ನವದೆಹಲಿ:ಫೇಸ್​ಬುಕ್​ನಲ್ಲಿ ಪರಿಚಯ ಇಲ್ಲದವರ ಸ್ನೇಹ ಮಾಡಿಕೊಳ್ಳುವ ಮುನ್ನ ಹತ್ತು ಬಾರಿ ಯೋಚಿಸಬೇಕು. ಇಲ್ಲವಾದಲ್ಲಿ ಕೆಲವೊಮ್ಮೆ ಎಂಥಾ ದುರ್ಗತಿ ಎದುರಿಸಬೇಕಾಗುತ್ತದೆ ಎಂಬುದಕ್ಕೆ ದೆಹಲಿ ಮಹಿಳೆ ದುರಂತ ಉದಾಹರಣೆಯಾಗಿದ್ದಾಳೆ.
ಫೇಸ್​ಬುಕ್​ ಫ್ರೆಂಡ್​ ನಂಬಿ ಆತನೊಂದಿಗೆ ತೆರಳಿದ ಮಹಿಳೆಯನ್ನು ಬರೋಬ್ಬರಿ 25 ಮಂದಿ ಸೇರಿ ಕಾಡಿನಲ್ಲಿ ಗ್ಯಾಂಗ್​ರೇಪ್​ ಮಾಡಿರುವ ಘಟನೆ ದೆಹಲಿ ಸಮೀಪದಲ್ಲಿ ಮೇ 3ರಂದು ನಡೆದಿದ್ದು, ಘಟನೆ ನಡೆದ 9 ದಿನಗಳ ಬಳಿಕ ಮಹಿಳೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ.
ಸುಶಿಕ್ಷಿತ ಮಹಿಳೆಯಾಗಿರುವ ಸಂತ್ರಸ್ತೆ ದೆಹಲಿಯ ಪ್ರತಿಷ್ಠಿತ ಮನೆಗಳಲ್ಲಿ ಕೆಲಸ ಮಾಡಿಕೊಂಡಿದ್ದಾಳೆ. ಸುಮಾರು 4 ವರ್ಷಗಳಿಂದ ದೆಹಲಿಯಲ್ಲಿ ವಾಸವಿದ್ದಾಳೆ. ಈ ಮಧ್ಯೆ 23 ವರ್ಷದ ಸಾಗರ ಹೆಸರಿನ ಯುವಕ ಕಳೆದ ಜನವರಿಯಲ್ಲಿ ಆಕೆಗೆ ಫೇಸ್​ಬುಕ್​ ಮೂಲಕ ಪರಿಚಯವಾಗಿದ್ದಾನೆ. ಅನೇಕ ದಿನಗಳವರೆಗೆ ಫೇಸ್​ಬುಕ್​ನಲ್ಲಿ ನಡೆದ ಮಾತುಕತೆ ನಂತರ ಫೋನ್​ ನಂಬರ್​ ವಿನಿಮಯ ಹಂತಕ್ಕೆ ಬಂದಿದೆ.
ಹೀಗೆ ಇಬ್ಬರ ನಡುವೆ ಫೋನ್​ನಲ್ಲಿ ಮಾತುಕತೆ ನಡೆಯುತ್ತಿರುವಾಗ ಒಮ್ಮೆ ಸಾಗರ್​, ಆಕೆಗೆ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾನೆ. ಅಲ್ಲದೆ, ಆಕೆಯನ್ನು ತನ್ನ ಪಾಲಕರಿಗೆ ಪರಿಚಯ ಮಾಡಿಕೊಡುವುದಾಗಿಯೂ ಹೇಳಿದ್ದಾನೆ. ಹಿಂದು-ಮುಂದು ಯೋಚಿಸದೇ ಆತನನ್ನು ಬಲವಾಗಿ ನಂಬಿದ ಸಂತ್ರಸ್ತೆ ತುಂಬಾ ಸಲುಗೆ ಬೆಳಸಿಕೊಂಡಿದ್ದಾಳೆ.
