ನವದೆಹಲಿ:ಪ್ರತಿಯೊಬ್ಬರಿಗೂ “ಕಾಗಾಜ್” ಸಿನಿಮಾ ಬಗ್ಗೆ ತಿಳಿದಿದೆ. ಈ ಸಿನಿಮಾವು ರೈತ ಲಾಲ್​ ಬಿಹಾರಿ ಮೃತಕ್​ ಅವರ ಜೀವನ ಆಧಾರಿತವಾಗಿದೆ. ತಾನು ಜೀವಂತವಾಗಿದ್ದೇನೆ ಎಂದು ಸಾಬೀತು ಮಾಡಲು ಹಲವು ವರ್ಷಗಳವರೆಗೆ ಬಿಹಾರಿ ಮೃತಕ್ ಹೋರಾಟ ಮಾಡಿದ್ದರು.
1976ರಲ್ಲಿ ಬಿಹಾರಿ ಮೃತಕ್​ ಅವರು ಬದುಕಿದ್ದರೂ ಮೃತಪಟ್ಟಿದ್ದಾರೆಂದು ಘೋಷಿಸಲಾಗಿತ್ತು. ಸರ್ಕಾರಿ ದಾಖಲೆಯನ್ನು ಸರಿಮಾಡಿಸಿ ತಾನು ಬದುಕಿದ್ದೇನೆಂದು ಸಾಬೀತು ಮಾಡಲು ಬಿಹಾರಿ ಮೃತಕ್​ 18 ವರ್ಷ ಹೋರಾಟ ಮಾಡಿದ್ದರು.
ಇದೀಗ ಬಿಹಾರಿ ಮೃತಕ್​ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದ್ದು, 56 ವರ್ಷದ ತನ್ನ ಪತ್ನಿ ಕರ್ಮಿ ದೇವಿಯನ್ನು ಮರು ಮದುವೆ ಆಗಲು ನಿರ್ಧರಿಸಿದ್ದಾರೆ. ಏಕೆಂದರೆ, ಸರ್ಕಾರಿ ದಾಖಲೆಗಳ ಪ್ರಕಾರ ಅವರು ಜೀವಂತವಾಗಿ ಬೆಳೆದು ಇದೀಗ 27 ವರ್ಷಗಳಾಗಿವೆ. ಜೂನ್ 30, 1994 ರಂದು ಅವರನ್ನು ಜೀವಂತವಾಗಿದ್ದಾರೆಂದು ಘೋಷಿಸಲಾಯಿತು.
ಮಾಧ್ಯಮದೊಂದಿಗೆ ಮಾತನಾಡಿರುವ ಬಿಹಾರಿ ಮೃತಕ್​, ಸರ್ಕಾರಿ ದಾಖಲೆಗಳ ಪ್ರಕಾರ ನಾನು ಹುಟ್ಟಿ 27 ವರ್ಷಗಳಾಗಿವೆ. 2022ರಲ್ಲಿ ನನ್ನ ವಿವಾಹ ಸಮಾರಂಭ ನಡೆಯಲಿದೆ. ಸರ್ಕಾರಿ ದಾಖಲೆಗಳಲ್ಲಿ ನನ್ನ ಪುನರ್ಜನ್ಮದ ಬಳಿಕ ನಾನು 28 ನೇ ವರ್ಷಕ್ಕೆ ಕಾಲಿಡಲಿದ್ದೇನೆ ಎಂದು ಹೇಳಿದ್ದಾರೆ.
ನಾನು ನನ್ನ ಪ್ರಕರಣದಲ್ಲಿ ಹೋರಾಡಿ ಗೆದ್ದಿದ್ದೇನೆ, ಆದರೆ ವ್ಯವಸ್ಥೆಯಲ್ಲಿ ಯಾವುದೇ ದೊಡ್ಡ ಬದಲಾವಣೆಗಳು ಸಂಭವಿಸಿಲ್ಲ. 18 ವರ್ಷಗಳಿಂದ ನನ್ನನ್ನು ಸರ್ಕಾರಿ ದಾಖಲೆಗಳಲ್ಲಿ” ಸತ್ತ ” ವ್ಯಕ್ತಿ ಎಂದು ಪಟ್ಟಿ ಮಾಡಲಾಗಿತ್ತು ಎಂದು ಹೇಳಿದರು.
ನನ್ನಂತೆಯೇ ಸತ್ತರೆಂದು ಘೋಷಿಸಲ್ಪಟ್ಟ ಜನರಿದ್ದಾರೆ ಮತ್ತು ಅವರಿಗೆ ಸಂಬಂಧಿಸಿದ ಭೂಮಿಯನ್ನು ಸಂಬಂಧಿಕರು ಸರ್ಕಾರಿ ಅಧಿಕಾರಿಗಳ ನೆರವಿನೊಂದಿಗೆ ಕಬಳಿಸಿದ್ದಾರೆ. ಅಂತಹ ಬಲಿಪಶುಗಳಿಗೆ ಹಲವು ದಿನಗಳಿಂದ ನಾನು ಸಹಾಯ ಮಾಡುತ್ತಿದ್ದೇನೆ ಮತ್ತು ನನ್ನ ಅಭಿಯಾನವನ್ನು ನಾನು ಮುಂದುವರಿಸುತ್ತೇನೆಂದು ಬಿಹಾರಿ ಮೃತಕ್​ ತಿಳಿಸಿದ್ದಾರೆ.
1975 ರಲ್ಲಿ ಅಜಮ್‌ಗಢ ಜಿಲ್ಲೆಯ ಅಮಿಲೋ ಗ್ರಾಮದ ನಿವಾಸಿ ಲಾಲ್ ಬಿಹಾರಿ ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು. ತನ್ನ ಗುರುತನ್ನು ಪುನಃ ಪಡೆದುಕೊಳ್ಳುವ ಕಾನೂನು ಹೋರಾಟದ ಸಮಯದಲ್ಲಿ, ಅವರು ತಮ್ಮ ಹೆಸರಿಗೆ ‘ಮೃತಕ್’ (ಸತ್ತವರು) ಎಂದು ಸೇರಿಸಿಕೊಂಡರು. ಈ ರೀತಿಯ ಘಟನೆಗಳನ್ನು ಎತ್ತಿ ಹಿಡಿಯಲು ಅವರು ಮೃತಕ್ ಸಂಘವನ್ನು ಸ್ಥಾಪಿಸಿದ್ದಾರೆ. ಮೃತಕ್‌ಗೆ ಮೂವರು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ.(ಏಜೆನ್ಸೀಸ್​)
ದಾರಿತಪ್ಪಿ ಪಾಳುಬಾವಿಗೆ ಬಿದ್ದ 80 ವರ್ಷದ ವೃದ್ಧ: ಮೂರು ದಿನಗಳ ಬಳಿಕ ರಕ್ಷಣೆ ಮಾಡಿದ್ದೇ ರೋಚಕ!

ಮಗನ ಮೇಲೆಯೇ ತಾಯಿಯ ಲೈಂಗಿಕ ದೌರ್ಜನ್ಯ: ಪೊಲೀಸರು ಇಂತಹ ಕೀಳು ಮಟ್ಟಕ್ಕೆ ಇಳಿದರಾ?

ಯೂಟ್ಯೂಬ್​ ನೋಡಿ ನಕಲಿ ನೋಟು ಪ್ರಿಂಟ್​: ಆರೋಪಿ ಗಳಿಸಿದ ಹಣದ ಮೊತ್ತ ಕೇಳಿ ಪೊಲೀಸರೇ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
