ಲಖನೌ:ಮಾಹಾಮಾರಿ ಕರೊನಾ ವೈರಸ್​ ನಿರ್ವಹಣೆ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶಂಸಿಸಿರುವ ಆಸ್ಟ್ರೇಲಿಯನ್​ ಸಂಸದ ಕ್ರೇಗ್ ಕೆಲ್ಲಿ​, ತಮ್ಮ ದೇಶದಲ್ಲಿನ ಕೋವಿಡ್ ನಿರ್ವಹಣೆಗಾಗಿ ಯೋಗಿ ಅವರ ನೆರವು ಕೋರಿದ್ದಾರೆ.
ಟ್ವೀಟ್​ ಮಾಡಿರುವ ಕೆಲ್ಲಿ, ಭಾರತದ ಉತ್ತರ ಪ್ರದೇಶವು ಮತ್ತು ಅದರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ತಮ್ಮ ಸಮರ್ಥ ಆಡಳಿತದೊಂದಿಗೆ ಕೋವಿಡ್​ ಸಾಂಕ್ರಮಿಕವನ್ನು ಸಮರ್ಥವಾಗಿ ಎದುರಿಸಿದೆ. ಆರೋಗ್ಯ ಕಾರ್ಯಕರ್ತರು, ರೋಗಿಗಳು ಮತ್ತು ಸೋಂಕಿತ ಜನರ ಸುರಕ್ಷಿತಾ ಕ್ರಮವಾಗಿ ಉತ್ತರ ಪ್ರದೇಶವು ‘ಐವರ್ಮೆಕ್ಟಿನ್’ ಅನ್ನು ಪರಿಚಯಿಸಿರುವುದು ಅದ್ಭುತ ಎಂದು ಕೆಲ್ಲಿ ಕೊಂಡಾಡಿದ್ದಾರೆ.
WELL DONE to Indian State of UP & its Chief Minister@myogiadityanathfor their effective management in crushing the wave
Brilliant that UP introduced ‘Ivermectin’ as preventive measure for health workers, patients & people exposed to infected people !!https://t.co/eYmCFBdgQx
— Craig Kelly (@CKellyUAP)July 12, 2021

ಮತ್ತೊಂದು ಟ್ವೀಟ್​ನಲ್ಲಿ ನಮ್ಮ ದೇಶದಲ್ಲಿ ಸೃಷ್ಟಿಯಾಗಿರುವ ಕೋವಿಡ್​ ಬಿಕ್ಕಟ್ಟು ನಿಭಾಯಿಸಲು ಯೋಗಿ ಆದಿತ್ಯನಾಥ್​ ಅವರನ್ನು ನೆರವು ಕೇಳಿದ್ದಾರೆ.
ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಮ ಯೋಗಿ ಆದಿತ್ಯನಾಥ್​ ಅವರನ್ನು ಕೊಂಡಿದ್ದರು. ಹಿರಿಯ ನಾಗರಿಕರಿಗೆ ಆರೋಗ್ಯ ಸೇವೆ ಮತ್ತು ಕಾನೂನು ನೆರವು ಇತರ ಸೇವೆಗಳನ್ನು ವಿಸ್ತರಿಸಲು ಸಹಾಯವಾಣಿ ಸೌಲಭ್ಯವನ್ನು ನೀಡಲು ಉತ್ತರ ಪ್ರದೇಶ ಸರ್ಕಾರ ಕ್ರಮ ಕೈಗೊಂಡಿದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
