ಹೈದರಾಬಾದ್​:ಆಟೋ ಚಾಲಕನ ಪ್ರೀತಿಯ ಬಲೆಯಲ್ಲಿ ಬಿದ್ದ ಬಿಟೆಕ್ ವಿದ್ಯಾರ್ಥಿನಿಯೊಬ್ಬಳು ಇದೀಗ ನ್ಯಾಯಕ್ಕಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ವಂಚಿಸಿರುವ ಆರೋಪದ ಮೇಲೆ ಪ್ರಿಯಕರನ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ.
ಆಟೋ ಚಾಲಕನಾಗಿ ಕೆಲಸ ಮಾಡುತ್ತಿರುವ ರಾಟ್ಲವತ್​ ಶಂಕರ್​ (24) ಹೈದರಾಬಾದ್​ನ ಚಂಪಪೇಟ್​ ನಿವಾಸಿ. ಹಯಾತ್​ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬಿ.ಟೆಕ್​ ವಿದ್ಯಾರ್ಥಿನಿ ವಾಸವಿದ್ದಳು. ಅಲ್ಲದೆ, ಆಕೆ ಆಟೋ ಚಾಲಕನ ಸ್ನೇಹಿತನ ತಂಗಿಯಾಗಿದ್ದು, ಇಬ್ಬರ ನಡುವೆ ಪರಿಚಯವಾಗಿತ್ತು. ದಿನ ಕಳೆದಂತೆ ಪರಿಚಯ ಸ್ನೇಹಕ್ಕೆ ತಿರುಗಿತ್ತು.
ಆಗಾಗ ಭೇಟಿ ಮಾಡುವುದು ಸಾಮಾನ್ಯವಾಗಿತ್ತು. ಹೀಗೆ ಒಂದು ದಿನ ಶಂಕರ್, ವಿದ್ಯಾರ್ಥಿನಿ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆಕೆಯು ಕೂಡ ಸಮ್ಮತಿ ಸೂಚಿಸಿದ್ದಳು. ಇಬ್ಬರು ಆಗಾಗ ಹೊರಗಡೆ ಸುತ್ತಾಡುವುದು ಮಾಡುತ್ತಿದ್ದರು. ಇಬ್ಬರ ನಡುವೆ ಸಲುಗೆ ಬೆಳೆದಂತೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ದೈಹಿಕ ಸಂಪರ್ಕವನ್ನು ಬೆಳೆಸಿದ್ದರು. ಇದೀಗ ಶಂಕರ್​ ತನ್ನ ವರಸೆಯನ್ನೇ ಬದಲಿಸಿದ್ದಾನೆ.
ಮದುವೆ ಮಾಡಿಕೊಳ್ಳಲು ನಿರಾಕರಿಸುತ್ತಿದ್ದು, ಮದುವೆ ಆಗುವ ಯಾವುದೇ ಉದ್ದೇಶ ನನಗಿರಲಿಲ್ಲ ಎನ್ನುತ್ತಿದ್ದಾನೆ. ತಾನು ಮೋಸ ಹೋಗಿರುವುದು ವಿದ್ಯಾರ್ಥಿನಿಗೆ ಮನವರಿಕೆ ಆಗಿದ್ದು, ಹಯಾತ್​ ನಗರ ಪೊಲೀಸ್​ ಠಾಣೆಯಲ್ಲಿ ಬುಧವಾರ ರಾತ್ರಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಶಂಕರ್​ ಪತ್ತೆಗೆ ಬಲೆ ಬೀಸಿದ್ದಾರೆ.(ಏಜೆನ್ಸೀಸ್​)
ಚಂದ್ರಬಾಬು ನಾಯ್ಡು ಕಣ್ಣೀರು: ಬ್ಲೂ ಫಿಲ್ಮ್​ ಸಿಡಿ ನೆನಪಿಸಿ ಬೈ ಬೈ ಬಾಬು ಎಂದ ಶಾಸಕಿ ರೋಜಾ!
ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿ! ಸಾರ್ವಜನಿಕರು ಹೇಳಿದ್ದು ಹೀಗೆ…
ಬಾಲಕಿ ಮೇಲೆ ಕಳ್ಳತನ ಆರೋಪ ಹೊರಿಸಿ, ಅಮಾನಿಸಿದ ಮಹಿಳಾ ಪೊಲೀಸ್​ಗೆ ಹೈಕೋರ್ಟ್​ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 20 =
Remember me