ಪಾಲಕರಿಗೆ ನೇರವಾಗಿ ಪರಿಚಯ ಮಾಡಿಕೊಡುತ್ತೇನೆ ಹೋಡಲ್​ ಏರಿಯಾಗಿ ಬಂದುಬಿಡು ಎಂದು ಸಾಗರ್ ಹೇಳಿದ​ ಮಾತನ್ನು ನಂಬಿ ಮೇ 3ರಂದು ಮಹಿಳೆ ಹೋಡಲ್​ ಕಡೆ ಪ್ರಯಾಣ ಬೆಳೆಸಿದ್ದಾಳೆ. ಸಾಗರ್​ ಹೇಳಿದ ಸ್ಥಳಕ್ಕೆ ಹೋಗಿದ್ದಾಳೆ. ಬಳಿಕ ಸಾಗರ್​ ಆಕೆಯನ್ನು ರಾಮಗಢದ ಕಾಡಿಗೆ ಕರೆದಿಯ್ದಿದ್ದಾನೆ. ಇದೇ ವೇಳೆ ಸಾಗರ್​ ಸಹೋದರು ಮತ್ತು ಆತನ ಸ್ನೇಹಿತರು ಕಾಡಿನಲ್ಲಿರುವ ಟ್ಯೂಬ್​ ವೆಲ್​ನಲ್ಲಿ ಮಧ್ಯ ಸೇವಿಸುತ್ತಿದ್ದರು.
ಆಕೆ ಅವರಿದ್ದ ಸ್ಥಳಕ್ಕೆ ತೆರಳುತ್ತಿದ್ದಂತೆ ಎಲ್ಲರೂ ಸೇರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದಾದ ಮಾರನೇ ದಿನಕ್ಕೆ ಮಹಿಳೆಯನ್ನು ಸ್ಕ್ರ್ಯಾಪ್​ ಡೀಲರ್​ ಆಕಾಶ್​ ಬಳಿ ಕರೆದೊಯ್ದಿದ್ದಾರೆ. ಇದೇ ವೇಳೆ ಐದು ಮಂದಿಯಿಂದ ಮತ್ತೆ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಪದೇಪದೆ ರೇಪ್​ನಿಂದಾಗಿ ಮಹಿಳೆಯ ಆರೋಗ್ಯ ಹದಗೆಡುತ್ತಿದ್ದಂತೆ ಐವರು ಆರೋಪಿಗಳು ಆಕೆಯನ್ನು ಬದರ್ಪುರ್​ ಗಡಿ ಬಳಿ ಎಸೆದು ಪರಾರಿಯಾಗಿದ್ದಾರೆ.
ಮೇ 12 ರಂದು ಹಾಸ್ಸನ್ಪುರ್​ ಪೊಲೀಸ್​ ಠಾಣೆಗೆ ತೆರಳಿದ ಮಹಿಳೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ. ನನಗೆ ಆರೋಗ್ಯ ಸರಿಯಿಲ್ಲದಿದ್ದರಿಂದ ದೂರು ನೀಡಲು ವಿಳಂಬವಾಯಿತು ಎಂದಿದ್ದಾಳೆ. ದೂರಿನ ಆಧಾರದ ಮೇಲೆ ಶುಕ್ರವಾರ ಸಾಗರ್​ನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ತನ್ನೊಂದಿಗೆ ಮಲಗುವಂತೆ ನಟಿಗೆ ಆಹ್ವಾನ ನೀಡಿದ ಪ್ರಾಧ್ಯಾಪಕ: ಜಾಲತಾಣದಲ್ಲಿ ಅಳಲು ತೋಡಿಕೊಂಡ ನಟಿ!
ಎರಡನೇ ವಿವಾಹವಾಗಿದ್ದ ವಿಚ್ಛೇದಿತೆಗೆ ಎಂಜಲು ನೆಕ್ಕುವ ಶಿಕ್ಷೆ! ಮಹಾರಾಷ್ಟ್ರದಲ್ಲಿ ಆಘಾತದ ಘಟನೆ
ಕ್ಷಮೆ ಕೇಳಲಿ ಎಂದ ರೋಹಿಣಿ ಸಿಂಧೂರಿಗೆ ಪ್ರಶ್ನೆಗಳ ಸುರಿಮಳೆಗೈದ ಶಾಸಕ ಸಾರಾ ಮಹೇಶ್!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + seventeen =
Remember me
