)
ಇರಲಾರದೆ ಇರುವೆ ಬಿಟ್ಟುಕೊಂಡ ಕತೆಯಿದು! ತಳಕು ಬಳಕು​ ವಿಡಿಯೋಗಳಿಗೆ ಮರುಳಾದ್ರೆ ಆಗೋದು ಹೀಗೆ

ಕೊಟ್ಟ ಹಣ ವಾಪಸ್​ ಕೊಡ್ಲಿಲ್ಲ, ತಂಗಿಯನ್ನೂ ಬಿಡ್ಲಿಲ್ಲ: ಪ್ರಿಯಕರನ ಕೊಲೆ ಮಾಡಿಸಿ ಸಿಕ್ಕಿಬಿದ್ದ ಪ್ರೇಯಸಿ

ತಾಲಿಬಾನ್​ನಿಂದ ಶಿಕ್ಷೆಯ ವಿಧಾನ ಬಹಿರಂಗ: ಅಕ್ರಮ ಸಂಬಂಧದಲ್ಲಿ ಸಿಕ್ಕಿಬಿದ್ರೆ ಹೀಗಿರಲಿದೆಯಂತೆ ದಂಡನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
