ನವದೆಹಲಿ:ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್​ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್​ ಇತಿಹಾಸದಲ್ಲೇ ಅಥ್ಲೆಟಿಕ್ಸ್​ ವಿಭಾಗದಲ್ಲಿ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಸ್ವರ್ಣ ಪದಕವನ್ನು ತಂದು ಕೊಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿ ಚಿನ್ನದ ಹುಡುಗನೆಂದೇ ಖ್ಯಾತಿಯಾಗಿರುವ ಹರಿಯಾಣ ಮೂಲದ ನೀರಜ್​ ಚೋಪ್ರಾ ನಮ್ಮೆಲ್ಲರ ಹೆಮ್ಮೆ. ಇತ್ತೀಚೆಗೆ ನಡೆದ ಮಾಧ್ಯಮ ಸಂದರ್ಶನವೊಂದರಲ್ಲಿ ಕಲಾ ಇತಿಹಾಸಕಾರ ರಾಜೀವ್​ ಸೇಥಿ ಅವರು ಸೆಕ್ಸ್​ ಲೈಫ್​ ಬಗ್ಗೆ ಕೇಳಿದ ಪ್ರಶ್ನೆಗೆ ನೀರಜ್​ ಪ್ರತಿಕ್ರಿಯಿಸಿದ ರೀತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಂದರ್ಶನದ ಒಂದು ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ನೀವೊಬ್ಬ ಸುಂದರ ಯುವಕ, ಅಥ್ಲೆಟಿಕ್​ ತರಬೇತಿ ಮತ್ತು ಸೆಕ್ಸ್​ ಲೈಫ್​ ಅನ್ನು ನೀವು ಹೇಗೆ ಬ್ಯಾಲೆನ್ಸ್​ ಮಾಡುತ್ತೀರಿ ಎಂದು ರಾಜೀವ್​ ಸೇಥಿ ಅವರು ಹಿಂದಿ ಭಾಷೆಯಲ್ಲಿ ನೀರಜ್​ರನ್ನು ಪ್ರಶ್ನೆ ಮಾಡುತ್ತಾರೆ. ಅಲ್ಲದೆ, ನಾನು ಕೇಳಿದ ಪ್ರಶ್ನೆ ಅಸಂಬದ್ಧ ಎಂದು ಗೊತ್ತಿದೆ. ಆದರೆ, ಕ್ರೀಡಾಪಟುವಿಗೆ ಅದರ ಹಿಂದಿನ ಗಂಭೀರತೆ ಏನೆಂದು ತಿಳಿದಿದೆ ಎಂದು ತಮ್ಮ ಪ್ರಶ್ನೆಗೆ ಸಮಜಾಯಿಷಿಯನ್ನು ನೀಡಿದರು.
ರಾಜೀವ್​ ಸೇಥಿ ಕೇಳಿದ ಪ್ರಶ್ನೆಗೆ ನೀರಜ್​ ಕೊಂಚ ಮುಜಗರಕ್ಕೀಡಾದಂತೆ ವಿಡಿಯೋದಲ್ಲಿ ಕಾಣುತ್ತದೆ. ಅಲ್ಲದೆ, ಆ ಪ್ರಶ್ನೆಗೆ ಉತ್ತರಿಸಲು ನೀರಜ್​ ನಿರಾಕರಿಸುತ್ತಾರೆ. ಕ್ಷಮಿಸಿ ಸರ್​, ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರಾಜೀವ್​ ಸೇಥಿ ಮತ್ತೊಮ್ಮೆ ಅದೇ ಪ್ರಶ್ನೆಯನ್ನು ಒತ್ತಿ ಹೇಳಿ ಉತ್ತರ ಪಡೆಯಲು ಯತ್ನಿಸುತ್ತಾರೆ. ಆದರೆ, ಮತ್ತೊಮ್ಮೆ ನೀರಜ್​ ನಿರಾಕರಿಸುತ್ತಾರೆ. ಬಳಿಕ ರಾಜೀವ್​ ಸೇಥಿ ತಮ್ಮ ಅಸಂಬದ್ಧ ಪ್ರಶ್ನೆಗೆ ಕ್ಷಮೆಯಾಚಿಸುತ್ತಾರೆ.
ಕಳೆದ ಶುಕ್ರವಾರ ಶೇರ್​ ಆಗಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್​ ಆಗಿದೆ. ಟ್ವಿಟರ್​ನಲ್ಲಿ ಈಗಾಗಲೇ 4 ಲಕ್ಷಕ್ಕೂ ಅಧಿಕ ಮಂದಿ ವಿಡಿಯೋವನ್ನು ವೀಕ್ಷಣೆ ಮಾಡಿದ್ದು, ನೀರಜ್​ ಚೋಪ್ರ, ಮುಜುಗರದ ಸನ್ನಿವೇಶವನ್ನು ಹಾಗೂ ಅಸಂಬದ್ಧ ಪ್ರಶ್ನೆಯನ್ನು ನಿರ್ವಹಿಸಿದ ರೀತಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲಾ ಪ್ರಶ್ನೆಗಳನ್ನು ಸುಲಲಿತವಾಗಿ ನಿಭಾಯಿಸಿದ್ದಕ್ಕಾಗಿ ನೀರಜ್​ರನ್ನು ಸಂಸತ್ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಪ್ರಶಂಸಿಸಿದರು. ಅಲ್ಲದೆ, ಸಾಕಷ್ಟು ಮಂದಿ ನೀರಜ್​ರನ್ನು ಕೊಂಡಾಡಿದ್ದಾರೆ.
If you thought Malishka was Cringe WATCH Rajeev Sethi go a STEP FURTHER 😡 He asked Neeraj Chopra : "How Do you Balance your Sеx Life with your training??" Disgusted Neeraj replied "Aapke question se mera mann bhar gaya"#NeerajChopra#RajeevSethipic.twitter.com/qwVd7hAot4
— Rosy (@rose_k01)September 3, 2021

