ನವದೆಹಲಿ:ನಿನ್ನೆ (ಡಿಸೆಂಬರ್​ 8) ಭಾರತದ ಪಾಲಿಗೆ ಅತ್ಯಂತ ಕರಾಳ ದಿನ. ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್​ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಬಿಪಿನ್​ ರಾವತ್​ ಅನಿರೀಕ್ಷಿತ ನಿಧನದಿಂದ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿರುವಾಗ ಭಾರತೀಯ ಸೇನೆಯ ನಿವೃತ್ತ ಕರ್ನಲ್​ ಒಬ್ಬರು ಮಾಡಿರುವ ಟ್ವೀಟ್​ ತೀವ್ರ ಟೀಕೆಗೆ ಗುರಿಯಾಗಿದೆ.
ನಿನ್ನೆ ಸೇನಾ ಹೆಲಿಕಾಪ್ಟರ್​ ಪತನವಾದ ಬೆನ್ನಲ್ಲೇ ಇಡೀ ದೇಶವೇ ಒಗ್ಗಟ್ಟು ಪ್ರದರ್ಶಿಸಿ ಸೇನಾ ಮುಖ್ಯಸ್ಥರು ಹಾಗೂ ಅವರ ಸಿಬ್ಬಂದಿಯ ಚೇತರಿಕೆಗಾಗಿ ಪಾರ್ಥನೆ ಸಲ್ಲಿಸುತ್ತಿದ್ದರೆ, ನಿವೃತ್ತ ಕರ್ನಲ್​ ಬಲ್ಜಿತ್​ ಬಕ್ಷಿ, ಹೆಲಿಕಾಪ್ಟರ್​ ಪತನವನ್ನು ಕರ್ಮಕ್ಕೆ ಹೋಲಿಸಿ ಟ್ವೀಟ್​ ಮಾಡಿದ್ದರು. ಒಂದೆಡೆ ಬಿಪಿನ್​ ರಾವತ್​ ಸೇರಿ ಅವರ ಸಿಬ್ಬಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, “ಕರ್ಮವೂ ಜನರೊಂದಿಗೆ ವ್ಯವಹರಿಸಲು ತನ್ನದೇಯಾದ ಮಾರ್ಗವನ್ನು ಹೊಂದಿದೆ” ಎಂದು ಬಲ್ಜಿತ್​ ಬಕ್ಷಿ ಅವರು ಟ್ವೀಟ್​ ಮಾಡುವ ಮೂಲಕ ತಮ್ಮ ಸಣ್ಣತನವನ್ನು ಪ್ರದರ್ಶಿಸಿ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇನ್ನು ಬಕ್ಷಿ ಅವರು ಟ್ವೀಟ್​ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿದ್ದರೂ, ಅವರು ಟ್ವೀಟ್​ ಮಾಡಿದ್ದ ಸಮಯ ಅದರ ಹಿಂದಿನ ಉದ್ದೇಶವನ್ನು ಸಾರಿ ಹೇಳುತ್ತಿತ್ತು. ಯಾವಾಗ ಟ್ವೀಟ್​ ಎಲ್ಲಡೆ ವೈರಲ್​ ಆಗಿ ಸಾಕಷ್ಟು ಟೀಕೆಗಳು ಹರಿದುಬರಲು ಆರಂಭಿಸಿತೋ ತಕ್ಷಣ ಟ್ವೀಟ್​ ಅನ್ನು ಬಕ್ಷಿ ಅವರು ಡಿಲೀಟ್​ ಮಾಡಿದ್ದಾರೆ. ಆದರೂ, ಟ್ವೀಟ್​ನ ಸ್ಕ್ರೀನ್​ಶಾಟ್​ ಎಲ್ಲೆಡೆ ವೈರಲ್​ ಆಗುತ್ತಿದ್ದು, ಟೀಕೆಗಳು ವ್ಯಕ್ತವಾಗುತ್ತಿವೆ.
Not a mockery of an either an individual or Indian Army but honestly Col. Baljit Bakshi mocked his upbringing .
भारतीय सेना गर्व था, हैं और रहेगा!pic.twitter.com/1eWEVPBjta
— अणिमा सोनकर (@AnimaSonkar)December 8, 2021

ನಿನ್ನೆ ನಡೆದಿದ್ದೇನು?ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್​ಗೆಂದು ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್​, ಬ್ರಿಗೇಡಿಯರ್​ ಎಲ್​.ಎಸ್​.ಲಿಡ್ಡರ್​, ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​, ನಾಯಕ್​ ಗುರುಸೇವಕ್​ ಸಿಂಗ್, ನಾಯಕ್​ ಜಿತೇಂದರ್​ ಕುಮಾರ್​, ಲ್ಯಾನ್ಸ್ ನಾಯಕ್​ ವಿವೇಕ್ ಕುಮಾರ್​, ಲ್ಯಾನ್ಸ್ ನಾಯಕ್​ ಬಿ ಸಾಯ್​ತೇಜ್​, ಹವಲ್ದಾರ್​ ಸತ್ಪಾಲ್​ ಸೇರಿದಂತೆ 14 ಮಂದಿ ಬುಧವಾರ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ​ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್​ ಪತನಗೊಂಡು ಬಿಪಿನ್​ ರಾವತ್​ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಸಿಡಿಎಸ್​ ಬಿಪಿನ್​ ರಾವತ್​ ನಿಧನಕ್ಕೇ ಇಡೀ ದೇಶವೇ ಕಂಬನಿ ಮಿಡಿದಿದೆ.(ಏಜೆನ್ಸೀಸ್​)
ಬಿಪಿನ್​ ರಾವತ್​ ಪ್ರಯಾಣಿಸುತ್ತಿದ್ದ ಕಾಪ್ಟರ್​ Mi-17V5 ಗೆ ಉಂಟು ವಿಶಿಷ್ಟ ಹಿನ್ನೆಲೆ: ಆದರೂ ಹೆಲಿಕಾಪ್ಟರ್​ ಪತನ ಆಗಿದ್ದೇಕೆ?

ಸೇನಾ ಹೆಲಿಕಾಪ್ಟರ್​ ದುರಂತ: ಸಾವು-ಬದುಕಿನ ನಡುವೆ ಶೌರ್ಯಚಕ್ರ ಪುರಸ್ಕೃತ, ಕ್ಯಾಪ್ಟನ್​​ ವರುಣ್​​​ ಸಿಂಗ್​​​​ ಹೋರಾಟ

ಹೆಲಿಕಾಪ್ಟರ್ ಪತನ; ಕೇಂದ್ರ ಸರ್ಕಾರ ತನಿಖೆಗೆ ಆದೇಶ

ಕೊಡಗಿನ ಮೇಲೆ ರಾವತ್​ಗೆ ವಿಶೇಷ ಪ್ರೀತಿ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × five =
Remember me
