ಮುಂಬೈ:ನೀವು ಇದುವರೆಗೂ ಕಂಡು ಕೇಳರಿಯದ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಾನವ ಪ್ರಾಣಿಗಿಂತಲೂ ಕಡೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಾಮದ ಪಿತ್ತ ನೆತ್ತಿಗೇರಿದರೆ, ತನ್ನ ಕಣ್ಣಿಗೆ ಬಿದ್ದ ಯಾವುದನ್ನು ಬಿಡುವುದಿಲ್ಲ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದ್ದು, ಇಡೀ ಮನುಕುಲವೇ ತಲೆತಗ್ಗಿಸುವಂತಹ ಪ್ರಸಂಗ ಇದಾಗಿದೆ.
ಇದುವರೆಗೂ ನಾಯಿ, ಹಸು ಹಾಗೂ ಮೇಕೆಗಳ ಮೇಲೆ ಕಾಮಾಂಧರ ವಕ್ರ ದೃಷ್ಟಿ ಬಿದ್ದು, ಅವುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಸುದ್ದಿಯನ್ನು ಕೇಳಿದ್ದೇವೆ. ಆದರೆ, ಈ ಹೇಳ ಹೊರಟಿರುವ ಸಂಗತಿ ಒಮ್ಮೆ ಮಾನವ ಕುಲದ ಮೇಲೆ ಅಸಹ್ಯ ಹುಟ್ಟಿಸುವಂತಿದೆ. ಹೌದು, ಮಹಾರಾಷ್ಟ್ರ ನಾಲ್ವರು ಕಾಂಮಾಂಧರು ಬೆಂಗಾಲ್​ ಮಾನಿಟರ್​ ಉಡದ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಈ ಘಟನೆ ಮಹಾರಾಷ್ಟ್ರದ ಗೋಥಾನೆ ಗ್ರಾಮದ ಬಳಿ ಇರುವ ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ನಡೆದಿದೆ. ಸಹ್ಯಾದ್ರಿ ಸಂರಕ್ಷಿತಾರಣ್ಯವು ಬೆಂಗಾಲ್​ ಮಾನಿಟರ್​ ಉಡದ ತವರಾಗಿದೆ. ಇದೀಗ ಆ ಮೂಕ ಪ್ರಾಣಿಯ ಮೇಲೆ ಕಾಮಾಂಧರು ದೌರ್ಜನ್ಯ ಎಸಗಿದ್ದು, ನಾಲ್ವರು ಆರೋಪಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಸಂದೀಪ್​ ತುಕ್ರಮ್​, ಪವಾರ್​ ಮಂಗೇಶ್​, ಜನಾರ್ಧನ್​ ಕಾಮ್ಟೇಕರ್​ ಮತ್ತು ಅಕ್ಷಯ್​ ಸುನೀಲ್​ ಎಂದು ಗುರುತಿಸಲಾಗಿದೆ. ಸಂರಕ್ಷಿತಾರಣ್ಯದಲ್ಲಿ ಆರೋಪಿಗಳು ಅಡ್ಡಾಡುವುದನ್ನು ಅರಣ್ಯದಲ್ಲಿ ಅಲ್ಲಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ನೋಡಿ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಅಧಿಕಾರಿಗಳು ಆರಂಭದಲ್ಲಿ ಆರೋಪಿಗಳನ್ನು ಕಳ್ಳ ಬೇಟೆಗಾರರು ಭಾವಿಸಿದ್ದರು. ಆದರೆ, ಅವರ ಮೊಬೈಲ್​ ಫೋನ್​ ವಶಕ್ಕೆ ಪಡೆದುಕೊಂಡು ನೋಡಿದಾಗ ಅವರ ಕರಾಳ ಮುಖ ಬಯಲಾಗಿದೆ. ಬೇಟೆ ಮಾತ್ರವಲ್ಲದೆ ಉಡದ ಮೇಲೆ ಅತ್ಯಾಚಾರ ಮಾಡಿರುವ ವಿಡಿಯೋವನ್ನು ಆರೋಪಿಗಳು ರೆಕಾರ್ಡ್​ ಮಾಡಿಕೊಂಡಿದ್ದರು. ಅದನ್ನು ನೋಡಿ ಅಧಿಕಾರಿಗಳೇ ಒಂದು ಕ್ಷಣ ಶಾಕ್​ ಆಗಿದ್ದಾರೆ.
ಇವರೆಲ್ಲರೂ ಕೊಂಕಣದಿಂದ ಕೊಲ್ಲಾಪುರದ ಚಂದೋಳಿ ಗ್ರಾಮಕ್ಕೆ ಬೇಟೆಗೆಂದು ಬಂದಿರುವುದು ಅರಣ್ಯಾಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ. ತಪ್ಪಿತಸ್ಥರನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಉಡದ ಮೇಲಿನ ಅತ್ಯಾಚಾರ ಆರೋಪ ಸಾಬೀತಾದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ರ ಅಡಿಯಲ್ಲಿ ಅಪರಾಧಿಗಳು ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.(ಏಜೆನ್ಸೀಸ್​)
ನೋಡ ನೋಡುತ್ತಿದ್ದಂತೆ ಕಾಂಕ್ರಿಟ್​ ಚಪ್ಪಡಿ ಕುಸಿದು ಚರಂಡಿ ಒಳಗೆ ಬಿದ್ದ ಐವರು: ಭಯಾನಕ ದೃಶ್ಯ ಸೆರೆ!

RCB ಟ್ರೋಫಿ ಗೆಲ್ಲೋವರೆಗೂ ಮದ್ವೆಯಾಗಲ್ಲ ಎಂದ ಮಹಿಳಾ ಅಭಿಮಾನಿ: ಕ್ರಿಕೆಟಿಗ ಅಮಿತ್​ ಮಿಶ್ರಾ ಕಾಮೆಂಟ್​ ವೈರಲ್​

ಸಪ್ತಪದಿಗೆ ಹೊಸ ಮುಹೂರ್ತ ಫಿಕ್ಸ್; 28, ಮೇ 11, 25ಕ್ಕೆ ಸಾಮೂಹಿಕ ವಿವಾಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − six =
Remember me
