ದೀಸ್ಪುರ್​:ತಪ್ಪು ಮಾಡುವ ಕುಟುಂಬಸ್ಥರು, ಸಂಬಂಧಿಕರು ಹಾಗೂ ಆಪ್ತರನ್ನು ಕಾನೂನು ದುರ್ಬಳಕೆ ಮಾಡಿಕೊಂಡರು ಪರವಾಗಿಲ್ಲ, ಹೇಗಾದರೂ ತಪ್ಪನ್ನು ಮರೆಮಾಚಿ ಅವರನ್ನು ಕಾಪಾಡಬೇಕು ಅಂದುಕೊಳ್ಳುವ ಭ್ರಷ್ಟ ಅಧಿಕಾರಿಗಳ ನಡುವೆ ಇಲ್ಲೊಬ್ಬ ಮಹಿಳಾ ಪೊಲೀಸ್​ ಅಧಿಕಾರಿ ಭಾವಿ ಪತಿಯ ವಿರುದ್ಧವೇ ಎಫ್​ಐಆರ್​ ದಾಖಲಿಸಿ ಬಂಧಿಸಿದ್ದಾರೆ. ಪ್ರಮಾಣಿಕ ಹಾಗೂ ದಿಟ್ಟ ಪೊಲೀಸ್​ ಅಧಿಕಾರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಮಹಿಳಾ ಪೊಲೀಸ್​ ಅಧಿಕಾರಿ ವಂಚನೆ ಪ್ರಕರಣದಲ್ಲಿ ಭಾವಿ ಪತಿಯನ್ನೇ ಬಂಧಿಸಿರುವ ಘಟನೆ ಅಸ್ಸಾಂನ ನಗೌನ್​ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಅಧಿಕಾರಿಯ ಹೆಸರು ಜುನ್ಮೊನಿ ರಭ. ನಗೌನ್​ ಜಿಲ್ಲೆಯಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಭಾವಿ ಪತಿ ರಾಣಾ ಪೊಗಾಗ್​ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಗೊತ್ತಾದ ಕೂಡಲೇ ಎಫ್ಐಆರ್​ ದಾಖಲಿಸಿ ಬಂಧಿಸಿದ್ದಾರೆ.
ವರದಿಗಳ ಪ್ರಕಾರ ರಭ ಆರೋಪಿ ರಾಣಾ ಪೊಗಾಗ್​ ಜತೆ ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು. ಕಳೆದ ಅಕ್ಟೋಬರ್​ನಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆರೋಪಿಯು ತಾನು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಒಎನ್‌ಜಿಸಿ) ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂದು ಸುಳ್ಳು ಹೇಳಿಕೊಂಡು, ಒಎನ್‌ಜಿಸಿಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಹಲವಾರು ಜನರಿಗೆ ಲಕ್ಷಾಂತರ ರೂಪಾಯಿಗಳನ್ನು ವಂಚಿಸಿದ್ದ ಎನ್ನಲಾಗಿದೆ.
ಈ ಆರೋಪ ಕೇಳಿಬಂದ ಬೆನ್ನಲ್ಲೇ ಆತನ ವಿರುದ್ಧ ಎಫ್​ಐಆರ್​ ದಾಖಲಿಸಿದ ರಭ, ಪೋಗಾಗ್ ಅವರ ಮನೆಯಿಂದ ಒಎನ್‌ಜಿಸಿಯ 11 ನಕಲಿ ಸೀಲುಗಳು ಮತ್ತು ನಕಲಿ ಗುರುತಿನ ಚೀಟಿಗಳು ಸೇರಿದಂತೆ ಹಲವು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾವಿ ಪತಿ ಎಂದು ನೋಡದೇ ಆತನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ರಭ ಅವರ ಕರ್ತವ್ಯ ನಿಷ್ಠೆಯನ್ನು ನೋಡಿ ಇಡೀ ರಾಜ್ಯ ರಭಗೆ ಮೆಚ್ಚುಗೆ ಮಹಾಪೂರವನ್ನೇ ಹರಿಸುತ್ತಿದ್ದಾರೆ.(ಏಜೆನ್ಸೀಸ್​)
ಲಕ್ಷಾಂತರ ಹೆಣ್ಮಕ್ಕಳ ಪ್ರತಿನಿಧಿಯಾಗಿ ಕೇಳ್ತಿದ್ದೀನಿ… ಮೋದಿ ವಿರುದ್ಧ ದೇಶದ ಅತಿ ಕಿರಿಯ ಮೇಯರ್​ ಬೇಸರ!

ಎಸ್​ಐ ಪ್ರೀತಿಯ ಬಲೆಯಲ್ಲಿ ಬಿದ್ದ ಯುವತಿಗೆ ಪೊಲೀಸಪ್ಪನ ಮತ್ತೊಂದು ಮುಖ ಗೊತ್ತಾಗಿ ಆತ್ಮಹತ್ಯೆಗೆ ಶರಣು!

ನಾಳೆ ಸೈಕ್ಲೋನ್ ಸೃಷ್ಟಿ? 19 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 1 =
Remember me