ಇನ್ನು ಪ್ರಶ್ನೆ ಕೇಳಿದ ರಾಜೀವ್​ ಸೇಥಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕಲಾ ಇತಿಹಾಸಕಾರರು ತಮ್ಮ ವಯಸ್ಸಿಗೆ ತಕ್ಕಂತೆ ಹಾಗೂ ತಮ್ಮ ವೃತ್ತಿಯ ಘನತೆಗೆ ತಕ್ಕಂತೆ ಪ್ರಶ್ನೆ ಮಾಡಬೇಕಿತ್ತು. ಅವರು ಮಾಡಿದ್ದು ವೃತ್ತಿಪರವಲ್ಲದ ಮತ್ತು ಅಪರಾಧ ಎಂದು ನೆಟ್ಟಿಗರು ಜರಿದಿದ್ದಾರೆ.(ಏಜೆನ್ಸೀಸ್​)
ಕಿಚ್ಚನ ಹುಟ್ಟುಹಬ್ಬಕ್ಕೆ ಚಿನ್ನದ ಹುಡುಗ ನೀರಜ್​ ಚೋಪ್ರಾರಿಂದ ಸರ್ಪ್ರೈಸ್: ಟ್ವಿಟರ್​ ಟ್ರೆಂಡಿಂಗ್​ನಲ್ಲಿ ವಿಕ್ರಾಂತ್​ ರೋಣ

ಕೋಚ್ ಕಾಶಿನಾಥ್​ ನಾಯ್ಕ್​ ಮನೆಗೆ ತೆರಳಿ ಗುರುವಂದನೆ ಸಲ್ಲಿಸಿದ ನೀರಜ್​ ಚೋಪ್ರಾ

VIDEO| ಕಾಫಿ ಶಾಪ್​ನಲ್ಲಿ ಖಾಸಗಿ ಅಂಗದ ಬಗ್ಗೆ ಮಾತನಾಡಿದ ಆರ್​ಜಿವಿ ಕಪಾಳಕ್ಕೆ ಬಿತ್ತು ಏಟು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 14 =
Remember me
