ಜೈಪುರ:ರಾಜಸ್ಥಾನದ ಅಲ್ವಾರ್​ ಜಿಲ್ಲೆಯಲ್ಲಿ ಅಮಾನವೀಯ ಘಟನೆ ನಡೆದಿದ್ದು, 16 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಗುಪ್ತಾಂಗಕ್ಕೆ ಹರಿತವಾದ ಆಯುಧದಿಂದ ಇರಿದು, ಸೇತುವೆಯಿಂದ ಕೆಳಗೆ ಬೀಸಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂತ್ರಸ್ತೆಯು ವಿಶೇಷ ಚೇತನ ಹುಡುಗಿಯಾಗಿದ್ದು, ಈ ವಾರದ ಆರಂಭದಲ್ಲಿ ಅಲ್ವಾರ್‌ನ ತಿಜಾರಾ ಮೇಲ್ಸೇತುವೆಯ ಕೆಳಗೆ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದಳು. ಮಂಗಳವಾರ ಆಕೆಯನ್ನು ಅಲ್ವಾರ್​ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ವೈದ್ಯರ ಸಾಕಷ್ಟು ಪ್ರಯತ್ನಗಳ ನಡುವೆ ಆಕೆ ಚೇತರಿಸಿಕೊಳ್ಳದಿದ್ದಾಗ ಹೆಚ್ಚಿನ ಚಿಕಿತ್ಸೆಗೆಂದು ಆಕೆಯನ್ನು ಬುಧವಾರ ಜೈಪುರದ ಜೆಕೆ ಲಾನ್​ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಸುಮಾರು ಎರಡೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ನಂತರ, ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ, ಆಕೆಯ ಗುಪ್ತಾಂಗದಲ್ಲಿ ಇರಿಯಲಾಗಿದ್ದ ಹರಿತ ಆಯುಧವನ್ನು ವೈದ್ಯರು ಹೊರತೆಗೆದಿದ್ದಾರೆ. ಆಯುಧದಿಂದ ಆಕೆಯ ಆಂತರಿಕ ಅಂಗಗಳಿಗೆ ಗಂಭೀರವಾದ ಗಾಯಗಳನ್ನು ಉಂಟುಮಾಡಿದೆ ಎಂದು ತಿಳಿಸಿದ್ದಾರೆ.
ಸದ್ಯದ ಮಾಹಿತಿಯ ಪ್ರಕಾರ, ಬಾಲಕಿಯ ಆಂತರಿಕ ಅಂಗಗಳು ಹಾನಿಗೊಳಗಾಗಿದ್ದು, ಪ್ರಸ್ತುತ ಆಕೆ ಜೆಕೆ ಲೋನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ. ಬಾಲಕಿಯ ದೇಹದ ಆಂತರಿಕ ಅಂಗಗಳಿಗೆ ಹಲವಾರು ಆಳವಾದ ಗಾಯಗಳಾಗಿವೆ.(ಏಜೆನ್ಸೀಸ್​)
ರಾತ್ರೋರಾತ್ರಿ ಕೋಟ್ಯಧಿಪತಿಯಾದ ವೃದ್ಧ: ದಿಢೀರನೇ ಭಾರೀ ಹಣ ಬಂದ್ರೂ ಹೆದರಿ ನಡುಗುತ್ತಿರುವ ವೃದ್ಧ!

ಪಾದಯಾತ್ರೆಗೆ ಕ್ಷಣಕ್ಕೊಂದು ತಿರುವು: ಬಿಡದಿಯಲ್ಲಿ ಊಟದ ವ್ಯವಸ್ಥೆ ರದ್ದು, 5 ಮಂದಿ ಮಾತ್ರವೇ ಪಾದಯಾತ್ರೆ ಮಾಡ್ತಾರೆ…

ತಂದೆ ಮಾತಿಗೆ ಮಗನ ಬೆಂಬಲ: ಟಾಲಿವುಡ್​ನಲ್ಲಿ ಅಲ್ಲೋಲ್ಲ ಕಲ್ಲೋಲ ಸೃಷ್ಟಿಸುತ್ತಾ ನಾಗಚೈತನ್ಯ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
