ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.
ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯರು ಪಾರ್ಟಿ ಒಂದರಲ್ಲಿ ಹರಿಯಾಣದ ಹಾಡೊಂದಕ್ಕೆ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಮಹಿಳೆಯರ ಮಧ್ಯೆ ಪುಟ್ಟ ಬಾಲಕನೊಬ್ಬನು ಡಾನ್ಸ್​ ಮಾಡುತ್ತಿರುತ್ತಾನೆ. ಹಿಂದೆ ಬಾಲಕನಿರುವುದನ್ನು ಗಮನಿಸದೇ ಓರ್ವ ಮಹಿಳೆ ಡಾನ್ಸ್​ ಮಾಡುತ್ತಾ ಹಿಂದೆ ಹೆಜ್ಜೆ ಹಾಕುತ್ತಿದ್ದಂತೆ ಅಡ್ಡಬಂದ ಬಾಲಕನ ಮೇಲೆ ಬೀಳುತ್ತಾಳೆ. ತಕ್ಷಣ ಅಲ್ಲಿದ್ದ ಇತರರು ಮಹಿಳೆಯನ್ನು ಮೇಲಕ್ಕೆ ಎತ್ತಲು ಸಹಾಯ ಮಾಡಿ ಮಗುವನ್ನು ಎತ್ತಿಕೊಳ್ಳುತ್ತಾರೆ. ಮೊದಲೇ ಮಹಿಳೆ ತುಂಬಾ ದಪ್ಪಗಿದ್ದರಿಂದ ಬಿದ್ದ ರಭಸಕ್ಕೆ ನೋವಾಗಿ ಮಗು ಅಳುತ್ತಿರುವುದು ವಿಡಿಯೋದಲ್ಲಿದೆ.
ಈ ವಿಡಿಯೋವನ್ನು ಪಟಿಯಾಲೆ ವಾಲೆ ಚಾಚಾ ಜಿ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಅಪ್​ಲೋಡ್​ ಮಾಡಲಾಗಿದ್ದು, ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. 30 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್​ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
A post shared by hase da saman😎(100k🎯) (@patiale_wale_chacha_ji)

ಮಹಿಳೆಯನ್ನು ಡ್ರೈವಿಂಗ್ ಟೆಸ್ಟ್​ಗೆ ಕರೆದೊಯ್ದ RTO ಅಧಿಕಾರಿಯಿಂದ ಮಾರ್ಗ ಮಧ್ಯೆ ನಡೆಯಿತು ನೀಚ ಕೃತ್ಯ

ಯಾರಾಗಲಿದ್ದಾರೆ ಬಿಗ್​ಬಾಸ್​ ಒಟಿಟಿ ಸೀಸನ್​ ವಿನ್ನರ್? ನೆಟ್ಟಿಗರ ಈ ಊಹೆ ನಿಜವಾಗುತ್ತಾ?

ಜನಾಕ್ರೋಶಕ್ಕೆ ಹೆದರಿ ದೇಶ ಬಿಟ್ಟು ಪರಾರಿಯಾಗಿದ್ದ ಲಂಕಾದ ಮಾಜಿ ಅಧ್ಯಕ್ಷ ತವರಿಗೆ ವಾಪಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 17 =
Remember me
