ವಿಜಯವಾಡ:ನಿರ್ಭಯಾದಂತಹ ಕಾನೂನುಗಳು ಹಾಗೂ ಅತ್ಯಾಚಾರಿಗಳ ಮೇಲಿನ ಎನ್​ಕೌಂಟರ್​ನಂತಹ ಪ್ರಕರಣಗಳು ನಡೆಯುತ್ತಿದ್ದರೂ ಕಾಮುಕರಿಗೆ ಇನ್ನು ಭಯ ಬಂದಿಲ್ಲ ಅನಿಸುತ್ತಿದೆ. ಏಕೆಂದರೆ, ನಿರ್ಭಯಾ ಮಾದರಿಯಲ್ಲಿಯೇ ಮತ್ತೊಂದು ಪ್ರಕರಣ ಆಂಧ್ರ ಪ್ರದೇಶದ ಪೂರ್ವ ಗೋದಾವರಿಯಲ್ಲಿ ಜಿಲ್ಲೆಯಲ್ಲಿ ನಡೆದಿದೆ.
ಸ್ನೇಹಿತನ ಜತೆಯಲ್ಲಿ ಬೀಚ್​​ಗೆ ತೆರಳಿದ ಯುವತಿಯ ಮೇಲೆ ಮೂವರು ಪಾನಮತ್ತ ಕಾಮುಕರು ಅಟ್ಟಹಾಸ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಲಗುಪ್ತಮ್​ ವಲಯದ 21 ವರ್ಷದ ಯುವತಿ 15 ದಿನಗಳ ಹಿಂದೆ ಸಂಬಂಧಿಕರ ಮನೆಗೆ ಬಂದಿದ್ದಳು. ಈ ನಡುವೆ ಆಕೆ ತನ್ನ ಸ್ನೇಹಿತನ​ ಜತೆಯಲ್ಲಿ ಕೊಮರಗಿರಿಪಟ್ಟಣಂನ ಕರಾವಳಿ ತೀರ ಪ್ರದೇಶಕ್ಕೆ ತೆರಳಿದ್ದಾಳೆ.
ಇದೇ ವೇಳೆ ಸಿತಾರಾಮಪುರದ ಇಬ್ಬರು ಯುವಕರು ಮತ್ತು ಸತ್ಯನಾರಾಯಣಪುರದ ಓರ್ವ ವ್ಯಕ್ತಿ ಪಾನಮತ್ತ ಸ್ಥಿತಿಯಲ್ಲಿ ಯುವತಿಯ ಎದುರಾಗಿದ್ದಾರೆ. ಬಳಿಕ ಸ್ನೇಹಿತನನ್ನು ಕಟ್ಟಿಹಾಕಿ ಮೂವರು ಸೇರಿ ಯುವತಿಯನ್ನು ಅತ್ಯಾಚಾರ ಮಾಡಿದ್ದಾರೆ. ಅಲ್ಲದೆ, ಬೆತ್ತಲೆ ಫೋಟೋಗಳನ್ನು ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಘಟನೆ ನಡೆದ ಹತ್ತು ದಿನಗಳ ಬಳಿಕ ಮೂವರಲ್ಲಿ ಒಬ್ಬ ಮತ್ತೆ ಆಕೆಯ ಮುಂದೆ ಎದುರಾಗಿ ಮತ್ತೊಮ್ಮೆ ತನ್ನ ಆಸೆ ತೀರಿಸುವಂತೆ ಕೇಳಿದ್ದಾನೆ. ಇಲ್ಲದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಡುವುದಾಗಿ ಹೆದರಿಸಿದ್ದಾನೆ.
ಇದಾದ ಬಳಿಕ ಯುವತಿ ನಡೆದ ಘಟನೆಯನ್ನು ಮನೆಯವರ ಮುಂದೆ ವಿವರಿಸಿದ್ದಾಳೆ. ಇದರ ಬೆನ್ನಲ್ಲೇ ಬುಧವಾರ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಾಗಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ಜನರಲ್ಲಿ ಆತಂಕವೂ ಶುರುವಾಗಿದೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ಕಠಿಣ ಶಿಕ್ಷೆ ನೀಡುವಂತೆ ಜನರು ಆಗ್ರಹಿಸಿದ್ದಾರೆ.(ಏಜೆನ್ಸೀಸ್​)
ಕರೊನಾ ವೈರಸ್‌ 3ನೇ ಅಲೆ ತಡೆಯಬೇಕೆ? ಹಾಗಿದ್ದರೆ ಯಜ್ಞ ಮಾಡಿಸಿ ಎಂದ ಸಚಿವೆ ಉಷಾ

ವೈರಲ್​ ಆಗ್ತಿದೆ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​-ನಟಿ ರೇಖಾ ಕುರಿತ ಸ್ವಾರಸ್ಯಕರ ಸುದ್ದಿ!

ಇದನ್ನು ನೋಡಿ ಅಳಬೇಕೋ ಅಥವಾ ನಗಬೇಕೋ ಎಂದು ಗೊತ್ತಾಗ್ತಿಲ್ಲ ಎಂದ ಯುಪಿ ಮಾಜಿ ಸಿಎಂ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + eighteen =
Remember me
